ಬೆಂಗಳೂರು | ‘ಮದ್ರಾಸ್ ಐ’ ಪ್ರಕರಣಗಳ ಹೆಚ್ಚಳ; ಲಕ್ಷಣಗಳು ಇಂತಿವೆ

Date:

Advertisements
  • ಚಳಿಗಾಲದ ವಾತಾವರಣಕ್ಕೆ ಕಣ್ಣಿನ ಬೇನೆ ಪ್ರಕರಣಗಳು ಹೆಚ್ಚಳ
  • ಕಳೆದ ಮೂರು ವಾರಗಳಲ್ಲಿ ರೋಗಿಗಳ ಸಂಖ್ಯೆ ಶೇ.50ರಷ್ಟು ಹೆಚ್ಚಳ

ಪಿಂಕ್‌ ಐ ಅಥವಾ ಕಾಂಜಂಕ್ಟಿವಿಟಿಸ್ ಅಥವಾ ಮದ್ರಾಸ್ ಐ ಎಂದು ಕರೆಯಿಸಿಕೊಳ್ಳುವ ಈ ಸೋಂಕಿನ ಪ್ರಕರಣಗಳು ಕಳೆದ ಮೂರ್ನಾಲ್ಕು ವಾರಗಳಲ್ಲಿ ಬೆಂಗಳೂರಿನಲ್ಲಿ ಹೆಚ್ಚಳವಾಗಿ ಕಂಡುಬರುತ್ತಿದ್ದು, ಮಕ್ಕಳಲ್ಲಿ ಈ ಬೇನೆ ಹೆಚ್ಚಾಗಿ ಕಂಡುಬರುತ್ತಿದೆ.

“ಚಳಿಗಾಲದ ವಾತಾವರಣಕ್ಕೆ ಕಣ್ಣಿನ ಬೇನೆ ಪ್ರಕರಣಗಳು ಹೆಚ್ಚಳವಾಗಿದ್ದು, ಪ್ರತಿ ಬಾರಿ ಈ ಸಮಸ್ಯೆ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಇವುಗಳು ಹೆಚ್ಚಾಗಿ ಅಡೆನೊವೈರಸ್‌ನಿಂದ ಉಂಟಾಗುವ ವೈರಲ್ ಸೋಂಕುಗಳು” ಎಂದು ವೈದ್ಯರು ಹೇಳಿದ್ದಾರೆ.

“ಕಳೆದ ಮೂರು ವಾರಗಳಲ್ಲಿ ರೋಗಿಗಳ ಸಂಖ್ಯೆ ಶೇ.50ರಷ್ಟು ಹೆಚ್ಚಿದೆ. ಆದರೆ, ಒಂದು ವಾರದಲ್ಲಿ ಶೇ.90ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ” ಎಂದು ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞ ಡಾ.ಆನಂದ್ ಬಾಲಸುಬ್ರಮಣ್ಯಂ ತಿಳಿಸಿದ್ದಾರೆ.

Advertisements

“ಹೆಚ್ಚಿನವರಿಗೆ ಈ ರೋಗವು ಸ್ವಾಭಾವಿಕವಾಗಿ ಪರಿಹಾರವಾಗಿದ್ದರೂ, ವೈದ್ಯರ ಸಲಹೆಯನ್ನು ಪಡೆಯುವುದು ಮುಖ್ಯವಾಗಿದೆ. ದಿನಕ್ಕೆ ಸುಮಾರು 100 ಕಾಂಜಂಕ್ಟಿವಿಟಿಸ್ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಈ ಪೈಕಿ 35-40 ಪ್ರತಿಶತ ಮಕ್ಕಳಿದ್ದಾರೆ” ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ ರೋಹಿತ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

“ನಮ್ಮ ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಕಾಲು ಭಾಗದಷ್ಟು ಜನರು ಕಾಂಜಂಕ್ಟಿವಿಟಿಸ್‌ಗೆ ಒಳಗಾಗಿರುತ್ತಾರೆ. ಇದಕ್ಕೆ ಸ್ಟಿರಾಯ್ಡ್ ಗಳಂತಹ ಪರಿಣಾಮಕಾರಿ ಚಿಕಿತ್ಸೆಗಳು ಬೇಕಾಗಬಹುದು. ಮೂರರಿಂದ ಆರು ಪ್ರತಿಶತ ಪ್ರಕರಣಗಳಲ್ಲಿ ಕಾರ್ನಿಯಾ, ಹುಣ್ಣುಗಳ ಮೇಲೆ ಚುಕ್ಕೆಗಳ ಗುರುತುಗಳು ಕಾಣುತ್ತವೆ. ರೋಗಿಯು ಚೇತರಿಸಿಕೊಳ್ಳಲು ಆರು ತಿಂಗಳಿಂದ ಒಂದು ವರ್ಷ ತೆಗೆದುಕೊಳ್ಳಬಹುದು” ಎಂದು ಡಾ ಶೆಟ್ಟಿ ತಿಳಿಸಿದ್ದಾರೆ.

“ಅಲರ್ಜಿಗಳು, ಆಸ್ತಮಾ ಮತ್ತು ಒಣ ಕಣ್ಣುಗಳಂತಹ ಗುಣಲಕ್ಷಣಗಳನ್ನು ಹೊಂದಿರುವ ರೋಗಿಗಳು ಮತ್ತು ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಬಳಸುವವರು ಕಾಂಜಂಕ್ಟಿವಿಟಿಸ್‌ಗೆ ಹೆಚ್ಚು ಗುರಿಯಾಗುತ್ತಾರೆ” ಎಂದು ಅವರು ಹೇಳಿದ್ದಾರೆ.

“ಈಗ ಆಸ್ಪತ್ರೆಗೆ ಬರುವ ರೋಗಿಗಳಲ್ಲಿ ಶೇ.20 ರಷ್ಟು ರೋಗಿಗಳಿಗೆ ಕಾಂಜಂಕ್ಟಿವಿಟಿಸ್ ಇದೆ. ರೋಗಿಗಳು ಕಣ್ಣುಗಳಲ್ಲಿ ಮಂದ ನೋವು ಮತ್ತು ಭಾರವನ್ನು ಅನುಭವಿಸುತ್ತಾರೆ. ಕಿರಿಯ ರೋಗಿಗಳಲ್ಲಿ ಹೆಚ್ಚಾಗಿ ಕೆಂಪು ಕಣ್ಣು ಮತ್ತು ಅಸ್ವಸ್ಥತೆ ಕಂಡುಬರುತ್ತದೆ” ಎಂದು ಮಿಂಟೋ ನೇತ್ರ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೆಐಎ ಸಿಬ್ಬಂದಿ ಮೇಲೆ ಅಸಮಾಧಾನ ಹೊರಹಾಕಿದ ರಾಜಭವನದ ಉನ್ನತ ಅಧಿಕಾರಿಗಳು

ಪ್ರಕರಣಗಳ ಏರಿಕೆಗೆ ಕಾರಣವೇನು?

ರಾಜ್ಯದ ನಾನಾ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಹವಾಮಾನ ವೈಪರೀತ್ಯದಿಂದ ಹಾಗೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕಣ್ಣಿನ ಊರಿಯೂತ ಸಮಸ್ಯೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ‘ಮದ್ರಾಸ್ ಐ’ ಕಣ್ಣಿನ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಉತ್ತರ ಭಾರತದಲ್ಲಿ ಈ ಪ್ರಕರಣಗಳು ಹೆಚ್ಚಾಗಿ ಏರಿಕೆಯಾಗಿವೆ. ಈ ವರ್ಷ ಸುರಿಯುತ್ತಿರುವ ಅಧಿಕ ಮತ್ತು ಅವಧಿಗೂ ಮುಂಚೆ ಶುರುವಾದ ಮಳೆ ಪ್ರಕರಣಗಳ ಏರಿಕೆಗೆ ಕಾರಣ ಎಂದು ತಜ್ಞರು ಹೇಳಿದ್ದಾರೆ.

ಕೋವಿಡ್ 19 ಸಮಯದಲ್ಲಿ ಜನರು ಸ್ವಚ್ಛತೆಗೆ ಹೆಚ್ಚು ಒಲವು ತೋರಿದ್ದರು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದರು. ಹಾಗಾಗಿ, 2019ರಲ್ಲಿ ಕಣ್ಣಿನ ಬೇನೆ ವ್ಯಾಪಕವಾಗಿ ಹರಡಿರಲಿಲ್ಲ.

ತೇವಾಂಶ ಹೆಚ್ಚಾದಾಗ ಅಥವಾ ಚಳಿಗಾಲದ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಈ ವೈರಾಣುಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ.

ಕಾಂಜಂಕ್ಟಿವಿಟಿಸ್ಪ್ರಮುಖ ಲಕ್ಷಣಗಳು

ಕಣ್ಣಿನಲ್ಲಿ ಏನೋ ಇದೆ ಎಂಬ ಭಾವನೆ, ಕಣ್ಣುಗಳು ಕೆಂಪಾಗುವುದು, ಉರಿಯುವುದು, ಕಣ್ಣುಗಳಲ್ಲಿ ತುರಿಕೆ, ಕಣ್ಣುಗುಡ್ಡೆಯ ಊತ, ರೆಪ್ಪೆ ಅಂಟಿಕೊಳ್ಳುವುದು, ಕಣ್ಣಿನ ಬಣ್ಣ ಗುಲಾಬಿ ಅಥವಾ ಕೆಂಪು ಬಣ್ಣಕ್ಕೆ ತಿರುಗುವುದು, ಕಣ್ಣಲ್ಲಿ ಅತಿಯಾಗಿ ನೀರು ಬರುವಿಕೆ, ಕಣ್ಣುಗಳ ನಿರಂತರ ಅಸ್ವಸ್ಥತೆ, ಮಬ್ಬು ದೃಷ್ಟಿ, ಸಾಕಷ್ಟು ಲೋಳೆ, ಕೀವು ಅಥವಾ ಕಣ್ಣಿನಿಂದ ದಪ್ಪ ಹಳದಿ ಸ್ರವಿಸುವಿಕೆ ಇವು ಕಾಂಜಂಕ್ಟಿವಿಟಿಸ್‌ನ ಪ್ರಮುಖ ಲಕ್ಷಣಗಳಾಗಿವೆ.

ಮುಂಜಾಗೃತಾ ಕ್ರಮಗಳು

  • ಆದಷ್ಟು ಜನಸಂದಣಿ ಇರುವ ಕಡೆಗೆ ಹೋಗುವುದನ್ನು ತಪ್ಪಿಸಬೇಕು
  • ಕಣ್ಣುಗಳನ್ನು ಮುಟ್ಟಬೇಡಿ 
  • ಆಗಾಗ ನಿಮ್ಮ ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆಯಿರಿ
  • ಕಣ್ಣುಗಳ ಆಯಾಸ ತಡೆಯಲು ಟಿ.ವಿ ಮೊಬೈಲ್ ವೀಕ್ಷಣೆ ಕಡಿಮೆ ಮಾಡುವುದು
  • ಸೋಂಕಿತ ವ್ಯಕ್ತಿ ಬಳಸಿದ ಟವೆಲ್ ಸೇರಿ ನಾನಾ ವಸ್ತುಗಳನ್ನು ಬಳಸದಿರುವುದು.

ಕಾಂಜಂಕ್ಟಿವಿಟಿಸ್ ಹೊಂದಿದ್ದರೆ ಏನು ಮಾಡಬೇಕು?

  • ವೈದ್ಯರು ಸೂಚಿಸಿದ ಔಷಧಿಗಳನ್ನು ಬಳಸಬೇಕು
  • ಕಣ್ಣುಗಳನ್ನು ಪದೇಪದೆ ತೊಳೆಯಬೇಡಿ. ಆದರೆ, ಅವುಗಳನ್ನು ಒದ್ದೆಯಾದ ಹತ್ತಿ ಸ್ವ್ಯಾಬ್‌ನಿಂದ ಸ್ವಚ್ಛಗೊಳಿಸುತ್ತಿರಿ.
  • ಯಾವುದೇ ರೀತಿಯ ಕನ್ನಡಕವನ್ನು ಧರಿಸಬಹುದು. ಇದರಿಂದ ನೀವು ನಿಮ್ಮ ಕಣ್ಣುಗಳನ್ನು ಮುಟ್ಟುವುದಿಲ್ಲ. ಇನ್ನೊಬ್ಬರು ನೋಡುವುದರಿಂದ ಹರಡುವುದಿಲ್ಲ. 
  • ಕೆಲವೊಮ್ಮೆ ಕಾಂಜಂಕ್ಟಿವಿಟಿಸ್ ಸಹ ನೋಯುತ್ತಿರುವ ಗಂಟಲು, ವೈರಲ್ ಅಥವಾ ಜ್ವರದಿಂದ ಬರಬಹುದು. ಈ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು. 
  • ಊತದ ಮೇಲೆ ಕೋಲ್ಡ್ ಕಂಪ್ರೆಸ್ ಅನ್ನು ಬಳಸಿ
  • ನಿಮಗೆ ಜ್ವರ ಬಂದಾಗ ಜನಸಂದಣಿ, ಕಚೇರಿಗಳು ಅಥವಾ ಶಾಲೆಗಳಿಗೆ ಹೋಗುವುದನ್ನು ತಪ್ಪಿಸಿ. ಕಣ್ಣುಗಳು ಕೆಂಪಾಗಿರುವವರೆಗೆ ಅಥವಾ ಜಿಗುಟಾದ ಡಿಸ್ಚಾರ್ಜ್ ಇರುವವರೆಗೆ, ವೈರಸ್ ಇನ್ನೂ ಇರುತ್ತದೆ. 
  • ಸೋಂಕಿತ ವ್ಯಕ್ತಿ ಹೊರಗಡೆ ತೆರಳದಿರುವುದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ಬೆಂಗಳೂರಿನ ವಿಲ್ಲಾವೊಂದರಲ್ಲಿ ವಾಸವಿದ್ದ 53 ವರ್ಷದ ಮಹಿಳೆ ತನ್ನ ಕಾಮ ತೃಷೆಗಾಗಿ...

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X