- ಕರೆ ಮಾಡಿದ್ದ ಲೊಕೇಷನ್ನಿಂದ 1 ಕಿ.ಮೀ ದೂರದಲ್ಲಿ ಇದ್ದ ಮಕ್ಕಳು
- ಸೆಟಲೈಟ್ ಬಸ್ ಸ್ಟಾಂಡ್ ಹತ್ತಿರ ಪತ್ತೆಯಾದ ಇಬ್ಬರು ಮಕ್ಕಳು
ಬೆಂಗಳೂರಿನಲ್ಲಿ ಶಾಲೆಗೆ ತೆರಳಿದ ಮಕ್ಕಳು ಆಟೋ ಹತ್ತಿ ಮನೆಗೆ ಬರುವ ವೇಳೆ ನಾಪತ್ತೆಯಾಗಿದ್ದರು. ವಿ.ವಿ ಪುರಂ ಠಾಣೆ ಪೊಲೀಸರು ಮೂರು ಗಂಟೆಯಲ್ಲಿ ಮಕ್ಕಳನ್ನು ಪತ್ತೆ ಮಾಡಿದ್ದಾರೆ.
ಶಾಲೆಯಿಂದ ಮನೆಗೆ ವಾಪಸ್ ಬರಲು ಇಬ್ಬರು ಮಕ್ಕಳು ಆಟೋ ಹತ್ತಿದ್ದಾರೆ. ಆಟೋ ಚಾಲಕ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಮಕ್ಕಳು ಆಟೋ ಇಳಿದು ಸ್ವಲ್ಪ ದೂರ ನಡೆದುಕೊಂಡು ಹೋಗಿದ್ದಾರೆ.
ತಾವು ಹೋದ ರಸ್ತೆಗೆ ಮರಳಿ ಬರಲು ದಾರಿ ಗೊತ್ತಾಗದೆ ಮಕ್ಕಳು ಸಾಕಷ್ಟು ಕಡೆ ಸುತ್ತಾಟ ನಡೆಸಿದ್ದಾರೆ. ಕೊನೆಗೆ ಭಯಗೊಂಡು ದಾರಿಯಲ್ಲಿ ಹೋಗುತ್ತಿದ್ದ ಓರ್ವ ಯುವತಿಗೆ ತಾವು ದಾರಿ ತಪ್ಪಿದ ಬಗ್ಗೆ ತಿಳಿಸಿದ್ದಾರೆ. ಯುವತಿ ಮಕ್ಕಳ ಬಗ್ಗೆ ಎಲ್ಲ ವಿಚಾರಿಸಿದ್ದಾಳೆ. ಈ ವೇಳೆ, ಐದು ವರ್ಷದ ಬಾಲಕ ತನ್ನ ತಂದೆಯ ಮೊಬೈಲ್ ನಂಬರ್ ಗೊತ್ತಿದೆ ಎಂದು ತಿಳಿಸಿದ್ದಾನೆ. ಯುವತಿ ಅಲ್ಲೇ ಇದ್ದ ಓರ್ವ ವ್ಯಕ್ತಿಗೆ ಕರೆ ಮಾಡಿಕೊಡುವಂತೆ ವಿನಂತಿಸಿದ್ದಾಳೆ.
ಕರೆ ಮಾಡಿದ ವ್ಯಕ್ತಿ ನಿಮ್ಮ ಮಕ್ಕಳು ಸೆಟಲೈಟ್ ಬಸ್ಸ್ಟ್ಯಾಂಡ್ ಹತ್ತಿರ ಇದ್ದಾರೆ ಎಂದು ಹೇಳಿ ಕರೆ ಕಟ್ ಮಾಡಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು ಈ ಬಗ್ಗೆ ವಿ.ವಿ ಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಪರಿಚಿತ ವ್ಯಕ್ತಿ ಕರೆ ಮಾಡಿದ್ದ ಮೊಬೈಲ್ ನಂಬರ್ ಪಡೆದ ಪೊಲೀಸರು ಟವರ್ ಲೋಕೆಷನ್ ಮೂಲಕ ವಿಳಾಸ ಪತ್ತೆ ಮಾಡಿದ್ದಾರೆ. 20 ಪೊಲೀಸ್ ಸಿಬ್ಬಂದಿ ಮಕ್ಕಳಿಗಾಗಿ ಸೆಟಲೈಟ್ ಬಸ್ ನಿಲ್ದಾಣದ ಆಸುಪಾಸಿನಲ್ಲಿ ಹುಡುಕಾಟ ನಡೆಸಿದ್ದಾರೆ.
ಕರೆ ಮಾಡಿದ್ದ ಲೋಕೇಷನ್ನಿಂದ 1 ಕಿ.ಮೀ ದೂರದಲ್ಲಿ ಇಬ್ಬರು ಮಕ್ಕಳು ನಿಂತಿದ್ದರು. ಇದನ್ನು ಕಂಡ ಪೊಲೀಸರು ನಂತರ ಮಕ್ಕಳನ್ನು ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕರ್ನಾಟಕ ರಾಜ್ಯಪಾಲರನ್ನು ಬಿಟ್ಟು ಹೈದರಾಬಾದ್ಗೆ ಹಾರಿದ ವಿಮಾನ; ದೂರು ದಾಖಲು
ಮಕ್ಕಳು ಸುರಕ್ಷಿತವಾಗಿ ಸಿಕ್ಕಿದ್ದು, ಬಾಲಕ ತನ್ನ ತಂದೆಯ ಮೊಬೈಲ್ ನಂಬರ್ ನೀಡಿ ಕರೆ ಮಾಡಿಸಿದ್ದರಿಂದ ಪೊಲೀಸರು ಮೂರು ಗಂಟೆಗಳಲ್ಲಿ ಮಕ್ಕಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಷ್ಟೆಲ್ಲಾ ಗೊಂದಲ ಸೃಷ್ಟಿ ಮಾಡಿದ ವ್ಯಕ್ತಿ ಯಾರೆಂದು ಸ್ಪಷ್ಟವಾಗುತ್ತಿದೆ. ಆಟೋ ಚಾಲಕರ ನಿರ್ಲಕ್ಷಕ್ಕೆ ಸಮಸ್ಯೆ ಉಂತಾಯಿತೆಂದು ಅನಿಸುವುದಿಲ್ಲವೇ? ಹಾಗಿದ್ದರೆ ಪೊಲೀಸ್ ಇಲಾಖೆ ಆತನ ಮೇಲೆ ಏನು ಕ್ರಮ ಕೈಗೊಂಡಿತು? ತಿಳಿಯಲಿಲ್ಲ. ಚಿಕ್ಕ ಮಕ್ಕಳನ್ನು ಮನೆವರೆಗೆ ತಲುಪಿಸುವ ಜವಾಬ್ದಾರಿಕೆ ಅವನಿಗೆ ಇರಬೇಕಲ್ಲ?