ಹಾವೇರಿ | ಪುಸ್ತಕಗಳು ನಮ್ಮ ವ್ಯಕ್ತಿತ್ವ ನಿರ್ಮಾಣದ ಶಿಲ್ಪಿಗಳು: ಡಾ.ವಿಜಯಮಹಾಂತೇಶ ದಾನಮ್ಮನವರ

Date:

Advertisements

“ಒತ್ತಡದ ಬದುಕಿನಲ್ಲಿ ಪುಸ್ತಕಗಳ ಓದು ನೆಮ್ಮದಿಯನ್ನು ನೀಡುತ್ತದೆ. ಆಂತರಿಕ ವಿಕಸನದಿಂದ ಮೌಲ್ಯಗಳನ್ನು ತುಂಬಿಕೊಳ್ಳಲು ಸಹಾಯವಾಗುತ್ತದೆ. ಇದರಿಂದ ಉತ್ತಮ ವ್ಯಕ್ತಿತ್ವ ರೂಪುಗೊಂಡು ಸಮಾಜದ ಬದಲಾವಣೆಗೆ ಕಾರಣವಾಗುತ್ತದೆ. ನಾವೆಲ್ಲಾರೂ ಪುಸ್ತಕಗಳನ್ನ ಪ್ರೀತಿಸುವುದನ್ನು ಕಲಿಯಬೇಕಿದೆ. ಏಕೆಂದರೆ ಪುಸ್ತಕಗಳು ನಮ್ಮ ವ್ಯಕ್ತಿತ್ವ ನಿರ್ಮಾಣದ ಶಿಲ್ಪಿಗಳು” ಎಂದು ಹಾವೇರಿ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಕರೆ ನೀಡಿದರು.

ಹಾವೇರಿ ಪಟ್ಟಣದ ಭಾವ ಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಸಾಹಿತಿ ಕಲಾವಿದರ ಬಳಗ ಮತ್ತು ಹಂಚಿನಮನಿ ಆರ್ಟ್ ಗ್ಯಾಲರಿ ಇವರ ಸಹಯೋಗದಲ್ಲಿ ಆರ್ಟ್ ಗ್ಯಾಲರಿಯಲ್ಲಿ ನಡೆದ ಪುಸ್ತಕ ಪ್ರೀತಿ -5′ ಆಯ್ದ ಮೂವರು ಬರಹಗಾರರ ಹೊಸ ಪುಸ್ತಕಗಳ ವಿಮರ್ಶೆ ಮತ್ತು ಓದುಗ- ಲೇಖಕರೊಂದಿಗಿನ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ವರ್ಷಕ್ಕೆ ಸುಮಾರು 1200 ಪುಸ್ತಕಗಳು ಬಿಡುಗಡೆಯಾಗುತ್ತವೆ. ಅದರಲ್ಲಿ ಒಂದಷ್ಟು ಪುಸ್ತಕಗಳ ವಿಮರ್ಶೆ ನಡೆಯುತ್ತವೆ ಯೋ ಹೊರತು, ಬಹುತೇಕ ಪುಸ್ತಕಗಳ ಕುರಿತು ವಿಮರ್ಶೆ ಮತ್ತು ಸಂವಾದ ನಡೆಯುವುದೇ ಇಲ್ಲ. ಇದರಿಂದ ಲೇಖಕರು ಮತ್ತು ಓದುಗರ ಮಧ್ಯೆ ಸಂಪರ್ಕವಾಗುವುದಿಲ್ಲ. ಈ ದೃಷ್ಟಿಯಲ್ಲಿ ಪುಸ್ತಕ ಪ್ರೀತಿ ಕಾರ್ಯಕ್ರಮ ಉತ್ತಮವಾಗಿದ್ದು ಲೇಖಕರು ಓದುಗರು ಮತ್ತು ವಿಮರ್ಶಕರು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚಿಸುವುದರಿಂದ ಸಮಾಜಕ್ಕೆ ಉತ್ತಮ ಸಂದೇಶವನ್ನು ಕಳಿಸಬಹುದು” ಎಂದು ಹೇಳಿದರು.

Advertisements

ಹಾವೇರಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ವಿಭಿನ್ನವಾಗಿದ್ದು, ಮುಂದಿನ ದಿನಗಳಲ್ಲಿ ಇದು ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಅತ್ಯುತ್ತಮ ಚಿಂತನೆಗಳನ್ನು ಸಮಾಜಕ್ಕೆ ನೀಡಬೇಕು ” ಎಂದು ಆಶಿಸಿದರು.

ಮೊದಲಿಗೆ ಪ್ರಾಸ್ತಾವಿಕ ನುಡಿಗಳನ್ನಾಡಿದ ಭಾವ ಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಶೇಖರ ಭಜಂತ್ರಿ, “ಪುಸ್ತಕ ಪ್ರೀತಿ ಕಾರ್ಯಕ್ರಮ ನಡೆದು ಬಂದ ಬಗೆಯನ್ನು ವಿವರಿಸಿ ಈ ಸರಣಿಯ ಐದನೇ ಕಾರ್ಯಕ್ರಮವಾಗಿದೆ. 21 ಪುಸ್ತಕಗಳ ವಿಮರ್ಶೆ ನಡೆದು ಓದುಗರು ಲೇಖಕರು ಮತ್ತು ವಿಮರ್ಶಕರನ್ನು ಒಂದೆಡೆ ತಂದು ಚರ್ಚಿಸುವುದರಿಂದ ಅನೇಕರಿಗೆ ಬರವಣಿಗೆಗೆ ಪ್ರೇರಣೆಯನ್ನು ನೀಡಿದೆ. ನಮ್ಮ ಇತಿಮಿತಿಗಳ ಆಚೆಗೂ ಒಂದು ಕಡೆ ಸೇರುವುದರಿಂದ ನಮ್ಮ ಆದ್ಯತೆ, ಭಾಧ್ಯತೆ ಮತ್ತು ಸಾಧ್ಯತೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಬರಹಗಾರರಿಗೆ ಸಮಾಜದಲ್ಲಿ ನಡೆಯುವ ಘಟನೆಗಳ ಕುರಿತು ಸೂಕ್ಷ್ಮ ಸಂವೇದನೆ ಇದ್ದರೆ ಅದರ ಗಾಯಗಳಿಗೆ ಚಿಕಿತ್ಸೆ ನೀಡುವ ಸಾಹಿತ್ಯ ರಚಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದರು.

ಸುನಂದ ಕಡಮೆಯವರ ಹೈವೇ- 63 ಪುಸ್ತಕ ಕುರಿತು ಲೇಖಕಿ ತೇಜವತಿ ಎಚ್. ಡಿ. ಅವರು ಮಾತನಾಡಿ, “ಕಾದಂಬರಿ ಪಶ್ಚಿಮ ಘಟ್ಟದ ಕುಟುಂಬಗಳಲ್ಲಿ ನಡೆಯುವ ಕಥೆಗಳಲ್ಲಿನ ವಿವಿಧ ಪಾತ್ರಗಳ ಪ್ರೀತಿ, ಪ್ರಣಯ, ಆರ್ಧತೆ, ತಳಮಳ ತಲ್ಲಣಗಳನ್ನ ಹೊರಹಾಕುತ್ತದೆ. ಒಂದೊಂದು ಪಾತ್ರ, ಸನ್ನಿವೇಶವೂ ಕುತೂಹಲಕಾರಿಯಾಗಿದ್ದು ಕಾದಂಬರಿ ಓದಿಸಿಕೊಂಡು ಹೋಗುವ ಗುಣ ಹೊಂದಿದೆ. ವಿಚಿತ್ರ ತಿರುವು ಮತ್ತು ದೃಶ್ಯಗಳ ಸಂಯೋಜನೆಯಿಂದ ಒಂದು ಚಲನಚಿತ್ರವನ್ನು ವೀಕ್ಷಿಸಿದಂತೆ ಭಾಸವಾಗುತ್ತದೆ. ಅಂತಹ ಕುತೂಹಲವನ್ನು ಲೇಖಕಿ ಉತ್ತಮವಾಗಿ ಚಿತ್ರಿಸಿದ್ದಾರೆ” ಎಂದರು.

ಇಸ್ಮಾಯಿಲ್ ತಳಕಲ್ಲರವರ ಬೆತ್ತಲೆ ಸಂತ ಕೃತಿ ಕುರಿತು ಮಂಜಯ್ಯ ದೇವರಮನಿ ಮಾತನಾಡಿ, “ಇಲ್ಲಿರುವ ಕತೆಗಳಲ್ಲಿ ಪ್ರಾದೇಶಿಕತೆಯ ಸೊಗಡಿದೆ. ತನ್ನ ಸುತ್ತಮುತ್ತಲಿನ ಘಟನೆಗಳನ್ನು ಕತೆಯಾಗಿಸಿದ ಕುತೂಹಲವಿದೆ. ಕೋವಿಡ್ ಕಾಲದಲ್ಲಿ ಮನುಷ್ಯರ ಸಂಬಂಧಗಳು ನಾಟಕೀಯ ತಿರುವು ತೆಗೆದುಕೊಂಡು ಅಮಾನವೀಯತೆಯನ್ನು ಪ್ರದರ್ಶಿಸಿದ ಕಥೆಗಳಿವೆ. ಮೂರ್ತದಿಂದ ಅಮೂರ್ತದೆಡೆಗೆ ಸಾಗುವ ಶಂಕರನ ಕನಸಿನಲ್ಲಿ ಬರುವ ಬೆತ್ತಲೆ ಸಂತ ಅವನನ್ನು ಸಂತನಾಗಿಸಿದ ಪರಿ ವಿಶೇಷವಾಗಿದೆ” ಎಂದರು.

ಅನಿತಾ ಮಂಜುನಾಥ ರವರ ಬೆಳಕಿನ ಬೆನ್ನ ಹಿಂದೆ ಕೃತಿಯ ಕುರಿತು ಸಾಹಿತಿ ಪ್ರಕಾಶ ಕಡಮೆ ಮಾತನಾಡಿ, ಕೃತಿಯಲ್ಲಿನ ಸರಳವಾದ ಹನಿಗವಿತೆಗಳಲ್ಲಿ ಬದುಕಿನ ಏರಿಳಿತಗಳಿವೆ. ಸಮಸ್ಯೆಗಳನ್ನು ಭೇದಿಸಿಕೊಂಡು ಸಾಧಿಸುವ ಹಠವಿದೆ. ಎಲ್ಲರಲ್ಲೂ ಪ್ರೀತಿ ಕಾಣುವ ಹಂಬಲವಿದೆ. ಭಕ್ತಿಯ ಶಕ್ತಿಯಿದೆ. ನೋವು, ನಲಿವು, ಪ್ರೀತಿ ಮತ್ತು ಮೌಲ್ಯಗಳ ಹುಡುಕಾಟವಿದೆ” ಎಂದು ಅಭಿಪ್ರಾಯಪಟ್ಟರು.

ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿಯವರು ಮಾತನಾಡಿ, “ಸಾಹಿತಿಗಳು ನಮ್ಮ ನೆಲದ ಕಲೆ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿ, ಬದುಕಿನ ಮೌಲ್ಯಗಳನ್ನು ದಾಖಲಿಸುತ್ತಾರೆ. ನಮ್ಮ ವಿಶ್ವವಿದ್ಯಾಲಯದಿಂದ ಜಿಲ್ಲೆಯ ಎಲ್ಲಾ ಸಾಹಿತಿಗಳ ಮಾಹಿತಿಯನ್ನು ದಾಖಲಿಸಲು ಬಯಸಿದ್ದೇವೆ. ಪುಸ್ತಕ ಪ್ರೀತಿ ನಮ್ಮನ್ನು ಎತ್ತರಕ್ಕೆ ಕರೆದೊಯ್ಯುತ್ತದೆ.

ಈ ಸುದ್ದಿ ಓದಿದ್ದೀರಾ? ಗದಗ | ರಾಜ್ಯ ಸರಕಾರ ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ತಾಂಡವ: ಜೆಡಿಎಸ್ ಆರೋಪ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪರಿ ಅಧ್ಯಕ್ಷರು ಲಿಂಗಯ್ಯ ಹಿರೇಮಠ ವಹಿಸಿದ್ದರು. ಕಲಾವಿದ ಕರಿಯಪ್ಪ ಹಂಚಿನಮನಿ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ಮತ್ತು ಪರಿಮಳ ಜೈನ್, ವಾಗೀಶ್ ಹೂಗಾರ, ಮಹಾದೇವಿ ಕಣವಿ, ಸಿದ್ದು ಹುಣಸಿಕಟ್ಟಿ, ನಾಗರಾಜ ಹುಡೇದ, ರೇಣುಕಾ ಗುಡಿಮನಿ, ಜುಬೇದ ನಾಯಕ, ಈಶ್ವರಗೌಡ ಪಾಟೀಲ, ಬೀರಪ್ಪ ಕುರುಬರ, ಅಕ್ಕಮಹಾದೇವಿ ಹಾನಗಲ್ಲ, ಶಶಿಕಲಾ ಅಕ್ಕಿ, ಉಮಾ ಅಪ್ಪಣ್ಣವರ, ನೇತ್ರಾವತಿ ಅಂಗಡಿ, ಶಂಕರ ತುಮ್ಮಣ್ಣನವರ, ಎಸ್ ಆರ್ ಹಿರೇಮಠ, ಚಂದ್ರಶೇಖರ ಮಾಳಗಿ, ಸಿ.ಎಸ್.ಮರಳಿಹಳ್ಳಿ, ಶಿವಾನಂದ ಕೆ. ಮತ್ತು ಇತರರು ಉಪಸಿತರಿದ್ದರು. ಉಪನ್ಯಾಸಕ ಈಶ್ವರಗೌಡ ಪಾಟೀಲ ಸ್ವಾಗತಿಸಿದರೆ, ಶಿಕ್ಷಕಿ ಭಾಗ್ಯ ಎಂ.ಕೆ. ನಿರೂಪಿಸಿದರೆ ಸಂವಾದ  ಕಾರ್ಯಕ್ರಮವನ್ನು ಮಂಜುನಾಥ ಹತ್ತಿಯವರ ನಿರೂಪಿಸಿ, ಬೀರಪ್ಪ ಕುರುಬರ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

Download Eedina App Android / iOS

X