ರಾಯಚೂರು ತಾಲ್ಲೂಕಿನ ಮರ್ಚೇಡ್ ಗ್ರಾಮದ ಕೆರೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು,ಕೂಡಲೇ ಗ್ರಾಮಸ್ಥರು ಮೀನುಗಾರರ ಸಹಾಯದಿಂದ ಮೊಸಳೆಯನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಮೊಸಳೆ ಕಂಡ ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮೊಸಳೆ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮೀನುಗಾರರ ಸಹಾಯದಿಂದ ಕೆರೆಗೆ ಹಾಕಿದ್ದ ಬಲೆಗೆ ಮೊಸಳೆ ಸೆರೆಯಾಗಿದೆ ಎನ್ನಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದ ಮೊಸಳೆಯನ್ನು ಸುರಕ್ಷಿತವಾಗಿ ಕೃಷ್ಣಾನದಿಗೆ ಬಿಟ್ಟಿದ್ದಾರೆ. ಕಳೆದ ಐದಾರು ವರ್ಷಗಳ ಹಿಂದೆಯೂ ಸಹ ಮರ್ಚೇಡ್ ಗ್ರಾಮದ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿತ್ತು, ಅದನ್ನು ಸೆರೆ ಹಿಡಿದು ಕೃಷ್ಣ ನದಿಗೆ ಬಿಡಲಾಗಿತ್ತು. ಮರ್ಚೇಡ್ ಗ್ರಾಮದ ಕೆರೆಗೆ ದೊಡ್ಡ ಹಳ್ಳದ ಸಂಪರ್ಕ ಇರುವುದರಿಂದ ಕೃಷ್ಣಾನದಿ ಮೂಲಕ ಕೆರೆಗೆ ಸೇರಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜಿಲ್ಲೆಯ 23 ಗ್ರಾಮಗಳಲ್ಲಿ ಮೊಹರಂ ಆಚರಣೆ ನಿಷೇಧ: ಜಿಲ್ಲಾಧಿಕಾರಿ ಆದೇಶ
ಈ ಸಂದರ್ಭದಲ್ಲಿ ವಲಯ ಅರಣ್ಯ ಅಧಿಕಾರಿ ರಾಜೇಶ್ ನಾಯಕ, ಗಸ್ತು ಅರಣ್ಯ ಪಾಲಕರ ಬಸವರಾಜ್, ಸೇರಿದಂತೆ ಅಧಿಕಾರಿಗಳು ಮೀನುಗಾರರು, ಗ್ರಾಮಸ್ಥರು ಇದ್ದರು.
