ಧಾರವಾಡ ಜಿಲ್ಲೆಯ ಹಲವು ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಗಿದ್ದ ಸ್ಥಾನಗಳಿಗೆ ಚುನಾವಣ ನಡೆದಿದೆ. ಜಿಲ್ಲೆಯಲ್ಲಿ ಚುನಾವಣೆ ನಡೆದ ಗ್ರಾಮ ಪಂಚಾಯತಿಗಳ ಪೈಕಿ, ಏಳು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಧಾರವಾಡ ತಾಲೂಕಿನ ಕೋಟುರ ಗ್ರಾಮ ಪಂಚಾಯತಿಯ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಸಿದ್ದು, ವೀರಪ್ಪ ರಾಚಪ್ಪ ಗಾಣಿಗೇರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೊಟಬಾಗಿ ಗ್ರಾಮ ಪಂಚಾಯತಿಯ ಎರಡು ಸದಸ್ಯ ಸ್ಥಾನಗಳಿಗೆ ರುದ್ರಪ್ಪ ಅಣ್ಣಪ್ಪ ಮಾಳಿಗೇರಿ ಮತ್ತು ಶಕುಂತಲಾ ರುದ್ರಪ್ಪ ಭಂಗಿ ಆಯ್ಕೆಯಾಗಿದ್ದರೆ, ಜೀರಿಗವಾಡ ಗ್ರಾಮ ಪಂಚಾಯತಿಗೆ ಗೀತಾ ಗುರುಪುತ್ರ ಗೋವನಕೊಪ್ಪ ಆಯ್ಕೆಯಾಗಿದ್ದಾರೆ.
ಕಲಘಟಗಿ ತಾಲೂಕಿನ ಹೀರೆಹೊನ್ನಳ್ಳಿ ಗ್ರಾಮ ಪಂಚಾಯತಿಯ ಒಂದು ಸದಸ್ಯ ಸ್ಥಾನಕ್ಕೆ ಮಂಜುಳಾ ಬಸವರಾಜ ತಳವಾರ ಮತ್ತು ಬೀರವಳ್ಳಿ ಗ್ರಾಮ ಪಂಚಾಯತಿಯ ಒಂದು ಸದಸ್ಯ ಸ್ಥಾನಕ್ಕೆ ಕಲ್ಲವ್ವ ಕಲ್ಲಪ್ಪ ಮೇಲಿನಮನಿ ಅವರು ಅವಿರೋಧ ಆಯ್ಕೆಯಾಗಿದ್ದಾರೆ. ಮುಕ್ಕಲ ಗ್ರಾಮ ಪಂಚಾಯತಿಯ ಒಂದು ಸದಸ್ಯ ಸ್ಥಾನಕ್ಕೆ ಮತದಾನ ನಡೆದಿದ್ದು, ಜ್ಯೋತಿ ಮಲ್ಲಪ್ಪ ಗಾಡಗೋಳಿ ಆಯ್ಕೆಯಾಗಿದ್ದಾರೆ.
ಕುಂದುಗೊಳ ತಾಲೂಕಿನ ಕಮಡೊಳ್ಳಿ ಗ್ರಾಮ ಪಂಚಾಯಿತಿಯ ಒಂದು ಸ್ಥಾನಕ್ಕೆ ಖಲಂದರಸಾಬ ಹುಸೇನಸಾಬ್ ದರೂಬಾಯಿ ಮತ್ತು ಬು ತರ್ಲಘಟ್ಟ ಪಂಚಾಯತಿಯ ಒಂದು ಸ್ಥಾನಕ್ಕೆ ಲಕ್ಷ್ಮವ್ವ ಭೀಮಪ್ಪ ಗಾಣಿಗೇರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.