ವಿಜಯಪುರ ನಗರದ ಅಟಲ್ ಬಿಹಾರಿ ವಾಜಪೇಯಿ ವೃತ್ತದ ಬಳಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಬೇಕು ಎಂದು ಆಗ್ರಹಿಸಿ ಬೀದಿ ಬದಿ ತರಕಾರಿ ವ್ಯಾಪಾರಸ್ಥರ ಸಂಘದವರು ಹಾಗೂ ಸಿಪಿಎಂ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ಸುರೇಖಾ ರಜಪೂತ ಮಾತನಾಡಿ, “ಬೀದಿಬದಿ ವ್ಯಾಪಾರಸ್ಥರ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿದೆ. ಜೀವನ ನಡೆಸಲು ಕಷ್ಟಕರವಾಗಿದೆ. ಅವರ ಭವಿಷ್ಯ ಜಿಲ್ಲಾಡಳಿತದ ಕೈಯಲ್ಲಿದೆ. ನಮಗೆ ನಗರದ ಅಟಲ್ ಬಿಹಾರಿ ವಾಜಪೇಯಿ ವೃತ್ತದಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರು ಸೇರಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬೇಬಿ ಸಿದ್ದು ಖಂದಾರೆ, ಸುರೇಶ ಜೆ. ಬಿ, ಗಿರಿಜಭಾಯಿ ಕಂಬಾರ, ರೇಣುಕಾ ಸಿಂತೆ, ಗೌರಮ್ಮ ಹಿಪ್ಪರಗಿ, ಸವಿತಾ ಘಾಡಿಗೆ, ಇಂದೂಭಾಯಿ ರಾಠೋಡ್, ಲಕ್ಷ್ಮೀ ಪೂಜಾರಿ, ಯಮನಕ್ಕ್ ಹಂಚಿನಾಳ, ಚಂದ್ರಭಾಗ್ಯ ಕೊಟ್ಟಲಗಿ, ಇಂಡಬಾಯಿ ಚೌವ್ವಣ ಇದ್ದರು.