ಮೈಸೂರಿನ ಕುವೆಂಪುನಗರದಲ್ಲಿರುವ ರಾಘವೇಂದ್ರ ಸ್ವಾಮಿ ಮಠದ ಹತ್ತಿರದ ಅರಳಿಕಟ್ಟೆಯಲ್ಲಿ ಬನವಾಸಿ ತೋಟದಲ್ಲಿ ಬೆಳೆದಿರುವ ಮಾವಿನ ಹಣ್ಣುಗಳ ಸಂತೆ ನಡೆಯಲಿದೆ.
2025 ರ ಜುಲೈ 3 ರಿಂದ 4 ರ ವರೆಗೆ ಬೆಳಗ್ಗೆ 10-30 ರಿಂದ ಸಂಜೆ 7 ರ ತನಕ ಮಾವಿನ ಹಣ್ಣುಗಳ ಸಂತೆ ನಡೆಯಲಿದೆ ಎಂದು ಕೃಷಿ ತಜ್ಞ ಅವಿನಾಶ್ ಪತ್ರಿಕಾ ಹೇಳಿಕೆ ನೀಡಿರುತ್ತಾರೆ.
ಬನವಾಸಿ ತೋಟದಲ್ಲಿ ಕಳೆದ 30 ವರ್ಷಗಳಿಂದ ಯಾವುದೇ ರಾಸಾಯನಿಕಗಳನ್ನು ಬಳಸದೆ ತೆಂಗು, ಅಡಿಕೆ, ಮಾವು, ಬಾಳೆ ಪಪ್ಪಾಯ, ಮೊಸಂಬಿ, ಕಿತ್ತಳೆ, ಸಪೋಟ ಹಾಗೂ ತರಕಾರಿಗಳನ್ನು ಬೆಳಕಿನ ಬೇಸಾಯದಡಿ ಕೃಷಿಯನ್ನು ಮಾಡಲಾಗುತ್ತಿದೆ.
ರಾಸಾಯನಿಕ ಮುಕ್ತ ಮಾವಿನ ಹಣ್ಣಿನ ಜೊತೆಗೆ ತೋಟದಲ್ಲಿ ಬೆಳೆಯಲಾದ ಇನ್ನಿತರ ಹಣ್ಣುಗಳು, ತರಕಾರಿ ನಾಳಿನ ಸಂತೆಯಲ್ಲಿ ದೊರೆಯಲಿದ್ದು ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕಾಗಿ ಕೋರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಸಚಿವ ಮಹದೇವಪ್ಪ ಸುತ್ತ ಜಾತೀಯತೆ ಆರೋಪ; ಕಾಂಗ್ರೆಸ್ಸಿಗರು ಹೇಳಿದ್ದೇನು?
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8197856132.