ತುಮಕೂರು | ಸಿದ್ದರಾಮಯ್ಯ ಅವರಿಗೆ ರೈಲ್ವೆ ಪ್ರಯಾಣ ದರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ : ವಿ.ಸೋಮಣ್ಣ

Date:

Advertisements

ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಯಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹತ್ತು ಪಟ್ಟು ಹೆಚ್ಚಿಸಿ ಬಡವರು, ಮಧ್ಯಮ ವರ್ಗದ ಬದುಕು ದುಸ್ಥರಗೊಳಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ರೈಲ್ವೆ ಪ್ರಯಾಣ ದರ ಹೆಚ್ಚಳದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕೇಂದ್ರದ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಟಾಂಗ್ ನೀಡಿದರು.

ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ನಂದಿಹಳ್ಳಿ ಗೇಟ್ ಬಳಿ ಆಯೋಜಿಸಿದ್ದ 36.29 ಕೋಟಿ ರೂಗಳ ಎಲ್ ಸಿ 59 ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು ರೈಲ್ವೆ ಇಲಾಖೆ ಕಳೆದ 11 ವರ್ಷದಿಂದ ಬೆಲೆ ಏರಿಕೆ ಮಾಡರಲಿಲ್ಲ. ಈಗ ಶೇಕಡಾ 1 ರಷ್ಟು ಬೆಲೆಯನ್ನು 500 ಕಿಮೀ ನಂತರದ ದೂರ ಪ್ರಯಾಣಕ್ಕೆ ಹೆಚ್ಚಿಸಿದ್ದೇವೆ ಅಷ್ಟೇ. ಆದರೆ ರಾಜ್ಯ ಸರ್ಕಾರ ಶೇ.40 ರಷ್ಟು ಮೆಟ್ರೋ ಹಾಗೂ ಶೇ.20 ರಷ್ಟು ಸರ್ಕಾರಿ ಬಸ್ಸಿನ ದರ ಹೆಚ್ಚಿಸಿ ಪ್ರಯಾಣಿಕರಿಗೆ ಅನ್ಯಾಯ ಮಾಡಿದ್ದಲ್ಲದೆ ಎಲ್ಲಾ ಇಲಾಖೆಯ ದರವನ್ನು ಹೆಚ್ಚಿಸಿದ್ದೀರಿ ಎಂದು ಗುಡುಗಿದರು.

ಪ್ರತಿ ಆರು ತಿಂಗಳಿಗೊಮ್ಮೆ ಬೆಲೆ ಏರಿಕೆ ಆಗುವ ಅಬಕಾರಿ ಇಲಾಖೆಯೇ ಸರ್ಕಾರಕ್ಕೆ ಆದಾಯದ ಮೂಲವಾಗಿದೆ. ಹಾಲಿನ ದರ ಹೆಚ್ಚಳ, ಸರ್ಕಾರಿ ಸೇವೆ ಶೇಕಡಾ 30 ರಷ್ಟು ಹೆಚ್ಚಳ, ಸ್ಟ್ಯಾಂಪ್ ಡ್ಯೂಟಿ 4 ಪಟ್ಟು ಹೆಚ್ಚಳ ಹೀಗೆ ಸಾರ್ವಜನಿಕರಿಗೆ ತೊಂದರೆ ಕೊಟ್ಟು ಸಿದ್ದರಾಮಯ್ಯ ರೈಲ್ವೆ ದರದ ಬಗ್ಗೆ ಟ್ವಿಟ್ ಮಾಡುವುದು ಸರಿಯಲ್ಲ. ಪ್ರಧಾನಿ ಮೋದಿ ಅವರ ಆಶಯದಂತೆ ಶೇಕಡಾ ಒಂದರ ದರ ಹೆಚ್ಚಳದ ಹಣ ಹಾಗೂ 2.65 ಲಕ್ಷ ಕೋಟಿ ಬಜೆಟ್ ಹಣ ದೇಶದ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಹಾಗೂ ಅಂಡರ್ ಪಾಸ್, ಮೇಲ್ಸೇತುವೆ ನಿರ್ಮಾಣಕ್ಕೆ ಬಳಸಲಾಗುತ್ತಿದೆ ಎಂದ ಅವರು ದೇಶದ ಪ್ರಮುಖ 136 ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರದಲ್ಲಿದೆ. ಈ ಎಲ್ಲಾ ಮಾಹಿತಿ ಹಿಡಿದು ಮುಖ್ಯಮಂತ್ರಿಗಳು ಕಾಮೆಂಟ್ ಮಾಡಬೇಕಿತ್ತು. ನಮ್ಮ ಇಲಾಖೆಯ ಪುಸ್ತಕ ನಿಮಗೂ ಕಳುಹಿಸುತ್ತೇವೆ. ಓದಿ ತಿಳಿದು ಪ್ರತಿಕ್ರಿಯೆ ನೀಡಿ ಎಂದು ಸವಾಲೆಸೆದರು.

Advertisements

ಜಿಲ್ಲೆಯ ಎಂಟು ತಾಲ್ಲೂಕಿನ ಪೈಕಿ ಅತಿ ಹೆಚ್ಚು ರೈಲ್ವೆ ಅನುದಾನ ಪಡೆದ ಗುಬ್ಬಿ ತಾಲ್ಲೂಕಿನಲ್ಲಿ ನಡೆದ ಎಲ್ಲಾ ಸೇತುವೆ ಕಾಮಗಾರಿ ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಈಗಾಗಲೇ ಕಳ್ಳಿಪಾಳ್ಯ ಅಂಡರ್ ಪಾಸ್ ಸೇತುವೆಗೆ 16 ಕೋಟಿ, ನಂದಿಹಳ್ಳಿ ಗೇಟ್ ಬಳಿ 36 ಕೋಟಿ, ಬೆಣಚಿಗೆರೆ ಗೇಟ್ ಬಳಿ 36 ಕೋಟಿ, ದೊಣ್ಣೆರೆ ಗೇಟ್ ಗೆ 4.5 ಕೋಟಿ, ರಾಂಪುರ ಗೇಟ್ ಬಳಿ 5.2 ಕೋಟಿ ಬಿಡುಗಡೆಯಾಗಿ ಕೆಲಸ ಆರಂಭವಾಗಿದೆ. ತುಮಕೂರು ಹಾಗೂ ತಿಪಟೂರು ತಾಲ್ಲೂಕಿನಲ್ಲಿ 300 ಕೋಟಿಗೂ ಅಧಿಕ ಹಣ ಬಿಡುಗಡೆಯಾಗಿದೆ ಎಂದ ಅವರು ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಕುರಿತ ಈ ತಿಂಗಳ 4 ರ ಸಭೆಗೆ ಭಾಗವಹಿಸಿ ವೈಜ್ಞಾನಿಕ ಯೋಜನೆ ಬಗ್ಗೆ ಮಾತನಾಡುತ್ತೇನೆ. ಅಲ್ಲಿಯ ನಿರ್ಣಯ ಏನೇ ಇರಲಿ ರೈತರ ಜೊತೆ ನಾನು ಇರುತ್ತೇನೆ ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ದಕ್ಷಿಣ ನೈರುತ್ಯ ರೈಲ್ವೆ ಇಲಾಖೆಯ ಬಿಆರ್ ಎಂ ಅಶುತೋಷ್ ಸಿಂಗ್, ಬೆಲವತ್ತ ಗ್ರಾಪಂ ಅಧ್ಯಕ್ಷೆ ಲತಾ ದಯಾನಂದ್, ಸದಸ್ಯರಾದ ಎನ್.ಬಿ.ರಾಜಶೇಖರ್, ಆನಂದ್, ಮುಖಂಡರಾದ ಎಸ್.ಡಿ.ದಿಲೀಪ್ ಕುಮಾರ್, ಬಿ.ಎಸ್.ನಾಗರಾಜು, ಕಳ್ಳಿಪಾಳ್ಯ ಲೋಕೇಶ್, ದಿಶಾ ಸಮಿತಿಯ ಸದಸ್ಯರಾದ ವೈ.ಎಚ್.ಹುಚ್ಚಯ್ಯ, ಶಿವಪ್ರಸಾದ್, ಡಾ.ನವ್ಯಾಬಾಬು, ಉಪ ವಿಭಾಗಾಧಿಕಾರಿ ನಹೀದಾ ಜಂಜಂ, ತಹಶೀಲ್ದಾರ್ ಬಿ.ಆರತಿ ಸೇರಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳು ಇದ್ದರು.

ವರದಿ – ಎಸ್. ಕೆ. ರಾಘವೇಂದ್ರ, ಗುಬ್ಬಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

Download Eedina App Android / iOS

X