ಬಂಡವಾಳ ಶಾಹಿಗಳ ಯಾವುದೇ ಯೋಜನೆಗಳು ಚಳವಳಿಗಾರರ ಹಕ್ಕುಗಳನ್ನು ಹತ್ತಿಕುವ ಕೆಲಸ ಮಾಡುತ್ತವೆ. ಇದೀಗ ಬಂಡವಾಳ ಶಾಹಿಗಳ ವಿರುದ್ಧ ಚಳವಳಿಗಳು ದೊಡ್ಡಮಟ್ಟದಲ್ಲಿ ಬೆಳೆಯುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ (ಕೆಆರ್‌ಆರ್‌ಎಸ್) ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ಶುಕ್ರವಾರ ಮುಖ್ಯಮಂತ್ರಗಳ ಜೊತೆ ಸಭೆಗೆ ತೆರಳುವ ಮುನ್ನ ಧರಣಿ ಸ್ಥಳದಲ್ಲಿ ಪ್ರಾಸ್ತಾವಿಕವಾಗಿ ಮನಾತನಾಡಿದ ಅವರು, “ನಮ್ಮ ಹೋರಾಟಕ್ಕೆ ಸಂಯುಕ್ತ ಹೋರಾಟ ಕರ್ನಾಟಕದ ಹಲವು ನಾಯಕರು ಬೆಂಬಲ ನೀಡಿದ್ದಾರೆ. ನಾವೆಲ್ಲರೂ ನೇಗಿಲ ಯೋಗಿಯ ಹಾಡನ್ನು ಕೆಳಿದ್ದೇವೆ. ಆ ಸಂದರ್ಭದಲ್ಲಿ ನಾಡಿನ ಜನಚಳವಳಿಗಳಲ್ಲಿ ಹಸಿರು, ನೀಲಿ, ಕೆಂಪು ಬಾವುಟುಗಳು ಒಂದಾಗಿತ್ತು. ಇತ್ತೀಚಿನ ದಿನಗಳಲ್ಲಿ ವಿಶ್ವವಾಣಿಜ್ಯ ಒಪ್ಪಂದಕ್ಕೆ ಸರಕಾರ ಸಹಿ ಹಾಕಿ ಒಂದೊಂದೆ ನೀತಿಯನ್ನು ಜಾರಿಗೆ ತರಲು ಹೊರಟಿವೆ. ರಾಜ್ಯದಲ್ಲಿ ಈ ಹೋರಾಟಕ್ಕೆ ರೈತ ಚಳವಳಿಗಳು ದಲಿತ, ಕಾರ್ಮಿಕ, ಮಹಿಳಾ, ವಿದ್ಯಾರ್ಥಿ ಚಳವಳಿಗೂ ಎಲ್ಲವೂ ಸೇರಿದ್ದಾವೆ” ಎಂದರು.
“ಈ ಹೋರಾಟ ರಾಜ್ಯದ ಚಳವಳಿಯಲ್ಲಿ ಐತಿಹಾಸಿಕವಾಗಿ ದಾಖಲಾಗಿದೆ. 384ದಿನಗಳ ಕಾಲ ಎಸ್,ಕೆ.ಯಂ ಚಳವಳಿ ದಿಲ್ಲಿಯಲ್ಲಿ ನಡೆದಿತ್ತು. ಇದೀಗ ರಾಜ್ಯದಲ್ಲಿ ದೇವನಹಳ್ಳಿ ಹೋರಾಟ 1184 ದಿನಗಳು ದಾಟಿದೆ. ಇದು ಸರಕಾರ ವಿರುದ್ಧ ನಡೆದ ದಿಟ್ಟ ಹೋರಾಟವಾಗಿದೆ. ಸಂಯುಕ್ತ ಹೋರಾಟ ಬೆನ್ನಲುಬಾಗಿ ನಿಂತು ರಾಜ್ಯ ಮಟ್ಟದ, ರಾಷ್ಟ್ರ ಮಟ್ಟ ಹೋರಾಟವನ್ನಾಗಿಸಿದೆ. ವಿಶಿಷ್ಟ ಎಂದರೆ, ರೈತರ ವಿಷಯಕ್ಕೆ, ಭೂಮಿ ವಿಷಯಕ್ಕೆ ರಾಜ್ಯ ಒಂದಾಗಿದೆ” ಎಂದು ತಿಳಿಸಿದರು.
“ನಾಡಿನ ಜಲ, ಸಂಪತ್ತು ಉಳಿಸುವಲ್ಲಿ ಈ ಚಳವಳಿ ರೂಪುಗೊಂಡಿದೆ. ಇದೊಂದು ಅಪರೂಪದ ಚಳವಳಿ. ಇದು ಭವಿಷ್ಯದಲ್ಲಿ ಅನಿಷ್ಟ ದುಷ್ಟಕೂಟಗಳನ್ನು ನಾಶಮಾಡಲು ನಾಂದಿಯಾಗುತ್ತದೆ. ಒಂದು ಕಡೆ ಮೋದಿ ಸರಕಾರ, ಮತ್ತೊಂದು ಕಡೆ ಸಿದ್ದರಾಮಯ್ಯ ಸರಕಾರ. ಎರಡು ಬೇರೆ ಬೇರೆ ಪಕ್ಷಗಳು, ಆದರೆ ನೀತಿಗಳು ಒಂದೇ, ಇವರೆಡೂ ಕಾರ್ಪೋರೇಟ್ ನೀತಿಗಳನ್ನು ಮುಂದುವರೆಸುತ್ತಿವೆ” ಎಂದು ಟೀಕಿಸಿದರು.
“ಭೂಮಿಗೆ ಕೈ ಹಾಕಲು ಬಂದ ಸರ್ಕಾರಕ್ಕೆ ದೇವನಹಳ್ಳಿ ಹೋರಾಟ ಸರಕಾರಕ್ಕೆ ಬಿಸಿ ಮುಟ್ಟಿಸಿದೆ. ಈಗ 10 ದಿನಗಳು ಸಮಯ ತೆಗೆದುಕೊಂಡು ಬ್ರಿಟಿಷರ ಪದ್ಧತಿಯನ್ನು ಮುಂದುವರೆಸಲು ಹೊರಟಿದೆ. ಇದು ಬಸವಣ್ಣ, ಸಂಗೊಳ್ಳಿ ರಾಯಣ್ಣ, ಟಿಪ್ಪುಸುಲ್ತಾನ, ಕಿತ್ತೂರು ರಾಣಿ ಚನ್ನಮ್ಮನ ನಾಡು. ಇಲ್ಲಿ ಸಾಧು ಸಂತರು, ಸೂಫಿಗಳು ತಿರುಗಾಡಿದ ನೆಲ. ರೈತರು ಈಗ ಕೃಷಿ ಸಂಸ್ಕೃತಿಯನ್ನು ಉಳಿಸಲು ಹೊರಟಿದೆ. ದಲಿತ, ರೈತ, ಕಾರ್ಮಿಕರು, ಕಲಾವಿದರು, ಸಹಾತಿಗಳು ನಾವೆಲ್ಲರೂ ಸರಕಾರಕ್ಕೆ ಸಂದೇಶ ಕೊಡುತ್ತಿದ್ದೇವೆ” ಎಂದರು.
“ಸರಕಾರಕ್ಕೆ ಹೇಳುವುದು ಒಂದೇ, ನಾವು ಕೈಗಾರಿಕೆಗಳಿಗೆ ಭೂಮಿಯನ್ನು ಕೊಡುವುದಿಲ್ಲ, ಬಲವಂತದಿಂದ ಕಿತ್ತುಕೊಳ್ಳಲು ಪ್ರಯತ್ನ ಮಾಡಲು ಮುಂದಾದರೆ, ಒಂದಿಂಚು ಕೂಡ ಕೊಡುವುದಿಲ್ಲ. ಸಿದ್ದರಾಮಯ್ಯ ನಮ್ಮ ಭೂಮಿ ನಮಗೆನೀಡುವ ಭರವಸೆ ಇದೆ. ನಮ್ಮ ಭೂಮಿ ನಮಗೆ ಭೂಮಿ ಸಿಗುವ ತನಕ ಹೋರಟ ನಿಲ್ಲಿಸುವುದಿಲ್ಲ, ನಾವು ಇಲ್ಲಿಂದ ಹೊರಡುವುದಿಲ್ಲ” ಎಂದು ಎಚ್ಚರಿಸಿದರು.
“ಎಂ.ಬಿ.ಪಾಟೀಲ್‌ರೇ ಮುಖ್ಯಮಂತ್ರಿ ಆಗಬೇಕೆನ್ನುವ ವಿಶ್ವಾಸದಲ್ಲಿ ನೀವು ಇದ್ದೀರಿ. ಇದೀಗ ಭೂಮಿಯನ್ನು ಕೈ ಬಿಡದಿದ್ದರೆ, ಮುಂದೆ ನೀವು ವಿಧಾನಸೌಧಕ್ಕೆ ಆಯ್ಕೆ ಆಗುವುದಕ್ಕೂ ಸಾಧ್ಯವಿಲ್ಲ. ಭೂಮಿ ತಂಟಗೆ ಬಂದರೆ, ನೀವು ರಸ್ತೆಯಲ್ಲಿ ಸುಲಭವಾಗಿ ತಿರುಗಾಡುವುದಕ್ಕೆ ಸಾಧ್ಯವಿಲ್ಲ. ನಂಜುಂಡಸ್ವಾಮಿ ಅವರ ಶಿಷ್ಯರಾಗಿರುವುದರಿಂದ ಸಿದ್ದರಾಮಯ್ಯ ಮೇಲೆ ನಂಬಿಕೆ ಇದೆ. ಆ ನಂಬಿಕೆಯನ್ನು ಉಳಿಸಿಕೊಳ್ಳಿ” ಎಂದು ಕಿವಿಮಾತು ಹೇಳಿದರು.