ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಹೃದಯಾಘಾತದಿಂದ ಸಂಭವಿಸುವ ಸಾವಿನ ಸಂಖ್ಯೆ ಏರುತ್ತಲೇ ಇದೆ. ಹಾಸನದ ಹೊರವಲಯದ ಚಿಕ್ಕಕೊಂಡಗುಳ ಗ್ರಾಮದಲ್ಲಿ ಮದನ್ (21) ಎಂಬ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಮೂಲತಃ ಹಾಸನ ತಾಲ್ಲೂಕಿನ, ಚಿಟ್ನಳ್ಳಿ ಗ್ರಾಮದವನಾದ ಮದನ್, ತಾಯಿ ಜೊತೆ ಚನ್ನಪಟ್ಟಣದಲ್ಲಿ ವಾಸವಿದ್ದ.
ಕಳೆದ ಎರಡು ದಿನಗಳಿಂದ ಚಿಕ್ಕಕೊಂಡಗುಳದ ಬಾವನ ಮನೆಯಲ್ಲಿದ್ದ ಮದನ್‌ಗೆ ಎದೆನೋವು ಕಾಣಿಸಿಕೊಂದಿದ್ದು, ಕುಸಿದು ಬಿದ್ದಿದ್ದಾನೆ. ಕುಸಿದುಬಿದ್ದ ಮದನ್ ನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾಗಿ ವೈದ್ಯರು ದೃಢಪಡಿಸಿದ್ದಾರೆ. ಒಟ್ಟಾರೆ ಹಾಸನದಲ್ಲಿ ಹೃದಯಾಘಾತದಿಂದ ಮೃತ ಪಟ್ಟವರ ಸಂಖ್ಯೆ 32 ಕ್ಕೇರಿದೆ.
ಇದನ್ನೂ ಓದಿ: ಹಾಸನ | ʼಶ್ರೇಷ್ಠ ಕೃಷಿಕ ಪ್ರಶಸ್ತಿʼಗೆ ಅರ್ಜಿ ಆಹ್ವಾನ
