ಗಾಝಾ ಪರವಾಗಿ ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ ‘ಡಿಜಿಟಲ್ ಸತ್ಯಾಗ್ರಹ’ಕ್ಕೆ ಭಾರತೀಯ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಕರೆ ನೀಡಿದೆ. ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಎಂ.ಎ. ಬೇಬಿ ಅವರು ಗಾಜಾ ಯುದ್ಧವನ್ನು ಪ್ರತಿಭಟಿಸಿ ಒಂದು ವಾರ ‘ಡಿಜಿಟಲ್ ಸತ್ಯಾಗ್ರಹ’ ನಡೆಸಲು ಕರೆ ನೀಡಿದ್ದಾರೆ.
ಶನಿವಾರ ರಾತ್ರಿಯಿಂದ ಪ್ರತಿದಿನ ರಾತ್ರಿ 9ರಿಂದ ರಾತ್ರಿ 9.30ರವರೆಗೆ ಜನರು ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್‌ಗಳಂತಹ ತಮ್ಮ ಸಾಧನಗಳನ್ನು ಸ್ವಿಚ್ ಆಫ್ ಮಾಡುವಂತೆ ಸಿಪಿಐಎಂ ನಾಯಕರು ಒತ್ತಾಯಿಸಿದ್ದಾರೆ. ಈ ಮೂಲಕ ಇಸ್ರೇಲ್ ಅನ್ನು ಬೆಂಬಲಿಸುತ್ತಿರುವ ವಿಶ್ವದ ಕಾರ್ಪೊರೇಟ್‌ಗಳ ಆರ್ಥಿಕತೆಗೆ ಪೆಟ್ಟು ನೀಡಿ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಸಿಪಿಐ(ಎಂ)ಗೆ ಎಂ ಎ ಬೇಬಿ ಸಾರಥ್ಯ; ಪಕ್ಷವನ್ನು ತಳಮಟ್ಟದಿಂದ ಕಟ್ಟುವರೇ?
“ಗಾಝಾದಲ್ಲಿ ಲಕ್ಷಾಂತರ ಜನರನ್ನು ಹಸಿವಿನ ಸಾವಿಗೆ ದೂಡುತ್ತಿರುವ, ಯುದ್ಧಕ್ಕೇನೂ ಸಂಬಂಧವಿಲ್ಲದ ಹತ್ತಾರು ಸಾವಿರ ಮಹಿಳೆ, ಮಕ್ಕಳನ್ನು ಕೊಂದ ಇಸ್ರೇಲ್‌ನ ಅಮಾನುಷ ಸಾಮೂಹಿಕ ಜನ ಹತ್ಯೆಯ ವಿರುದ್ಧ ನಿಮ್ಮ ಮನ ಮಿಡಿಯುತ್ತಿದೆಯಲ್ಲವೇ? ಹಾಗಿದ್ದರೆ ದಯವಿಟ್ಟು ಈ ಡಿಜಿಟಲ್ ಸತ್ಯಾಗ್ರಹದಲ್ಲಿ ಭಾಗವಹಿಸಿ. ಜಗತ್ತಿನ ಕೋಟ್ಯಾಂತರ ಜನರೊಂದಿಗೆ ಭಾರತದ ದನಿ ಜೋಡಿಸಿ” ಎಂದು ಸಿಪಿಐಎಂನ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ಯ ಹರಿದಾಡುತ್ತಿದೆ.
A digital satyagraha for #Gaza
— M A Baby (@MABABYCPIM) July 5, 2025
A strong statement must be made that we ordinary citizens, too, can do something against the genocide being carried out by Israel in occupied Gaza.
From 9 pm tonight, for one week, every day from 9 to 9:30, we request all those who believe in…
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಎಂಎ ಬೇಬಿ ಅವರು, “ಗಾಝಾಗಾಗಿ ಡಿಜಿಟಲ್ ಸತ್ಯಾಗ್ರಹ. ನಾವು ಸಾಮಾನ್ಯ ನಾಗರಿಕರೂ ಗಾಝಾದಲ್ಲಿ ಇಸ್ರೇಲ್ ಇಸ್ರೇಲ್ ನಡೆಸುತ್ತಿರುವ ನರಮೇಧದ ವಿರುದ್ಧ ಏನಾದರೂ ಮಾಡಬಹುದು ಎಂಬುದನ್ನು ಬಲವಾಗಿ ನಾವು ತೋರಿಸಬೇಕು. ಯಾವುದೇ ಸಾಮಾಜಿಕ ಮಾಧ್ಯಮ, ಸಂದೇಶಗಳು, ಕಾಮೆಂಟ್‌ಗಳು ಅರ್ಧ ಗಂಟೆ ಇರದು” ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ ವಿಶೇಷ ವರದಿಗಾರ ಫ್ರಾನ್ಸೆಸ್ಕಾ ಅಲ್ಬನೀಸ್ ಅವರು ಇತ್ತೀಚೆಗೆ ಒಂದು ವರದಿಯನ್ನು ಬಿಡುಗಡೆ ಮಾಡಿದ್ದಾರೆ. ವರದಿ ಪ್ರಕಾರ ಗೂಗಲ್, ಅಮೆಜಾನ್, ಮೈಕ್ರೋಸಾಫ್ಟ್ ಮತ್ತು ಐಬಿಎಂನಂತಹ 48 ಪ್ರಮುಖ ತಂತ್ರಜ್ಞಾನ ಕಂಪನಿಗಳು ಗಾಝಾ ಯುದ್ಧದಿಂದ ಲಾಭ ಗಳಿಸುತ್ತಿದೆ. ಅಂತಹ ಒಂದು ಸಾವಿರಕ್ಕೂ ಅಧಿಕ ಕಾರ್ಪೋರೇಟ್ ಘಟಕಗಳ ಪಟ್ಟಿಯನ್ನು ಈ ವರದಿಯಲ್ಲಿ ಮಾಡಲಾಗಿದೆ. ಈ ವರದಿ ಬೆನ್ನಲ್ಲೇ ಸಿಪಿಐಎಂ ಡಿಜಿಟಲ್ ಸತ್ಯಾಗ್ರಹಕ್ಕೆ ಕರೆ ನೀಡಿದೆ.
