ಸಂತಾನ ನಿಯಂತ್ರಣಕ್ಕಾಗಿ ನಾಯಿಗಳನ್ನು ಯಲಹಂಕಕ್ಕೆ ಸ್ಥಳಾಂತರಿಸಬೇಡಿ; ಪ್ರಾಣಿ ಕಾರ್ಯಕರ್ತರ ಒತ್ತಾಯ

Date:

Advertisements
  • ಎಬಿಸಿ ಕೇಂದ್ರಗಳನ್ನು ಸ್ಥಾಪಿಸಲು ₹5 ಕೋಟಿ ಮಂಜೂರು ಮಾಡಿದ ಪಾಲಿಕೆ
  • ಎಬಿಸಿ ವಿಧಾನವನ್ನು ನಿಲ್ಲಿಸಿದರೆ ನಾಯಿಗಳ ಸಂಖ್ಯೆ ಹೆಚ್ಚಾಗಲಿದೆ; ಜಂಟಿ ನಿರ್ದೇಶಕ

ಬೆಂಗಳೂರಿನಲ್ಲಿ ಬೀದಿನಾಯಿಗಳಿಗೆ ಜನನ ನಿಯಂತ್ರಣ ಶಸ್ತ್ರಚಿಕಿತ್ಸೆ (ಎಬಿಸಿ) ಕಾರ್ಯಕ್ರಮವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸುತ್ತಿದೆ. ಈ ನಡುವೆ ಕಳೆದ ಕೆಲವು ವಾರಗಳ ಹಿಂದೆ ಮಹದೇವಪುರ ವಲಯದಲ್ಲಿ ಶಸ್ತ್ರಚಿಕಿತ್ಸಾ ಕೇಂದ್ರವನ್ನು ಮುಚ್ಚಲಾಗಿದ್ದು, ನಾಯಿಗಳನ್ನು ಯಲಹಂಕದಲ್ಲಿರುವ ಕೇಂದ್ರಕ್ಕೆ ಕರೆದೊಯ್ಯಲು ಸೂಚಿಸಲಾಗಿದೆ. ನಾಯಿಗಳನ್ನು ಅಲ್ಲಿಯವರೆಗೆ ಕರೆದೊಯ್ಯುವುದು ಕಷ್ಟಕರವಾಗಿದ್ದು, ಮಹದೇವಪುರ ವಲಯದಲ್ಲಿ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಪ್ರಾಣಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

“ಬೀದಿನಾಯಿಗಳಿಗೆ ಜನನ ನಿಯಂತ್ರಣ ಶಸ್ತ್ರಕ್ರಿಯೆಗಳನ್ನು ನಡೆಸಲು ಮಹದೇವಪುರದಲ್ಲಿ ಪಾಲಿಕೆ ಮೂರು ವರ್ಷಗಳಿಂದ ಮಾಸಿಕ ₹60,000 ಬಾಡಿಗೆ ನೀಡಿ ಜಾಗವನ್ನು ತೆಗೆದುಕೊಂಡಿತ್ತು. ಕೆಲ ತಿಂಗಳ ಹಿಂದೆ ಬಾಡಿಗೆ ಒಪ್ಪಂದದ ಅವಧಿ ಮುಗಿದಿದ್ದು, ನಿವೇಶನ ತೆರವು ಮಾಡುವಂತೆ ಮಾಲೀಕರು ಮೂರು ತಿಂಗಳ ಕಾಲಾವಕಾಶ ನೀಡಿದ್ದರು” ಎಂದು ಮೂಲಗಳಿಂದ ತಿಳಿದುಬಂದಿದೆ.

“ಪಾಲಿಕೆಯು ಎಬಿಸಿ ಕೇಂದ್ರವನ್ನು ಸ್ಥಾಪಿಸಲು ಹೊಸ ಸ್ಥಳವನ್ನು ಹುಡುಕಲು ಪ್ರಾರಂಭಿಸಿತು. ಆದರೆ, ಮಹದೇವಪುರದಲ್ಲಿ ಸ್ಥಳಗಳನ್ನು ಹುಡುಕಲು ವಿಫಲವಾಯಿತು. ಬಳಿಕ, ಯಲಹಂಕದ ಎಬಿಸಿ ಕೇಂದ್ರದಲ್ಲಿ ಬೀದಿ ನಾಯಿಗಳಿಗೆ ಜನನ ನಿಯಂತ್ರಣ ಶಸ್ತ್ರ ಚಿಕಿತ್ಸೆ ನಡೆಸಲು ನಿರ್ಧರಿಸಿತು” ಎನ್ನಲಾಗಿದೆ.

Advertisements

ಸೊಸೈಟಿ ಫಾರ್ ಪ್ರಿವೆನ್ಷನ್ ಆಫ್ ಕ್ರೌಲ್ಟಿ ಟು ಅನಿಮಲ್ಸ್ ಆಂಡ್ ಅನಿಮಲ್ ವೆಲ್‌ಫೇರ್ ಸ್ವಯಂಸೇವಕರು ಇತ್ತೀಚೆಗೆ ಯಲಹಂಕದ ಎಬಿಸಿ ಕೇಂದ್ರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು.

“ಮಹದೇವಪುರ ವಲಯದಲ್ಲಿ ಕೇಂದ್ರ ಗುರುತಿಸುವವರೆಗೆ ಎಬಿಸಿ ಕಾರ್ಯಕ್ರಮ ನಿಲ್ಲಿಸಬೇಕು. ಯಲಹಂಕದಲ್ಲಿ ನಾಯಿಗಳನ್ನು ಹಿಡಿದಿಡಲು ಸಾಕಷ್ಟು ಸ್ಥಳಾವಕಾಶವಿಲ್ಲ. ಸ್ವಚ್ಛವಾಗಿರುವ ನಾಯಿಗಳ ಜತೆಗೆ ಅಶುಚಿಯಿಂದ ಕೂಡಿದ ನಾಯಿಗಳನ್ನು ಹಾಕಲಾಗುತ್ತಿದೆ. ನಾಯಿಗಳನ್ನು ವ್ಯಾನ್‌ಗಳಲ್ಲಿ ತುಂಬುವಾಗ ಸರಿಯಾಗಿ ನಿರ್ವಹಿಸುವುದಿಲ್ಲ” ಎಂದು ಪ್ರಾಣಿ ಕಾರ್ಯಕರ್ತರೊಬ್ಬರು ಆರೋಪಿಸಿದ್ದಾರೆ.

“ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಎಬಿಸಿ ಕೇಂದ್ರಗಳನ್ನು ಸ್ಥಾಪಿಸಲು ಪಾಲಿಕೆ ₹5 ಕೋಟಿ ಮಂಜೂರು ಮಾಡಿದೆ. ಆದರೆ, ಸೂಕ್ತ ಸ್ಥಳದ ಕೊರತೆಯಿಂದ ಯೋಜನೆ ಬಾಕಿ ಉಳಿದಿದೆ” ಎಂದು ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಕೆಪಿ ರವಿಕುಮಾರ್ ತಿಳಿಸಿದರು.

”ಮಹದೇವಪುರ ವಲಯದಲ್ಲಿ ಕೆಲವು ತಿಂಗಳ ಹಿಂದೆ ಬಾಡಿಗೆ ಅವಧಿ ಮುಗಿದಿದ್ದರಿಂದ ಎಬಿಸಿ ಕೇಂದ್ರ ಸ್ಥಾಪಿಸಲು ಪರ್ಯಾಯ ಜಾಗ ಹುಡುಕಲು ಪ್ರಯತ್ನಿಸಿದೆವು. ಆದರೆ, ಎಲ್ಲಿಯೂ ಸ್ಥಳ ದೊರಕಲಿಲ್ಲ. ಹೀಗಾಗಿ, ಯಲಹಂಕದಲ್ಲಿ ಜನನ ನಿಯಂತ್ರಣ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದ್ದೇವೆ” ಎಂದು ಕುಮಾರ್ ಹೇಳಿದರು.

“ಈ ಹಿಂದೆ ಎಬಿಸಿ ಕೇಂದ್ರ ಇದ್ದಾಗ ಬಿಬಿಎಂಪಿಯು ಮಹದೇವಪುರ ವಲಯದಲ್ಲಿ ನಿತ್ಯ 15-20 ನಾಯಿಗಳಿಗೆ ಜನನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಮಾಡುತ್ತಿತ್ತು. ಈಗ, ಮಹದೇವಪುರದಿಂದ ತುಂಬಾ ದೂರದಲ್ಲಿರುವ ಯಲಹಂಕದ ಎಬಿಸಿ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದರಿಂದ ಶಸ್ತ್ರಚಿಕಿತ್ಸೆ ನೀಡುವ ಸಂಖ್ಯೆಯನ್ನು 10ಕ್ಕೆ ಇಳಿಸಿದ್ದೇವೆ” ಎಂದು ಅವರು ಹೇಳಿದರು.

“ನಾಯಿಗಳನ್ನು ಮಹದೇವಪುರದಿಂದ ಯಲಹಂಕಕ್ಕೆ ಸ್ಥಳಾಂತರಿಸಲು ಸುಮಾರು ಎರಡು ಗಂಟೆ ಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ನಡೆಸುವ ಮುನ್ನ ಒಂದು ದಿನ ಅವುಗಳನ್ನು ಎಬಿಸಿ ಕೇಂದ್ರದಲ್ಲಿ ಇರಿಸುತ್ತೇವೆ. ಮೂರು ದಿನಗಳ ಕಾಲ ಚಿಕಿತ್ಸೆ ನೀಡುತ್ತೇವೆ. ನಂತರ ಅವುಗಳನ್ನು ಕರೆದುಕೊಂಡ ಹೋದ ಸ್ಥಳಕ್ಕೆ ಹಿಂತಿರುಗಿ ಬಿಡುತ್ತೇವೆ” ಎಂದು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ‘ಮದ್ರಾಸ್ ಐ’ ಪ್ರಕರಣಗಳ ಹೆಚ್ಚಳ; ಲಕ್ಷಣಗಳು ಇಂತಿವೆ

“ಶಸ್ತ್ರಚಿಕಿತ್ಸೆಗಳನ್ನು ನಿಲ್ಲಿಸುವುದು ಅಸಾಧ್ಯ. ಏಕೆಂದರೆ, ಸ್ಥಳವನ್ನು ಹುಡುಕಲು ಮತ್ತು ಎಬಿಸಿ ಕೇಂದ್ರವನ್ನು ಸ್ಥಾಪಿಸಲು ಕನಿಷ್ಠ ಒಂದೂವರೆ ವರ್ಷಗಳು ಬೇಕಾಗಬಹುದು. ಇಷ್ಟು ದಿನ ಈ ವಿಧಾನವನ್ನು ನಿಲ್ಲಿಸಿದರೆ ನಾಯಿಗಳ ಸಂಖ್ಯೆ ಹೆಚ್ಚಾಗಲಿದೆ. ಮಹದೇವಪುರದಲ್ಲಿ ಎಬಿಸಿ ಕೇಂದ್ರ ಸ್ಥಾಪಿಸಲು ಬಿಬಿಎಂಪಿ ಜಾಗ ನೀಡುವವರೆಗೆ ಈ ವ್ಯವಸ್ಥೆ ಮುಂದುವರಿಯಲಿದೆ” ಎಂದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X