ಭಾರತದ ಜಾತಿವ್ಯವಸ್ಥೆ ಹಾಗೂ ಅಭಿವೃದ್ಧಿ ತಾರತಮ್ಯದ ಮುಂದುವರೆದ ರೂಪವೇ ನಗರದಲ್ಲಿರುವ ಕೊಳೆಗೇರಿಗಳು. ಹಳ್ಳಿಗಳಲ್ಲಿ ಬಿಟ್ಟಿ ಚಾಕರಿ ಮಾಡಲು ಹೇಗೆ ಕೇರಿಗಳಿವೆಯೋ ಹಾಗೆ ನಗರಗಳಲ್ಲಿ ನಾಗರಿಕ ಸಮಾಜಕ್ಕೆ ಸೇವೆ ನೀಡಲು ಅಥವಾ ನಗರಗಳಿಗೆ ಬಿಟ್ಟಿ ಚಾಕರಿ ಮಾಡಲು ಕೊಳೆಗೇರಿಗಳು ಜೀವಂತವಾಗಿವೆ. ಊರು ಬೆಳೆದಂತೆ ಪಟ್ಟಣವಾಗಿ ಪರಿಪರ್ತನೆಯಾಗಿ ಊರಿನಲ್ಲಿದ್ದ ಎಸ್.ಸಿ, ಎಸ್.ಟಿ/ಒಬಿಸಿ ಕೇರಿಗಳೇ ಇಂದು ನಗರಗಳಲ್ಲಿ ಕೊಳೆಗೇರಿಗಳಾಗಿವೆ ಹಾಗೂ ನಗರಗಳಿಗೆ ಬದುಕು ಕಟ್ಟಿಕೊಳ್ಳಲು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಂದ ಮತ್ತು ಅನ್ಯ ರಾಜ್ಯಗಳಿಂದ ಕೂಲಿ ಕೆಲಸಕ್ಕಾಗಿ ವಲಸೆ ಬರುವ ಜನರ…

ಎ. ನರಸಿಂಹಮೂರ್ತಿ
ತಮ್ಮ ವಿದ್ಯಾರ್ಥಿ ಜೀವನದಲ್ಲಿ ದಲಿತ ಸಂಘರ್ಷ ಸಮಿತಿಯ ಹೋರಾಟಗಳಿಂದ ಪ್ರಭಾವಿತರಾಗಿ ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಸಾಕ್ಷರತ ಮಿಷನ್‌ನಲ್ಲಿ ಸ್ವಯಂ ಸೇವಕರಾಗಿ ದುಡಿದ ಎ.ನರಸಿಂಹಮೂರ್ತಿಯವರು ಸ್ಲಂ ಜನಾಂದೋಲನ ಸಂಘಟನೆ ಕಟ್ಟಿ 2 ದಶಕಕ್ಕೂ ಹೆಚ್ಚು ಕಾಲ ಸ್ಲಂ ನಿವಾಸಿಗಳ ಹಕ್ಕುಗಳಿಗಾಗಿ ಹೋರಾಡಿದ್ದಾರೆ. ಜೊತೆಗೆ ತುಮಕೂರು ಗುತ್ತಿಗೆ ಪೌರಕಾರ್ಮಿಕರು, ಹಮಾಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಮತ್ತು ತೃತೀಯ ಲಿಂಗಿಗಳು, ಬೀದಿಬದಿ ಲೈಂಗಿಕ ಕಾರ್ಯಕರ್ತರ ಘನತೆಯ ಬದುಕಿಗಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.