ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಕಳೆದ ಜೂನ್ ತಿಂಗಳಲ್ಲಿ ಕೋಲಾರ-ಕೆಜಿಎಫ್ ವ್ಯಾಪ್ತಿಯಲ್ಲಿ ನಡೆದ ವಾಹನ ತಪಾಸಣೆಯಲ್ಲಿ RTO ವೇಣುಗೋಪಾಲ್ ರೆಡ್ಡಿ, ಒಟ್ಟು 680 ಪ್ರಕರಣಗಳನ್ನು ದಾಖಲಿಸಿ ₹6.46 ಲಕ್ಷ ದಂಡದ ಜೊತೆಗೆ ₹5 ಲಕ್ಷದ ಮೂವತ್ತೈದು ಸಾವಿರ ರೂ ತೆರಿಗೆ ವಸೂಲಿ ಮಾಡಿದ್ದಾರೆ.
ಶಾಲಾ ವಾಹನಗಳು, ಸ್ಟೇಟ್ ಕ್ಯಾರಿಯರ್, ಆಟೋರಿಕ್ಷಾ, ವೈಟ್ ಬೋರ್ಡ್ ವಾಹನಗಳು, ಅತಿ ಹೆಚ್ಚು ಭಾರ ಹೊತ್ತ ಗೂಡ್ಸ್ ವಾಹನಗಳು, ಟಾರ್ಪಲ್ ಇಲ್ಲದೆ ಮರಳು- ಜಲ್ಲಿ ಸಾಗಣೆ, ವಿಮೆ ತೆರಿಗೆ ಇಲ್ಲದ ವಾಹನಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ.
ಕೃಷಿಗಾಗಿ ಅನುಮತಿ ಪಡೆದಿದ್ದ ಟ್ರ್ಯಾಕ್ಟರ್, ಇತರೆ ವಸ್ತುಗಳನ್ನು ಸಾಗಿಸುತ್ತಿದ್ದ ಪ್ರಕರಣಗಳನ್ನು ಪತ್ತೆ ಹಚ್ಚಿ, ನೋಂದಣಿ ಇಲ್ಲದೆ ಸಂಚಾರ ಮಾಡುತ್ತಿದ್ದ ವಾಹನಗಳನ್ನು ಸೀಜ್ ಮಾಡಲಾಗಿದೆ. ಹಾಗೂ ದಾಖಲೆಗಳಿಲ್ಲದೆ ಸಂಚಾರ ಮಾಡುತ್ತಿದ್ದ ಕೋಲಾರ ನಗರಸಭೆಯ 5 ಟ್ರ್ಯಾಕ್ಟರ್ ಗಳನ್ನು ಸೀಜ಼್ ಮಾಡಿ ದಂಡ ವಿಧಿಸಲಾಗಿದೆ.
ಜುಲೈ ತಿಂಗಳಿನಲ್ಲೂ ವಾಹನ ತಪಾಸಣೆ ಮಾಡಿ ದಂಡ ಹಾಕುವ ಪ್ರಕ್ರಿಯೆ ಮುಂದುವರೆಯಲಿದ್ದು, ಸವಾರರು ತಮ್ಮ ವಾಹನಗಳಿಗೆ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಆಟೋಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕಳುಹಿಸುವಾಗ ಹೆಚ್ಚು ಸಂಖ್ಯೆಯಲ್ಲಿರದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: ಕೋಲಾರ | ಕೋಮುಲ್ ಸರ್ಕಾರಿ ನಾಮನಿರ್ದೇಶಕರಾಗಿ ಯೂನಸ್ ಷರೀಫ್ ನೇಮಕ
ಈ ವೇಳೆ ಪ್ರಾದೇಶಿಕ ಸಾರಿಗೆ ಇನ್ಸ್ಪೆಕ್ಟರ್ ಅರುಣ, ಮುನಿಕೃಷ್ಣ, ಗೋಪಾಲಕೃಷ್ಣ ಉಪಸ್ಥಿತರಿದ್ದರು.
