ಸಾರಿಗೆ ಬಸ್‌ನಿಂದ ಇಳಿಯುವಾಗ ಬಿದ್ದು ವಿದ್ಯಾರ್ಥಿನಿಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ಲಿಂಗಸೂಗೂರು ಬಸ್ ನಿಲ್ದಾಣದಲ್ಲಿ ನಡೆದಿದೆ.
ಸರಸ್ವತಿ ಬಸವರಾಜ ಎಂದು ಗುರುತಿಸಲಾಗಿದೆ. ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ವ್ಯಾಪ್ತಿಯ ಕೋಠಾ ಗ್ರಾಮದ ನಿವಾಸಿ ಎನ್ನಲಾಗಿದೆ.
ಹಟ್ಟಿ ಪಟ್ಟಣದ ಕಡೆಗೆ ತೆರಳುತ್ತಿದ್ದ ಬಸ್ ನಲ್ಲಿ ಜನದಟ್ಟಣೆಯಿಂದ ವಿದ್ಯಾರ್ಥಿಯು ಇಳಿಯುವಾಗ ಬಿದ್ದು ಗಂಭೀರ ಗಾಯವಾಗಿದೆ ಎಂದು ಹೇಳಲಾಗಿದೆ. ತಕ್ಷಣ ಸಾರ್ವಜನಿಕರ ಮೂಲಕ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅಂಬೇಡ್ಕರ್ ಪ್ರತಿಮೆಗೆ ಹಾನಿ; ದಲಿತ ಸಂಘಟನೆಗಳ ಆಕ್ರೋಶ
ಘಟನೆಯ ಬಗ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ ಜಿ ಸಾಗರ ಬಣ) ತಾಲ್ಲೂಕು ಮುಖಂಡ ಮಲ್ಲೇಶ ಮ್ಯಾಗೇರಿ ಮಾತನಾಡಿ, ಬಸ್ ಚಾಲಕರು ಬಸ್ ನಲ್ಲಿ ಜನರು ಹತ್ತುವಾಗ ಹಾಗೆಯೇ ಚಲಿಸುತ್ತಿರುತ್ತಾರೆ ಹಲವು ಬಾರಿ ಈ ರೀತಿ ಘಟನೆಗಳು ಸಂಭವಿಸಿವೆ. ಬಸ್ ನಿರ್ವಾಹಕ ಹಾಗೂ ಬಸ್ ಚಾಲಕ ಜನ ಹತ್ತಿದ ಮೇಲೆ ಹಾಗೂ ಇಳಿಯುವಾಗ ಸಮಾಧಾನವಾಗಿ ನಿಲ್ಲಬೇಕು. ತುರ್ತು ಮಾಡುವುದರಿಂದ ಇಂತಹ ಘಟನೆಗಳು ನಡೆಯುತ್ತವೆ ಎಂದರು.