ಕೇಂದ್ರ ಸರ್ಕಾರ ತಂದಿರುವ 2025ರ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ, ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕಾನೂನು ಹೋರಾಟ ಮಾಡಿಕೊಂಡು ಬಂದಿದೆ. ಇದರ ಬೆಂಬಲವಾಗಿ 2025, ಜುಲೈ 4 ರಂದು ಶುಕ್ರವಾರ ಪ್ರಾರ್ಥನೆ ನಂತರ ರಾಷ್ಟ ವ್ಯಾಪಿ ಮಾನವ ಸರಪಳಿ ನಿರ್ಮಿಸಿ ಹೋರಾಟಕ್ಕೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ದಾವಣಗೆರೆ ತಂಜೀಮುಲ್ ಮುಸ್ಲಿಮೀನ್, ಮುಸ್ಲಿಂ ಒಕ್ಕೂಟದ ಸದಸ್ಯರು ಕೇಂದ್ರದ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ, ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ದಾವಣಗೆರೆಯಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು.

ಹಳೇ ದಾವಣಗೆರೆಯ ಚಾರ್ಲಿ ಪೈಲ್ವಾನ್ ಆಟೋ ನಿಲ್ದಾಣದಿಂದ ಎಸ್ ಎಸ್ ಎಂ ನಗರದ ಹೊಸ ಖಬರ್ಸ್ಥಾನ್ ವರೆಗೆ ಮಾನವ ಸರಪಳಿ ರಚಿಸಿ ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆಯಲು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ದಾವಣಗೆರೆ ಮುಸ್ಲಿಂ ಒಕ್ಕೂಟದ ಸಂಚಾಲಕರಾದ ಟಿ.ಅಸ್ಗರ್, ‘‘ವಕ್ಫ್ ಆಸ್ತಿ ನಮ್ಮ ಪೂರ್ವಜರು, ಹಿರಿಯರು ಅಲ್ಲಾಹನನ್ನು ಸಂತೃಪ್ತಪಡಿಸಲು, ಮುಸ್ಲಿಮರ ಸಬಲೀಕರಣಕ್ಕಾಗಿ ದಾನ ಮಾಡಿದ ಜಮೀನಾಗಿದೆ. ವಕ್ಫ್‌ಗೆ ಸೇರಿರುವ ಜಮೀನುಗಳು ಯಾರಿಂದಲೋ ಕಬಳಿಸಿದ ಜಮೀನಲ್ಲ. ಯಾರಿಂದಲೋ ಕಬಳಿಸಿದ ಜಮೀನು ವಕ್ಫ್ ಆಗಲು ಸಾಧ್ಯವೂ ಇಲ್ಲ. ಧರ್ಮದ ಗೋಡೆಯನ್ನು ಬದಿಗಿಟ್ಟು ಎಲ್ಲಾ ಭಾರತೀಯರು ಹೋರಾಟದಲ್ಲಿ ಕೈ ಜೋಡಿಸಬೇಕು” ಎಂದು ಮನವಿ ಮಾಡಿದರು.

“ಇಂದು ಮುಸ್ಲಿಮರು ಗುರಿಯಾಗಿದ್ದರೆ, ನಾಳೆ ಎಲ್ಲಾ ಶೋಷಿತ, ದಮನಿತ ವರ್ಗಗಳು ಹೆಜ್ಜೆ ಹೆಜ್ಜೆಗೆ ಗುರಿಯಾಗುತ್ತವೆ. ನಮ್ಮ ಹೋರಾಟ ಹಿಂದೂ-ಮುಸ್ಲಿಂ ಹೋರಾಟವಲ್ಲ. ನಮ್ಮ ಹೋರಾಟ ಹಿಂದೂಗಳ ವಿರುದ್ಧವಲ್ಲ. ನಮ್ಮ ಹೋರಾಟ ಸಂವಿಧಾನ ನೀಡಿರುವಂತಹ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕಾಗಿದೆ. ಈ ಕಾಯ್ದೆ ಮುಸ್ಲಿಮರ ಹಿತಕ್ಕೆ ವಿರುದ್ಧವಾಗಿದೆ. ಇದು ಮುಸ್ಲಿಮರ ಜಮೀನು ಕಬಳಿಸುವ ಯತ್ನವಾಗಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ಈ ರೀತಿಯ ಕ್ರಮಗಳು ನಮ್ಮ ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ದವಾಗಿದೆ. ನಾವು ಇದನ್ನು ಒಪ್ಪುವುದಿಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಆನ್ಲೈನ್ ಗೇಮಿಂಗ್ ಗೆ ಯುವಕ ಬಲಿ; ಕ್ರಮಕ್ಕೆ ಡೆತ್ ನೋಟಿನಲ್ಲಿ ಸಿಎಂ, ಡಿಸಿಎಂ, ಸಂಸದೆ, ನ್ಯಾಯಾಧೀಶರಿಗೆ ಮನವಿ
“ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ಈ ಕಾಯ್ದೆ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಕ್ಕಾಗಿ ಹೋರಾಟ ಮುಂದುವರಿಸುತ್ತೇವೆ. ದಾವಣಗೆರೆಯಲ್ಲಿ ಇನ್ನೂ ದೊಡ್ಡಮಟ್ಟದ ಹೋರಾಟ ಮಾಡುತ್ತೇವೆ. ಮುಸ್ಲಿಂರ ಹೋರಾಟವನ್ನು ಅರಿತು ಕೇಂದ್ರ ಸರ್ಕಾರ ಜಾರಿಗೆ ತಂದಿರುವ, ಮಾರಕ ವಕ್ಫ್ ತಿದ್ದುಪಡಿ ಕಾಯ್ದೆ 2025ನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಮಾನವ ಸರಪಳಿ ಮತ್ತು ಪ್ರತಿಭಟನೆ ಕಾರ್ಯಕ್ರಮದಲ್ಲಿ ಮೌಲಾನಾ ನಾಸಿರ್ ಅಹಮದ್ ,ತಂಜಿಮ್ ಅದ್ಯಕ್ಷರಾದ ಜನಾಬ್ ದಾದು ಸೇಟ್, ಷಂಷುದ್ದೀನ್ ರಜ್ವಿ, ಕಾರ್ಯದರ್ಶಿ ಮಹಮ್ಮದ್ ಜಬಿಉಲ್ಲಾ, ಸಾಬಿರ್ ಅಲಿ , ಖಾದರ್ ಬಾಷ ರಜ್ವಿ, ಶೌಕತ್ ಅಲಿ ವಕೀಲರು, ಮಟನ್ ಮಹಮ್ಮದ್ ಅಲಿ , ಇಮ್ರಾನ್ ರಜಾ, ಜಬಿವುಲ್ಲಾ ವೈ, ಜಬಿ ಟೈಲ್ಸ್, ಸಯ್ಯದ್ ರಫಿಕ್ ಸಾಬ್ , ದಾದಪೀರ್ (ಶೆಕರಪ್ಪ)ಸನಾವುಲ್ಲಾ, ಷನವಾಜ್ ಖಾನ್, ನೂರ್ ಅಹಮದ್ , ಜಾಕಿರ್ ಅರ್ಚನ, ಮುಷ್ತಾಖ್, ಎನ್ ಅರ್ ರಫಿ, ಸಯ್ಯದ್ ಸ್ಯಪುಲ್ಲಾ, ಟ್ರಾನ್ಸ್‌ಪೋರ್ಟ್, ಕೆ ಸಿ ಮೊಹಮ್ಮದ್, ಗ್ಯಾರೆಜ್ ಅಷ್ಷು, ಸಯ್ಯದ್ ಇಮ್ತಿಯಾಜ್,( ಚೊಟು ಇಂಜಿನಿಯರಿಂಗ್) ಬೇಗ್, ಸಲಿಂ ಸಾಗರ್, ಮ್ಯಾನೇಜರ್ ಮಹಮ್ಮದ್ ಜಾಬಿರ್ , ಅಬು ಸ್ವಾಲೆಹಾ, ಬರ್ಕತ್ ಹಬಿಬ್