ಜೂನ್ 9 ರಿಂದ 20ರ ವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-3 ಫಲಿತಾಂಶ ಪ್ರಕಟಗೊಂಡಿದ್ದು, 22,446 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿದ್ದರಿಂದ ಶಿಕ್ಷಣ ಇಲಾಖೆ ಇಂದೇ ಫಲಿತಾಂಶ ಪ್ರಕಟಿಸಿದೆ. 20.22% ಫಲಿತಾಂಶ ದಾಖಲಾಗಿದೆ.
ಮೂರು ಪರೀಕ್ಷೆ ಸೇರಿ ಒಟ್ಟಾರೆ 79.81% ಫಲಿತಾಂಶ ಬಂದಿದೆ. ಮೂರು ಪರೀಕ್ಷೆಗಳಿಗೆ ಹಾಜರಾದ 7,09,968 ವಿದ್ಯಾರ್ಥಿಗಳ ಪೈಕಿ 5,66,636 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ karresults.nic.in ಅಥವಾ kseab.karnataka.gov.in ಗೆ ಭೇಟಿ ನೀಡಿ ಫಲಿತಾಂಶ ನೋಡಬಹುದು.