ಉಡುಪಿ | ಕೋಮುವಾದಿಗಳಿಗೆ ಕರವಾಳಿ, ಕೋಮು ಹಿಂಸೆಯನ್ನು ಚಾಲನೆಯಲ್ಲಿ ಇಟ್ಟುಕೊಳ್ಳುವ ಇಂಡಸ್ಟ್ರೀ – ಪ್ರೊ. ಫಣಿರಾಜ್

Date:

Advertisements

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ, ಸಹಬಾಳ್ವೆ ಮತ್ತು ಮಾನವ ಬಂಧುತ್ವ ಉಡುಪಿ ವಲಯ ಹಾಗೂ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಇಂದು ಸಾಮರಸ್ಯ ನಡಿಗೆ -ಸೌಹಾರ್ದ ಸಭೆ ಬ್ರಹ್ಮಾವರ ಸಮೀಪದ ನೀಲಾವರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭೆಗೂ ಮೊದಲು ಬ್ರಹ್ಮವಾರದ ಕುಂಜಾಲು ಕೇಳಪೇಟೆಯಿಂದ ನೀಲಾವರ ಕ್ರಾಸ್‌ವರೆಗೆ ಸಾಮರಸ್ಯ ನಡಿಗೆ ಜಾಥ ನಡೆಯಿತು.

1006096365

ಸೌಹಾರ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಹಬಾಳ್ವೆ ಉಡುಪಿ ಸಂಚಾಲಕರದ ಪ್ರೊ.ಫಣಿರಾಜ್, ಸಂಘಪರಿವಾರ ಹಾಗೂ ಬಿಜೆಪಿಗೆ ಕರಾವಳಿ ಜಿಲ್ಲೆಗಳು ಹಿಂದುತ್ವದ ಪ್ರಯೋಗಾಲಯಗಳಾಗಿವೆ. ಕೋಮು ಹಿಂಸೆಯನ್ನು ನಿರಂತರವಾಗಿ ಚಾಲನೆಯಲ್ಲಿ ಇಟ್ಟುಕೊಳ್ಳುವ ಇಂಡಸ್ಟ್ರೀ ಆಗಿದೆ. ಇದಕ್ಕೆ ಹಣ ಹೂಡಿಕೆ ಮಾಡುತ್ತಾರೆ ಮತ್ತು ಅದರ ಲಾಭದ ನಿರೀಕ್ಷೆಯಲ್ಲೂ ಇರುತ್ತಾರೆ ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು ಸಮಾಜದಲ್ಲಿ ಉದ್ರೇಕ ಎಬ್ಬಿಸಿ ಕೋಮು ಹಿಂಸೆಯನ್ನು ಜ್ವಲಂತವಾಗಿರಿಸುವ ಪ್ರಯತ್ನ ನಡೆಯುತ್ತಿದೆ. ಇದು 2000ರಿಂದ ಉಡುಪಿ ಜಿಲ್ಲೆಯಲ್ಲಿ ಮುಂದು ವರೆಯುತ್ತಿದೆ. ಇವರೇ ದಾಳಿ ಮಾಡಿ, ಇವರೇ ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಾರೆ ಎಂದ ಅವರು, ಕರಾವಳಿಯ ಹಿಂದುಳಿದ ಜಾತಿಯ ಯುವಕರನ್ನು ಸಂಘಪರಿವಾರ ಹಿಂಸೆಗೆ ಇಳಿಸುತ್ತದೆ ಮತ್ತು ಜೈಲುಪಾಲಾಗಿಸುತ್ತದೆ. ಮತ್ತೆ ಅವರಿಗೂ ಅವರ ಕುಟುಂಬಕ್ಕೂ ಹಣ ನೀಡುತ್ತದೆ. ಅವರ ಕೇಸ್ ನಡೆಸಲು ಕ್ರಿಮಿನಲ್ ವಕೀಲರನ್ನು ನಿಯೋಜಿಸಲಾಗುತ್ತದೆ. ಹೀಗೆ ಇದೊಂದು ಉದ್ಯಮವಾಗಿ ಬಿಟ್ಟಿದೆ ಎಂದು ಹೇಳಿದರು.

1006096363

ಮುಖ್ಯ ಅತಿಥಿಯಾಗಿ ಆಗಮಿಸಿದ ಚಿಂತಕ ಎಂ.ಜಿ.ಹೆಗ್ಡೆ ಮಾತನಾಡಿ, ಶಾಲಾ ವಾರ್ಷಿಕೋತ್ಸವ, ಸಾಹಿತ್ಯ, ದೇವಸ್ಥಾನದ ಕಾರ್ಯಕ್ರಮ ಗಳಲ್ಲಿಯೂ ಧ್ವೇಷ ಭಾಷಣ ಮಾಡುವುದು ಸಾಮಾನ್ಯವಾಗಿದೆ ಮತ್ತು ಭಾಷಣದ ವ್ಯಾಖ್ಯಾನ ಕೂಡ ಆಗಿದೆ. ಧರ್ಮವನ್ನು ನಿಜವಾಗಿ ಅರ್ಥಮಾಡಿಕೊಂಡು ಪಾಲನೆ ಮಾಡುವವರಿಗೆ ಬೇರೆ ಧರ್ಮದವರನ್ನು ನೋಡಿದಾಗ ಅಸಹನೆ ಹುಟ್ಟಲು ಸಾಧ್ಯವೇ ಇಲ್ಲ ಎಂದು ಹೇಳಿದರು. ಧರ್ಮದ ಅರ್ಥ ಗೊತ್ತಿಲ್ಲದ ಹಿಂದು ಚಳವಳಿಗಳು ಹುಟ್ಟಿರುವುದೇ ಇದಕ್ಕೆಲ್ಲ ಕಾರಣವಾಗಿದೆ. ಧರ್ಮಗಳಲ್ಲಿ ವೇದಾಂತ ಯಾರಿಗೂ ಬೇಡವಾಗಿದೆ. ಅದರಲ್ಲಿ ಅಸಮಾನತೆ, ಹಿಂಸೆ ಅಸ್ಪಸೃಶ್ಯ ಅಸಹನೆ ಯಾವುದು ಇಲ್ಲ. ಆದರೆ ನಾವು ಆ ವೇದಾಂತವನ್ನು ಬಿಟ್ಟು ಜಗಳ ಕಾರಣವಾಗುವ ಆಚರಣೆಗಳನ್ನೇ ಧರ್ಮ ಎಂಂದು ನಂಬಿಕೊಂಡಿದ್ದೇವೆ. ಆಚರಣೆಗಳು ಮತಗಳ ಒಂದು ಭಾಗವಾಗಿವೇ ಹೊರತು ಅದುವೇ ಧರ್ಮ ಅಲ್ಲ ಎಂದರು.

Advertisements

ಅಧ್ಯಕ್ಷತೆಯನ್ನು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ವಹಿಸಿದ್ದರು. ವೇದಿಕೆಯಲ್ಲಿ ದಸಂಸ ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಸುಂದರ್ ಮಾಸ್ತರ್, ಸ್ಟಿವನ್ ವಿಕ್ಟರ್ ಲೂವೀಸ್, ಧರ್ಮಗುರು ಮುಹಮ್ಮದ್ ರಶೀದ್ ಕಣ್ಣಂಗಾರ್, ಕಾಂಗ್ರೆಸ್ ಮುಖಂಡರಾದ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಎಂ.ಎ.ಗಫೂರ್, ಅಶೋಕ್ ಕುಮಾರ್ ಕೊಡವೂರು, ಪ್ರಸಾದ್‌ರಾಜ್ ಕಾಂಚನ್, ರಾಘವೇಂದ್ರ ಶೆಟ್ಟಿ ಕರ್ಜೆ, ಜ್ಯೋತಿ ಹೆಬ್ಬಾರ್, ಶರ್ಫುದ್ದೀನ್ ಶೇಖ್ ಭಾಗವಹಿಸಿದ್ದರು. ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ವಂದಿಸಿದರು. ಸತೀಶ್ ಕೊಡವೂರು ಕಾರ್ಯ ಕ್ರಮ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X