ರಷ್ಯಾದ ತೈಲ ಮತ್ತು ಇಂಧನ ಉತ್ಪನ್ನಗಳನ್ನು ಖರೀದಿಸುವ ಚೀನಾ ಮತ್ತು ಭಾರತದಂತಹ ದೇಶಗಳ ಮೇಲೆ ಶೇ 500ರಷ್ಟು ಸುಂಕ ವಿಧಿಸಬಹುದಾದ ಸೆನೆಟ್ ಮಸೂದೆಗೆ ಅಮೆರಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದನೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ.
ರಷ್ಯಾ ವಿರುದ್ಧ ಕಠಿಣ ನಿರ್ಬಂಧಗಳ ಮಸೂದೆಯನ್ನು ಮತಕ್ಕಾಗಿ ಸೆನೆಟ್ ಮುಂದಿಡಬೇಕು ಎಂದು ಟ್ರಂಪ್ ನನಗೆ ಹೇಳಿದ್ದಾರೆ ಎಂದು ಅಮೆರಿಕದ ಸೆನೆಟರ್ ಲಿಂಡ್ಡೆ ಗ್ರಹಾಂ ಎಬಿಸಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ಟ್ರಂಪ್ ಅವರ ಈ ನಿರ್ಧಾರವನ್ನು ಒಂದು ದೊಡ್ಡ ಪ್ರಗತಿ ಎಂದು ಕರೆದಿರುವ ಅವರು, ಇದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಉಕ್ರೇನ್ ವಿರುದ್ಧದ ಯುದ್ಧದ ಕುರಿತು ಮಾತುಕತೆಗೆ ಒತ್ತಾಯಪೂರ್ವಕವಾಗಿ ಕರೆತರುವ ಪ್ರಯತ್ನಗಳ ಭಾಗವಾಗಿದೆ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪತ್ರಿಕಾ ದಿನಾಚರಣೆ: ಅತಿರೇಕ ಅಳಿಯುತ್ತದೆ, ಒಳಿತು ಉಳಿಯುತ್ತದೆ
‘ಈ ಮಸೂದೆಯ ಪರಿಣಾಮ ಹೇಗಿರುತ್ತದೆ ಎಂದರೆ ನೀವು ರಷ್ಯಾದಿಂದ ಉತ್ಪನ್ನಗಳನ್ನು ಖರೀದಿಸುತ್ತಿದ್ದರೆ, ಉಕ್ರೇನ್ಗೆ ನೆರವು ನೀಡದೇ ಇದ್ದರೆ, ಅಮೆರಿಕವು ನಿಮ್ಮ ದೇಶದಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ.500ರಷ್ಟು ಸುಂಕ ವಿಧಿಸುತ್ತದೆ. ಭಾರತ ಮತ್ತು ಚೀನಾ ರಷ್ಯಾದಿಂದ ಶೇ 70ರಷ್ಟು ತೈಲ ಖರೀದಿಸುತ್ತವೆ’ ಎಂದು ಗ್ರಹಾಂ ಹೇಳಿದ್ದಾರೆ.
ಆ ಮಸೂದೆ ಅಮೆರಿಕ ಸಂಸತ್ತಿನಲ್ಲಿ ಅಂಗೀಕಾರ ಪಡೆದು ಕಾನೂನಾಗಿ ಜಾರಿ ಮಾಡಲು ಸಹಿ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಟ್ರಂಪ್ ನಿರ್ಧರಿಸಬಹುದು ಎಂದು ಅವರು ಒತ್ತಿ ಹೇಳಿದ್ದಾರೆ.
ವರದಿಗಳ ಪ್ರಕಾರ ಭಾರತವು ಮೇ 2025 ರಲ್ಲಿ ರಷ್ಯಾದಿಂದ ಪಳೆಯುಳಿಕೆ ಇಂಧವನ್ನು ಖರೀದಿಸುತ್ತಿರುವ 2ನೇ ಅತೀ ದೊಡ್ಡ ರಾಷ್ಟ್ರವಾಗಿದೆ. ಭಾರತವು ಈ ತಿಂಗಳಲ್ಲಿ ಅಂದಾಜು 38 ಸಾವಿರ ಕೋಟಿ ರೂ. ಕೋಟಿ ಮೌಲ್ಯದ ಪಳೆಯುಳಿಕೆ ಇಂಧನವನ್ನು ರಷ್ಯಾದಿಂದ ಖರೀದಿಸಿದೆ.