ಆಫ್ರಿಕಾದಿಂದ ಉತ್ತರ ಕರ್ನಾಟಕದವರೆಗೆ ‘ಅಳ್ಳಿ ಬವ್ವ’ ಸಂಸ್ಕೃತಿ ಪಥ; ಇದು ಮೊಹರಂ ವಿಶೇಷ

Date:

Advertisements
ಆಫ್ರಿಕಾದ ಕಡೆಯಿಂದ ವಲಸೆ ಬಂದ ಬುಡಕಟ್ಟು ಜನರು ಭಾರತದ ವಿವಿಧ ಭಾಗಗಳಲ್ಲಿ ನೆಲೆಸಿ ತಮ್ಮದೇ ಆದ ಸಂಸ್ಕೃತಿ ಮತ್ತು ಆಚರಣೆಗಳನ್ನು ಇಲ್ಲಿ ಬೆರೆಸಿದರು. ವಿಶೇಷವಾಗಿ ಸೂಫಿ ಪರಂಪರೆ ಮತ್ತು ಮೊಹರಂ ಸಂಸ್ಕೃತಿಯ ಬೆಳವಣಿಗೆಯಲ್ಲಿ ಈ ವಲಸಿಗರ ಪಾತ್ರ ಪ್ರಮುಖವಾಗಿತ್ತು.

ಪ್ರತಿಯೊಂದು ಧಾರ್ಮಿಕ ಆಚರಣೆಯ ಹಿಂದೆಯೂ ಇತಿಹಾಸ, ಸಂಸ್ಕೃತಿ ಹಾಗೂ ಮೌಲ್ಯಗಳ ಮಿಶ್ರಣವಿರುತ್ತದೆ. ಮೊಹರಂ ಹಬ್ಬವು ಕೂಡ ಅಂತಹದೇ ಒಂದು ಉದಾಹರಣೆ. ಇದು ಇಸ್ಲಾಂ ಧರ್ಮೀಯರ ಶೋಕಾಚರಣೆಯ ಹಬ್ಬವಾಗಿದ್ದರೂ, ಅದರೊಳಗಿನ ತಾತ್ಪರ್ಯ ಬಹುದೂರವರೆಗೆ ವ್ಯಾಪಿಸಿದೆ. ಮಾನವೀಯತೆ, ಧಾರ್ಮಿಕ ಸಹಿಷ್ಣುತೆ ಮತ್ತು ಭಾವೈಕ್ಯತೆಯ ದಿಕ್ಕಿನಲ್ಲಿ ಮೊಹರಂ ಸಾಗಿದೆ.

ಮೊಹರಂ ಹಬ್ಬದ ಕೇಂದ್ರಬಿಂದು ಕರ್ಬಲಾ ಎಂಬ ಸ್ಥಳ ಹಾಗೂ ಅಲ್ಲಿ ನಡೆದ ವೀರಗಾಥೆ. ಮೊಹಮ್ಮದ್ ಪೈಗಂಬರ್ ಅವರ ಮೊಮ್ಮಗ ಇಮಾಮ್ ಹುಸೇನ್ ಅವರು ನ್ಯಾಯ, ಸತ್ಯ ಮತ್ತು ಧರ್ಮಕ್ಕಾಗಿ ತಮ್ಮ ಜೀವವನ್ನೇ ಉಡಗಿಸಿದ ಸ್ಮರಣೆಯಾಗಿದೆ ಮೊಹರಂ. ಅವರ ಬಲಿದಾನವು ಕೇವಲ ಧಾರ್ಮಿಕವಷ್ಟೇ ಅಲ್ಲ, ನೈತಿಕತೆಯ ಮೇಲ್ವಿಚಾರಣೆಯೂ ಹೌದು. ಇಂದಿನ ಪೀಳಿಗೆಗೆ ಇದು ದೊಡ್ಡ ಪಾಠವಾಗಿದೆ.

ಉತ್ತರ ಕರ್ನಾಟಕದಲ್ಲಿ ಮೊಹರಂ ಹಬ್ಬವು ಮತ್ತೊಂದು ವಿಶಿಷ್ಟ ಅರ್ಥವನ್ನೇ ಪಡೆದುಕೊಂಡಿದೆ. ಮೊಹರಂ ಹಬ್ಬವು ಸಮಾಜದಲ್ಲಿ ಧಾರ್ಮಿಕ ಸಾಮರಸ್ಯದ ಬೆನ್ನೆಲುಬಾಗಿ ಕಾಣಿಸಿಕೊಂಡಿದೆ. ಹಿಂದೂ ಹಾಗೂ ಮುಸ್ಲಿಂ ಸಮುದಾಯಗಳ ಪರಸ್ಪರ ಭಾಗವಹಿಸುವಿಕೆ, ಮೆರವಣಿಗೆಗಳಿಗೆ ಸಹಕಾರ, ತಜಿಯಾ ನಿರ್ಮಾಣದಲ್ಲಿ ಶ್ರಮದ ಹರಿವು — ಇವೆಲ್ಲವೂ ನಾವೆಲ್ಲರೂ ಒಂದು ಎನ್ನುವ ಬಲವಾದ ಸಂದೇಶ ನೀಡುತ್ತವೆ.

Advertisements

ಧರ್ಮಗಳ ಮಿತಿಯನ್ನು ಮೀರಿದ ಅಳ್ಳಿ ಬವ್ವ, ಕಳ್ಳಿ ಬವ್ವ (ಕರ್ಚಿಕಟಾ) ವೇಷಧಾರಿ ಆಚರಣೆ

ಮೊಹರಂ ಹಬ್ಬದ ದಿನಗಳಲ್ಲಿ ಹಿಂದೂ ಸಮುದಾಯದವರು ಹಾಕುವ ಅಳ್ಳಿಬವ್ವ, ಕರ್ಚಿಕಚಾ, ಕಳ್ಳಿಬವ್ವ, ಅಚೊಳ್ಳಿ-ಬಿಚೊಳ್ಳಿ, ಹುಲಿ ವೇಷಧಾರಿ ಸೋಗುಗಳು, ಹೆಜ್ಜೆ ಕುಣಿತ, ಕರ್ಬಲಾ ಪದಗಳು, ಹಿಂದೂ ಮುಸ್ಲಿಂ ಧರ್ಮದ ಸಹೋದರತ್ವಕ್ಕೆ ಸಾಕ್ಷಿಯಾಗಿ ನಿಂತಿವೆ.

ಇದನ್ನೂ ಓದಿರಿ: ಜಾತ್ಯತೀತತೆ, ಸಮಾಜವಾದದ ಪ್ರಖರ ಪ್ರತಿಪಾದಕ ಬುದ್ಧ; ಇದನ್ನು ಮರೆಮಾಚಲಾಗದು ಆರ್‌ಎಸ್‌ಎಸ್

ಈ ವೇಷಧಾರಿಗಳು ಮುಖಕ್ಕೆ ಕಪ್ಪು ಮಸಿ ಬಳಿದು, ಸೊಂಟಕ್ಕೆ ಗಂಟೆಯ ಗೆಜ್ಜೆ ಕಟ್ಟಿಕೊಂಡು, ತಲೆಗೆ ಲಾಲಿಕೆಯಾಕಾರದ ಅಲಂಕೃತ ಟೋಪಿ ಧರಿಸಿ ಮನೆಮನೆಗೆ ಹೋಗಿ ಅಕ್ಕಿ, ಜೋಳ, ಮತ್ತಿತರ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಈ ಸಂಗ್ರಹಿತ ಧಾನ್ಯಗಳು ಮೊಹರಂ ಹಬ್ಬದ ಸಂದರ್ಭದಲ್ಲಿ ಸೇವೆಗಾಗಿ ಉಪಯೋಗವಾಗುತ್ತವೆ. ಈ ಆಚರಣೆಗಳಲ್ಲಿ ಯಾವುದೇ ಧಾರ್ಮಿಕ ಪ್ರತ್ಯೇಕತೆ ಇಲ್ಲದೆ, ಪರಸ್ಪರ ಸಹಕಾರ, ಗೌರವ ಮತ್ತು ಭಾವೈಕ್ಯತೆಯ ಭಾವನೆ ಕಾಣಿಸುತ್ತವೆ.

moharam 1

ಅಳ್ಳಿ ಬವ್ವ (ಕರ್ಚಿ ಕಟಾ) ವೇಷಧಾರಿ ವಿಶಿಷ್ಟ ಆಚರಣೆಗೆ ಐತಿಹಾಸಿಕ ಮಹತ್ವವಿದ್ದು, ಆಫ್ರಿಕಾದ ಕಡೆಯಿಂದ ವಲಸೆ ಬಂದ ಬುಡಕಟ್ಟು ಜನರು ಭಾರತದ ವಿವಿಧ ಭಾಗಗಳಲ್ಲಿ ನೆಲೆಸಿ ತಮ್ಮದೇ ಆದ ಸಂಸ್ಕೃತಿ ಮತ್ತು ಆಚರಣೆಗಳನ್ನು ಇಲ್ಲಿ ಬೆರೆಸಿದರು. ವಿಶೇಷವಾಗಿ ಸೂಫಿ ಪರಂಪರೆ ಮತ್ತು ಮೊಹರಂ ಸಂಸ್ಕೃತಿಯ ಬೆಳವಣಿಗೆಯಲ್ಲಿ ಈ ವಲಸಿಗರ ಪಾತ್ರ ಪ್ರಮುಖವಾಗಿತ್ತು. ಆಫ್ರಿಕಾ ಮೂಲದ ಕೆಲವು ಬುಡಕಟ್ಟು ಜನಾಂಗಗಳು ಮೊಹರಂ ಹಬ್ಬದಲ್ಲಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು.

ಇದನ್ನು ಸಂಕೇತಿಸುವಂತೆ ಅವರು ಅಳ್ಳಿ ಬವ್ವ, ಕರ್ಚಿಕಟಾ, ಕಳ್ಳಿ ಬವ್ವ ಎಂಬ ಹೆಸರುಗಳೊಂದಿಗೆ ವೇಷಗಳನ್ನು ಧರಿಸಿ, ತಾವು ದೇವರಿಗೆ ಸಲ್ಲಿಸುವ ಸೇವೆಯನ್ನು ವಿಭಿನ್ನ ರೀತಿಯಲ್ಲಿ ಪ್ರದರ್ಶಿಸಿದರು. ಕಪ್ಪು ಮಸಿ ಬಳಿದು, ಗೆಜ್ಜೆ, ಲಾಲಿಕೆ, ವಿಶಿಷ್ಟ ನೃತ್ಯ-ಚಾಲನೆಗಳಿಂದ ಕೂಡಿದ ಈ ವೇಷಧಾರಣೆಯು ಭಕ್ತಿಯ ಜೊತೆಗೆ ಕಲೆ, ಸಂಸ್ಕೃತಿಯ ಸಮ್ಮಿಲನವಾಗಿ ಕಾಣುತ್ತಾರೆ.

ಅಂದಿನಿಂದ ಇಂದಿನವರೆಗೂ ಈ ವಿಶಿಷ್ಟ ಸಂಸ್ಕೃತಿ, ತಾಳಮೇಳದ ಉತ್ಸವ ರೂಪವಾಗಿ, ವಿಭಿನ್ನ ನಂಬಿಕೆಗಳ ಹಬ್ಬವಾಗಿ ಜಾರಿಯಲ್ಲಿದೆ. ಹಿಂದೂ ಮುಸ್ಲಿಂ ಸಹಭಾವನೆಗೆ ಸಾಕ್ಷಿಯಾಗಿರುವ ಈ ಸಂಪ್ರದಾಯ, ಕರ್ನಾಟಕದ ವಿಶೇಷತೆಯಾಗಿ ಉಳಿದುಕೊಂಡಿದೆ.

ಅಹಂಕಾರದ ಸಂಕೇತ ಹುಲಿ ವೇಷ

ಮನುಷ್ಯನ ಜೀವನದಲ್ಲಿ ಅಹಂಕಾರ ಒಂದು ಭಯಾನಕ ಶತ್ರು. ಅದು ವ್ಯಕ್ತಿಯಲ್ಲಿನ ಮೌನ, ವಿನಮ್ರತೆ ಮತ್ತು ಸಹಜ ಮಾನವೀಯತೆಯನ್ನು ನಶಿಸುತ್ತದೆ. ಈ ಅಹಂಕಾರವನ್ನು ತೊಳೆದು ಹಾಕಬೇಕೆಂಬ ತೀವ್ರ ತಾತ್ವಿಕ ಮತ್ತು ಸಾಂಸ್ಕೃತಿಕ ಪ್ರತೀಕವಾಗಿ ಬಳಕೆಯಲ್ಲಿರುವುದು ಮೊಹರಂ ಹಬ್ಬದ ‘ಹುಲಿ ವೇಷ’ ಹಾಗೂ ‘ಅಳ್ಳಿ ಬವ್ವ’ ಅಥವಾ ‘ಕಳ್ಳಿಬವ್ವ’ ಎಂಬ ಪಾತ್ರಗಳು.

Moharam 2

ಮೊಹರಂ ಹಬ್ಬದ ಸಂದರ್ಭದಲ್ಲಿ ಹುಲಿ ವೇಷವನ್ನು ಧರಿಸುವುದು ಬಹುಶಃ ಅಲ್ಲಿನ ನಾಡು-ನುಡಿಗಳಲ್ಲಿ ಅಸ್ತಿತ್ವದಲ್ಲಿರುವ ಅನನ್ಯ ಸಂಸ್ಕೃತಿಯ ಸಂಕೇತ. ಈ ವೇಷವು ಶಕ್ತಿಯಲ್ಲಿಯೇ ಅಹಂಕಾರದ ಸಂಕೇತವಾಗಿದೆ. ಮೈಮೇಲೆ ಬಣ್ಣದ ಪಟ್ಟೆ, ಗಾಯನ- ವಾಯನಗಳೊಂದಿಗೆ ರಸ್ತೆಯಲ್ಲಿ ಪಥಸಂಚಲನೆ ಮಾಡುವ ಈ ಕಲಾತ್ಮಕ ಪ್ರದರ್ಶನವು, ಹೊರಗಿನಿಂದ ಕೇವಲ ಮೇಳವಾಹಿನಿಯಂತೆ ಕಾಣಬಹುದು. ಆದರೆ ಅದರ ಹಿಂದಿರುವ ಆಶಯ ಸಾಕಷ್ಟು ಗಂಭೀರ.

ಇದನ್ನೂ ಓದಿರಿ: ಹಾವೇರಿ | ಮುಸ್ಲಿಮರೇ ಇಲ್ಲದ ಊರಲ್ಲಿ ಮೊಹರಂ ಸಂಭ್ರಮ!

ಈ ಹುಲಿಯನ್ನು ನುಂಗಲು ಕಳ್ಳಿ ಬವ್ವ (ಕರ್ಚಿಕಟಾ) ಬರುತ್ತದೆ. ಇದು ಅಹಂಕಾರದ ವಿರುದ್ಧದ ಪ್ರತಿರೋಧ ಶಕ್ತಿಯ ರೂಪಕ. ಈ ಸಂದರ್ಭದಲ್ಲಿ ಹುಲಿಗಳು ಒಟ್ಟುಗೂಡುತ್ತವೆ, ಕಳ್ಳಿ ಬವ್ವವನ್ನು ಓಡಿಸುತ್ತವೆ. ಇದರಿಂದಾಗಿ ಅಹಂಕಾರ ಸಂಪೂರ್ಣವಾಗಿ ನಾಶವಾಗುವುದಿಲ್ಲ ಎಂಬುದನ್ನು ಹಿರಿಯರು ಬೋಧಿಸುತ್ತಾರೆ. “ಅಹಂಕಾರದ ಹುಲಿ ನಾಶವಾಗದೆ ಮನುಷ್ಯನಲ್ಲಿ ಇನ್ನೂ ಇದೆ” ಎಂಬ ಅವರ ಮಾತು ಬಹಳ ಅರ್ಥಪೂರ್ಣವಾದ ಮಾತು.

ಮೊಹರಂ ಹಬ್ಬದ ಹೃದಯದಲ್ಲಿ ಇರುವ ಕರ್ಬಲಾ ಯುದ್ಧ, ಇಮಾಮ್ ಹುಸೇನ್ ಅವರ ಧೈರ್ಯ ಮತ್ತು ಧರ್ಮಪಾಲನೆಯ ಕಥೆ, ಕೇವಲ ಇಸ್ಲಾಂ ಧರ್ಮೀಯರ ಬಗೆಯಲ್ಲದೆ, ಎಲ್ಲರಿಗೂ ಸಮಾನವಾಗಿ ನೈತಿಕ ಪಾಠ ನೀಡುತ್ತದೆ. ಆದರೆ ಈ ಹಬ್ಬದ ಸೌಂದರ್ಯ ಅಲ್ಲಿಯೇ ನಿಲ್ಲುವುದಿಲ್ಲ – ವಿಶೇಷವಾಗಿ ಉತ್ತರ ಕರ್ನಾಟಕದ ನಾಡಿನಲ್ಲಿ ಮೊಹರಂ ಹಬ್ಬವು ಧರ್ಮಾತೀತ ಸಹಭಾಗಿತ್ವ, ಕಲಾತ್ಮಕ ಪರಂಪರೆ ಮತ್ತು ಮಾನವೀಯ ಸಹಜತೆಯ ಜಾತ್ರೆಯಾಗಿ ಪ್ರಭಾವ ಬೀರುತ್ತಿದೆ.

ಸುನಿಲ್
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X