ಔರಾದ್ ತಾಲ್ಲೂಕಿನ ವಡಗಾಂವ(ದೇ) ಗ್ರಾಮದಲ್ಲಿ ವಿವಿಧ ಧರ್ಮ ಗುರುಗಳ ಸಮ್ಮುಖದಲ್ಲಿ 15 ಎತ್ತರದ ಭಗವಾನ ಗೌತಮ ಬುದ್ಧ ಪ್ರತಿಮೆ ಬುಧವಾರ ಅನಾವರಣಗೊಳಿಸಲಾಯಿತು.
ವಡಗಾಂವ (ದೇ) ಗ್ರಾಮದಲ್ಲಿ ಬುಧುವಾರ ಏಷ್ಯಾದ ಬೆಳಕಿಂದೇ ಖ್ಯಾತಿ ಪಡೆದ ಭಗವಾನ್ ಗೌತಮ್ ಬುದ್ಧರ 15 ಅಡಿ ಎತ್ತರದ ಬೃಹತ್ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮ ಹಾಗೂ ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಜನ್ಮದಿನ ಕಾರ್ಯಕ್ರಮದಲ್ಲಿ ಪೂಜ್ಯಶ್ರೀಗಳು ಮಾತನಾಡಿದರು.
ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆ ಇಡೀ ವಿಶ್ವಕ್ಕೆ ಮಾದರಿಯಾಗಿವೆ. ಮಾನವ ಜನಾಂಗವನ್ನು ಉದ್ಧಾರಗೊಳಿಸಿದ ಗೌತಮ ಬುದ್ಧ ಪ್ರತಿಮೆಯನ್ನು ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಹಾಗೂ ಅವರ ಗೆಳೆಯರ ಬಳಗ ಇಲ್ಲಿ ಬುದ್ಧ ಪ್ರತಿಮೆ ನಿರ್ಮಿಸಿದ್ದು ಸಮಾಜಕ್ಕೆ ಮಾದರಿ ಕಾರ್ಯʼ ಎಂದರು.
ಆಣದೂರಿನ ಭಂತೆ ಜ್ಞಾನಸಾಗರ ಸಾನಿಧ್ಯ ವಹಿಸಿ ಮಾತನಾಡಿ, ʼಭಗವಾನ್ ಗೌತಮ ಬುದ್ಧ ಅವರು ಆಡಂಬರ ಆಚಾರಗಳನ್ನು ವಿರೋಧಿಸಿ ಮಾನವ ಜನಾಂಗದ ಏಳಿಗೆ ಬಯಸಿದರು. ಕಾಯಕಕ್ಕೆ ಹೆಚ್ಚು ಮಹತ್ವ ನೀಡಿದರುʼ ಎಂದು ಹೇಳಿದರು.

ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಮಾತನಾಡಿ, ʼವಿವಿಧ ಧರ್ಮಗುರುಗಳ ಮಾರ್ಗದರ್ಶನ, ಸ್ನೇಹಿತರ ಸಹಕಾರದಿಂದ ಇಲ್ಲಿ ಬುದ್ಧ ಪ್ರತಿಮೆ ನಿರ್ಮಾಣ ಸಾಧ್ಯವಾಯಿತು. ಇದು ಬದುಕಿನ ಸಾರ್ಥಕ ಕ್ಷಣವಾಗಿದೆ. ನಾವೆಲ್ಲರೂ ಬುದ್ಧ ಮಾರ್ಗದಲ್ಲಿ ಸಾಗೋಣʼ ಎಂದರು.
ವಡಗಾಂವ್ ಹಾಗೂ ಸುತ್ತಲಿನ ಗ್ರಾಮಗಳ ಬೌದ್ಧ ಅನುಯಾಯಿಗಳು ಸೇರಿದಂತೆ ಅಪಾರ ಸಂಖ್ಯೆ ಜನ ಪಾಲ್ಗೊಂಡು ನೂತನ ಬುದ್ಧನ ಸುಂದರ ಪ್ರತಿಮೆ ಕಣ್ತುಂಬಿಕೊಂಡರು. ಎಲ್ಲಾ ಧರ್ಮಗಳ ಮಹಾನ ಪುರುಷರ ಭಾವಚಿತ್ರ ಮೆರವಣಿಗೆ, ರಥೋತ್ಸವ, ಮೂರ್ತಿ ಅನಾವರಣ, ಪತ್ರಕರ್ತರಿಗೆ ಸನ್ಮಾನ, ವೈದ್ಯರಿಗೆ ಸನ್ಮಾನ ಹಾಗೂ ಕೆಎಎಸ್ ಖಾಜಾ ಖಲಿಲುಲ್ಲಾ ಅಧಿಕಾರಿ ಅವರ ಜನ್ಮದಿನ ಆಚರಿಸಲಾಯಿತು.
ಇದನ್ನೂ ಓದಿ : ಬೀದರ್ | ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಂದ ಭ್ರಷ್ಟ ಅಧಿಕಾರಿಗಳ ರಕ್ಷಣೆ : ಓಂಪ್ರಕಾಶ ರೊಟ್ಟೆ ಆರೋಪ
ಶಿಕ್ಷಕ, ಸಾಹಿತಿ ಶಿವಲಿಂಗ ಹೇಡೆ ವಿಶೇಷ ಉಪನ್ಯಾಸ ನೀಡಿದರು. ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಅವರ ತಾಯಿ ನಸೀಮಾ ಬೇಗಂ, ಬೀದರ್ ಲಕ್ಷ್ಮೀಬಾಯಿ ಕಮಠಾಣೆ ಕಾಲೇಜು ಉಪನ್ಯಾಸಕಿ ಲತಾ ದಂಡೆ, ಹವಾ ಮಲ್ಲಿನಾಥ ಮಹಾರಾಜ, ಹಲ್ಬರ್ಗಾ ಮಠದ ಶಿವಲಿಂಗೇಶ್ವರ ಶಿವಾಚಾರ್ಯ, ಭಂತೆ ಧಮ್ಮ ಪಾಲ್, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಸೇರಿದಂತೆ ಪ್ರಮುಖರಾ ಶೌಕತ್ ಅಲಿ ಚಾಬುಕ ಸವಾಲ್, ಡಾ. ಸಿದ್ದಾರೆಡ್ಡಿ, ಶಿವಕುಮಾರ್ ಪಾಟೀಲ್, ಮಲ್ಲಪ್ಪ ನೇಳಗೆ, ಮಲ್ಲಪ್ಪ ಬುಶೆಟ್ಟೆ, ಸಿದ್ದಯ್ಯ ಸ್ವಾಮಿ, ರಾಜಕುಮಾರ ಬುಟ್ಟೆ, ಪ್ರಕಾಶ ಅಗನೂರೆ, ಸೈದಪ್ಪ ಅಗನೂರೆ, ಅಶೋಕ್ ಅಡಿಕೆ, ಅಭಿಲಾಷ ಟೈಗರ್, ರಾಜು ಆಗನೂರೆ, ಶಫಿವುಲ್ಲಾ ಚಾಬುಕಸವಾರ್, ಓಂಕಾರ ಮೇತ್ರೆ, ನವೀಲಕುಮಾರ ಉತ್ಕಾರ್ ಗ್ರಾಮಸ್ಥರು ಉಪಸ್ಥಿತರಿದ್ದರು. ರತಿಕಾಂತ ನೇಳಗೆ ಸ್ವಾಗತಿಸಿದರು, ಚಂದ್ರಕಾಂತ ಫುಲೆ ವಂದಿಸಿದರು. ಟಿ.ಎಂ.ಮಚ್ಚೆ ನಿರೂಪಿಸಿದರು.