ಒಡಿಶಾ ಪ್ರವಾಹ ಸ್ಥಿತಿ ಗಂಭೀರವಾಗುತ್ತಿದ್ದು ಬಾಲಸೋರ್‌ನ ಸುಮಾರು 100 ಗ್ರಾಮಗಳ ಮೇಲೆ ಪ್ರಭಾವ ಉಂಟಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ರಸ್ತೆಗಳು ಮತ್ತು ಹೊಲಗಳು ಜಲಾವೃತಗೊಂಡಿದ್ದು, ಜನರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಭಾರೀ ಮಳೆ ಸುರಿಯುತ್ತಿದ್ದು, ಜಾರ್ಖಂಡ್‌ನಿಂದ ನೀರು ಬಿಡುಗಡೆ ಮಾಡಲಾಗಿದೆ. ಈ ಬೆನ್ನಲ್ಲೇ ಸುಬರ್ಣರೇಖಾ ನದಿಯ ಸಮೀಪದ ಭೋಗ್ರೈ, ಬಲಿಯಾಪಾಲ್, ಜಲೇಶ್ವರ ಮತ್ತು ಬಸ್ತಾ ಎಂಬ ನಾಲ್ಕು ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಜಲಕಾ ನದಿಯಲ್ಲಿ ಪ್ರವಾಹ ಉಂಟಾಗಿ ಕೆಲವು ಹಳ್ಳಿಗಳು ಮತ್ತು ಬಾಲಸೋರ್ ಸದರ್ ಪ್ರದೇಶದ ಭಾಗದ ಮೇಲೆ ಪ್ರಭಾವ ಬೀರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಚಿಕ್ಕೋಡಿ | ಅಕ್ಕ ಪ್ರಿಯಾಂಕಾ ಬೆನ್ನಿಗೆ ನಿಂತ ತಮ್ಮ ರಾಹುಲ್, ʼಗೆಲುವು ಅಕ್ಕಂದೆʼ ಎನ್ನುತ್ತಿರುವ ಕಾರ್ಯಕರ್ತರು
ಸುಬರ್ಣರೇಖಾ ಮತ್ತು ಜಲಕಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದರೂ ಅಪಾಯಮಟ್ಟಕ್ಕಿಂತ ಕೆಳಕ್ಕಿಳಿದಿಲ್ಲ. ಬಸ್ತಾ, ಜಲೇಶ್ವರ, ಬಲಿಯಾಪಾಲ್, ಭೋಗ್ರೈಗೆ ಬಾಲಸೋರ್ ಜಿಲ್ಲಾಧಿಕಾರಿ ಮತ್ತು ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಈವರೆಗೆ 46 ಗ್ರಾಮ ಪಂಚಾಯತ್‌ಗಳು ಪ್ರವಾಹಕ್ಕೆ ತುತ್ತಾಗಿದ್ದು 2,916 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಈವರೆಗೆ 17 ನಿರಾಶ್ರಿತರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 300ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಈ ನಡುವೆ ಜುಲೈ 5ರವರೆಗೆ ಒಡಿಶಾದಲ್ಲಿ ಭಾರೀ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.
