ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಕೋಲಾರದಲ್ಲಿ ಶುಕ್ರವಾರ ಮಸೀದಿಗಳ ಮುಂದೆ ಪ್ಲೇ ಕಾರ್ಡ್ ಪ್ರದರ್ಶನ ಮಾಡಿ ಮಾನವ ಸರಪಳಿ ಮಾಡುವ ಮೂಲಕ ಮೌನ ಪ್ರತಿಭಟನೆ ಮಾಡಲಾಯಿತು.
ಕರ್ನಾಟಕ ರಾಜ್ಯಾದ್ಯಂತ ಇಂದು ನಮಾಜ್ ಬಳಿಕ ಮಸೀದಿಗಳ ಮುಂಭಾಗದಲ್ಲಿ ಮಾನವ ಸರಪಳಿ ಮಾಡುವ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಮೌನ ಪ್ರತಿಭಟನೆಗೆ ಉಲೆಮಾಗಳು ಕರೆ ನೀಡಿದ್ದರು. ಅದರಂತೆ ಕೋಲಾರದ ಎಲ್ಲಾ ಮಸೀದಿಗಳ ಮುಂದೆ ಪ್ರತಿಭಟನೆ ಮಾಡಲಾಗಿದೆ.
ಕೋಲಾರ ನಗರದ ಬಹುತೇಕ ಮಸೀದಿಗಳ ಎದುರು ಎಲ್ಲರೂ ಕೈಗೆ ಕಪ್ಪು ಪಟ್ಟಿ ಧರಿಸಿ, ಭಿತ್ತಿ ಪತ್ರ ಹಿಡಿದು ಮಾನವ ಸರಪಳಿ ಮಾಡುವ ಮೂಲಕ ವಕ್ಫ್ ಕಾಯ್ದೆ ಹಿಂಪಡೆಯಲು ಆಗ್ರಹಿಸಿದರು.
ಇದನ್ನೂ ಓದಿ: ಕೋಲಾರ | ಕೋಮುಲ್ ಸರ್ಕಾರಿ ನಾಮ ನಿರ್ದೇಶಕರಾಗಿ ಯೂನುಸ್ ಶರೀಫ್ ನೇಮಕ
ಕೋಲಾರದ ಹಜರತ್ ಬಿಲಾಲ್ ಮಸೀದಿಯ ಇಮಾಮ್ ಸಾಬ್ ಮೌಲಾನ ಖಲಿಲುಲ್ ರಷಾದಿ ಮಾತನಾಡಿಮ “ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ ಸಂವಿಧಾನ ಹಾಗೂ ಷರಿಯತ್ ನ ವಿರುದ್ಧವಾಗಿರುವುದರಿಂದ ಈ ಕೂಡಲೇ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ನಿಲ್ಲುವುದಿಲ್ಲ. ವಕ್ಫ್ ತಿದ್ದುಪಡಿ ಕಾಯ್ದೆ ವಾಪಸ್ ಪಡೆಯಬೇಕು” ಎಂದು ಆಗ್ರಹಿಸಿದರು.
