ವಿದ್ಯುತ್ ತಂತಿ ತಗುಲಿ ಎರಡು ಎತ್ತು ಹಾಗೂ 16 ಕುರಿಗಳು ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ನಡೆದಿದೆ. ಗ್ರಾಮಕ್ಕೆ ತಹಶೀಲ್ದಾರ್ ಧನಂಜಯ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಗ್ರಾಮದ ಯಂಕಪ್ಪ ದಾಸರ ಅವರಿಗೆ ಸೇರಿದ ಎತ್ತುಗಳು ಹಾಗೂ ಹುಲುಗಪ್ಪ ಮತ್ತು ಕನಕಪ್ಪ ಅವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
“ಜಾನುವಾರುಗಳನ್ನು ಕಳೆದುಕೊಂಡ ರೈತರಿಗೆ ಜೆಸ್ಕಾಂ ವತಿಯಿಂದ ಪರಿಹಾರ ಒದಗಿಸಲಾಗುವುದು” ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ತಹಶೀಲ್ದಾರ್ ಭೇಟಿಯ ವೇಳೆ, ಕಂದಾಯ ನಿರೀಕ್ಷಕ ಸೈಯದ ಬಷೀರುದ್ದೀನ್, ಗ್ರಾಮ ಆಡಳಿತಾಧಿಕಾರಿ ಗಡ್ಡಿಕುಮಾರ, ಶಿವರಾಜ ಭೋವಿ, ಜೆಸ್ಕಾಂ ಇಲಾಖೆಯ ಎಂಜಿನಿಯರ್ ಆನಂದ ಕುಂಬಾರ, ಪಶು ಸಂಗೋಪನೆ ಇಲಾಖೆಯ ಡಾ. ರಶೀದ್ ಮೀಯಾ,
ಸಿಬ್ಬಂದಿ ಮಲಕಪ್ಪ, ಪಟ್ಟಣ ಪಂಚಾಯಿತಿ ಸದಸ್ಯ ರಾಕೇಶ ಕಂಪ್ಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ಕಲ್ಲಬಾಗಿಲಮಠ, ಪ್ರಮುಖರಾದ ಸಿದ್ದಪ್ಪ ನೀರ್ಲೂಟಿ, ಕನಕಪ್ಪ ಯಾದವ, ನಾಗೇಶ ಉಪ್ಪಾರ, ಪರಸಪ್ಪ ಚೌಡ್ಕಿ,
ಇತರರು ಇದ್ದರು.