ಗದಗ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಜಿಲ್ಲಾ ಅಧಿಕಾರಿಯಾಗಿ ನೇಮಕವಾಗಿರುವ ರವಿ ಎಲ್ ಗುಂಜೀಕರ್ ಮತ್ತು ಗದಗ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬಸವರಾಜ ವಿ ಬಳ್ಳಾರಿ ಅವರಿಗೆ ಅವರ ಹಳೆಯ ವಿದ್ಯಾರ್ಥಿಗಳು ಶುಭಕೋರಿ, ಸನ್ಮಾನ ಮಾಡಿದ್ದಾರೆ.
ಈ ಇಬ್ಬರೂ ಅಧಿಕಾರಿಗಳು ಈ ಹಿಂದೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಆ ವೇಳೆ, ಅವರ ವಿದ್ಯಾರ್ಥಿಗಳಾಗಿದ್ದ ಹಲವರು ಇಬ್ಬರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಬಹಳಷ್ಟು ಸಹಾಯ, ಸಹಕಾರ ಮಾಡುತ್ತಾ ಬಂದಿರುವ ಈ ಇಬ್ಬರು ಅಧಿಕಾರಿಗಳು ಇನ್ನೂ ಮುಂದಿನ ದಿನಗಳಲ್ಲಿ ಬಡವರ ಮತ್ತು ನೊಂದ ವಿದ್ಯಾರ್ಥಿಗಳಿಗೆ ಮತ್ತಷ್ಟು ಸಹಾಯ ಮಾಡಬೇಕೆಂದು ಆಶಿಸಿದರು.
ಈ ಸಂಧರ್ಭದಲ್ಲಿ ವಕೀಲರಾದ ಮೈಲಾರಪ್ಪ ಡಿ ಎಚ್, ಗುತ್ತಿಗೆದಾರರಾದ ಮಾರುತಿ ಜಿ ಎಚ್, ಸಮಾಜಿಕ ಕಾರ್ಯಕರ್ತರಾದ ವಿಶ್ವನಾಥ ದಲಾಲಿ, ಪರಶುರಾಮ ತಳವಾರ, ಮುತ್ತು ಮ್ಯಾಗೇರಿ, ಸುರೇಶ ಹಾಳಕೆರಿ, ಲೋಕೇಶ ಬಂಡಿವಡ್ಡರ ಇತರರು ಇದ್ದರು.