ಗದಗ ಜಿಲ್ಲೆಯ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಮಲ್ಲವ್ವ ಶಿ ಮರಿಯಣ್ಣವರ ಹಾಗೂ ಉಪಾಧ್ಯಕ್ಷರಾಗಿ ಈರಮ್ಮ ಮುದಿಗ್ರೌಡ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮ ಪಂಚಾಯತಿಯ ಆಧ್ಯಕ್ಷ ಸ್ಥಾನವು ಮಹಿಳೆಯರಿಗೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಎರಡೂ ಸ್ಥಾನಗಳಿಗೆ ಬೇರಾರು ಸ್ಪರ್ಧಿಸದ ಕಾರಣ, ಮಲ್ಲವ್ವ ಮತ್ತು ಈರಮ್ಮ ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲವ್ವ ಮಾತನಾಡಿ, “ಸರ್ವ ಸದಸ್ಯರು ಹಾಗೂ ಅಧಿಕಾರಿಗಳ ವಿಸ್ವಾಶ ಪಡೆದು ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಶ್ರಮವಹಿಸುತ್ತೇನೆ” ಎಂದರು.
ಈ ಸಂದರ್ಭದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶೈನಾಜ್ ಮುಜಾವರ್, ಮಾಜಿ ಅಧ್ಯಕ್ಷ ಲಕ್ಷ್ಮಣ ಕಂಬಳಿ, ಸದಸ್ಯರಾದ ಬಾಪು ಹಿರೇಗೌಡ್ರ ಶ್ರುತಿ ಬ್ಯಾಳಿ, ನಿರ್ಮಲಾ ತಳವಾರ, ಶಂಕ್ರಮ್ಮ ಚಲವಾದಿ ಹಾಗೂ ಗ್ರಾಮದ ಹಿರಿಯ ಟಿ.ಎಸ್ ಚನ್ನಪ್ಪಗೌಡ್ರ, ಎಸ್ ಎಸ್ ಯರಗಟ್ಟಿ, ಎಸ್.ವಿ ರಾಯರಡ್ಡಿ, ಪಡಿಯಪ್ಪ ಮರಿಯಣ್ಣವರ, ಹನುಮಂತ ಚಾವಡಿ, ಬಸವರಾಜ್ ಹೊಂಗಲ ರವಿ ಯರಗಟ್ಟಿ, ಮಲ್ಲಿಕಾರ್ಜುನ ಸಾತನ್ನವರ, ಮಲ್ಲನಗೌಡ ಸರ್ವಮಾನೆದ, ಮೋಹನ ಬಾಚಿ, ಪಕ್ಕೀರಪ್ಪ ಹೊಸಗಾಣಿಗೇರ ಸೇರಿದಂತೆ ಅನೇಕರು ಇದ್ದರು.