ಮೈಸೂರು ಜಿಲ್ಲೆ, ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮಾಯಕನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಎರಡು ವರ್ಷ ಜೈಲಿಗೆ ಕಳುಹಿಸಿದ್ದ ಪ್ರಕರಣದಲ್ಲಿ ಇನ್ಸ್ಪೆಕ್ಟರ್, ಇಬ್ಬರು ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ.
ಕುಶಾಲನಗರ ತಾಲ್ಲೂಕಿನ ಜೇನು ಕುರುಬ ಸಮುದಾಯದ ಸುರೇಶ್ ವಿರುದ್ಧ ಅಂದಿನ ಪೊಲೀಸ್ ಅಧಿಕಾರಿ ಬಿ. ಜಿ. ಪ್ರಕಾಶ್ ಸುಳ್ಳು ಚಾರ್ಜ್ ಶೀಟ್ ಸಲ್ಲಿಸಿದ್ದರು. ಪಿರಿಯಾಪಟ್ಟಣ ತಾಲ್ಲೂಕು, ಬೆಟ್ಟದಪುರ ವ್ಯಾಪ್ತಿಯಲ್ಲಿ ಮಹಿಳೆಯ ಮೃತದೇಹ ದೊರೆತಿತ್ತು. ಇದೇ ಸಂದರ್ಭದಲ್ಲಿ ಕೊಡಗು ಜಿಲ್ಲೆಯ, ಕುಶಲನಗರ ತಾಲ್ಲೂಕಿನ ಬಸವನಹಳ್ಳಿ ಬಡಾವಣೆಯ ಸುರೇಶ್ 2020 ರ ನವೆಂಬರ್ 12 ರಂದು ಪತ್ನಿ ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನಲ್ಲಿ ಗಣೇಶ್ ಎಂಬಾತನೇ ಪತ್ನಿ ಕಾಣೆಯಾಗಲು ಕಾರಣ ಎಂದು ನಮೂದಿಸಿದ್ದರು. ಆದರೆ, ಕಾಣೆಯಾಗಿದ್ದ ಮಲ್ಲಿಗೆ ತಾಯಿ ಮಗಳು ಕೊಲೆಯಾಗಿದ್ದಾಳೆ ಎಂದು ದೂರು ನೀಡಿದ್ದರು.
ಸರಿಯಾಗಿ ವಿಚಾರಣೆ ನಡೆಸದ ಒಂದಕ್ಕೊಂದು ಸಭಂದವಿರದ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಸುರೇಶ್ ಕೊಲೆ ಆರೋಪಿ ಎಂದು ಸುಳ್ಳು ಕಥೆ ಕಟ್ಟಿ ಘನ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ವಿಚಾರಣೆಯಲ್ಲಿ ಸಾಕ್ಷಿಗಳು, ಮಲ್ಲಿಗೆಯ ಮಕ್ಕಳು, ಸ್ಥಳೀಯರು ಮಲ್ಲಿಗೆ ಬದುಕಿರುವ ಬಗ್ಗೆ ಮನವಿ ಮಾಡಿದ್ದರು. ನ್ಯಾಯಾಲಯದಲ್ಲಿ ವಾದ ನಡೆದು ಕಡೆಗೆ 2025 ರ ಏಪ್ರಿಲ್ 2 ರಂದು ಸುರೇಶ್ ನಿರಪರಾಧಿ ಎಂತಲೂ, ಪೊಲೀಸರು ಸುಳ್ಳು ಚಾರ್ಜ್ ಶೀಟ್ ದಾಖಲಿಸಿರುವುದು ಸಾಬೀತಾಗಿತ್ತು. ಅಷ್ಟರಲ್ಲಿ ಅಮಾಯಕ ಸುರೇಶ್ ಎರಡು ವರ್ಷಗಳ ಕಾಲ ತಪ್ಪಿಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಿಯಾಗಿತ್ತು.
ಪ್ರಕರಣದಲ್ಲಿ ಸತ್ಯ ಹೊರಬಂದ ಬಳಿಕ ಸುರೇಶ್ ಬಿಡುಗಡೆಯಗಿದ್ದು ಈ ಪ್ರಕರಣ ಸಂಭಂದವಾಗಿ ಯಾವುದೇ ತನಿಖೆ ನಡೆಸದೆ ಜೇನು ಕುರುಬ ಸಮುದಾಯದ ಸುರೇಶ್ ಶಿಕ್ಷೆ ಅನುಭವಿಸುವಂತೆ ಮಾಡಿದ ಕುಶಲನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಿ. ಜಿ. ಪ್ರಕಾಶ್, ಮೈಸೂರು ಗ್ರಾಮಾಂತರ ಇಲವಾಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮಹೇಶ್ ಕುಮಾರ್ ಹಾಗೂ ಜಯಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರಕಾಶ್ ಎತ್ತಿನಮನಿ ಸೇರಿದಂತೆ ಮೂವರನ್ನು ಅಮಾನತು ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ?ಚಾಮರಾಜನಗರ | ಅಂಗನವಾಡಿಗಳಲ್ಲಿ ಗುಣಮಟ್ಟದ ಆಹಾರ, ಮೂಲ ಸೌಕರ್ಯಕ್ಕೆ ಕ್ರಮ ವಹಿಸಿ : ಸಂಸದ ಸುನೀಲ್ ಬೋಸ್
ಪ್ರಕರಣ ನಡೆದ ಸಂದರ್ಭದಲ್ಲಿ ಬಿ. ಜಿ. ಪ್ರಕಾಶ್ ಬೈಲುಕುಪ್ಪೆ ವೃತ್ತ ಇನ್ಸ್ಪೆಕ್ಟರ್, ಮಹೇಶ್ ಕುಮಾರ್ ಹಾಗೂ ಪ್ರಕಾಶ್ ಎತ್ತಿನಮನಿ ಬೆಟ್ಟದಪುರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಗಳಾಗಿ ಕರ್ತವ್ಯ ನಿರ್ವಹಿಸುತಿದ್ದರು.