ಬೆಂಗಳೂರು | ಹಸಿ ತ್ಯಾಜ್ಯ ನಿರ್ವಹಣೆಗಾಗಿ ಪಾರ್ಕ್‌ನಲ್ಲಿ ‘ಲೇನ್ ಕಾಂಪೋಸ್ಟರ್’ ಅಳವಡಿಕೆ

Date:

Advertisements

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಪೂರ್ಣಚಂದ್ರ ಪಾರ್ಕ್‌ನಲ್ಲಿ ಹಸಿ ತ್ಯಾಜ್ಯ ನಿರ್ವಹಣೆಗಾಗಿ ಎರಡು ಲೇನ್ ಕಾಂಪೋಸ್ಟರ್‌ಗಳನ್ನು ಶುಕ್ರವಾರ ಅಳವಡಿಸಲಾಗಿದೆ.

ನಿವಾಸಿಗಳ ಕಲ್ಯಾಣ ಸಂಘ ನಾಗರಿಕ ಸೇವಾ ಸಮಿತಿಯ ಸಹಯೋಗದೊಂದಿಗೆ ಎನ್‌ಎಎಮ್‌ಎ ಈ ಕಾಂಪೋಸ್ಟರ್‌ಗಳನ್ನು ಅಳವಡಿಸಿದೆ. ಪ್ರತಿ ‘ಲೇನ್ ಕಾಂಪೋಸ್ಟರ್’ 800 ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ಪಾರ್ಕ್‌ ಸುತ್ತಲ ಪ್ರದೇಶದಲ್ಲಿರುವ 40 ಮನೆಗಳಿಂದ ಹಸಿ ತ್ಯಾಜ್ಯವನ್ನು ಪ್ರತಿದಿನ ಇಲ್ಲಿ ಸಂಸ್ಕರಿಸಬಹುದು. 45 ದಿನಗಳಲ್ಲಿ ಅದರಲ್ಲಿ ತುಂಬಿದ ಕಸವು ಗೊಬ್ಬರವಾಗಿ ಮಾರ್ಪಟ್ಟಿರುತ್ತದೆ. ಅದನ್ನು ಪಾರ್ಕ್‌ನ ಗಿಡ-ಮಗಳಿಗೆ ಗೊಬ್ಬರವಾಗಿ ಬಳಸಲಾಗುತ್ತದೆ ಎಂದು ಹೇಳಲಾಗಿದೆ.

ಈ ಯೋಜನೆಯ ಮುಖ್ಯ ಗುರಿಯು ತ್ಯಾಜ್ಯ ವಿಂಗಡಣೆಯನ್ನು ಉತ್ತೇಜಿಸುವುದು, ತ್ಯಾಜ್ಯ ಸಂಸ್ಕರಣೆಯನ್ನು ವಿಕೇಂದ್ರೀಕರಿಸುವುದು ಹಾಗೂ ಕಾಂಪೋಸ್ಟಿಂಗ್‌ನ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದಾಗಿದೆ ಎಂದು ಪಾಲಿಕೆ ಹೇಳಿದೆ.

Advertisements

ಈ ಸುದ್ದಿ ಓದಿದ್ದೀರಾ? ಸಂತಾನ ನಿಯಂತ್ರಣಕ್ಕಾಗಿ ನಾಯಿಗಳನ್ನು ಯಲಹಂಕಕ್ಕೆ ಸ್ಥಳಾಂತರಿಸಬೇಡಿ; ಪ್ರಾಣಿ ಕಾರ್ಯಕರ್ತರ ಒತ್ತಾಯ

ಇವುಗಳನ್ನು ಸ್ಥಳೀಯ ಬಿಬಿಎಂಪಿ ತ್ಯಾಜ್ಯ ಸಂಗ್ರಹ ಆಟೋ ಚಾಲಕ ಮತ್ತು ಸಹಾಯಕರು ನಿರ್ವಹಿಸುತ್ತಾರೆ. ಅವುಗಳನ್ನು ನಿರ್ವಹಿಸುವ ಕುರಿತು ಅವರಿಗೆ ಸಿಡಬ್ಲುಎಸ್‌ ತಂಡದಿಂದ ತರಬೇತಿ ನೀಡಲಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು: ಕೆ ವಿ ಪ್ರಭಾಕರ್

ಕೆವಿನ್ ಕಾರ್ಟರ್, ಸಂಗೊಳ್ಳಿಯ ಸಂಗವ್ವ ಇಬ್ಬರೂ ಫೋಟೋ ಜರ್ನಲಿಸಂನ ರೂಪಕಗಳಾಗಿಬಿಟ್ಟರು. ನೋಟಕ್ಕೆ...

ಬೆಂಗಳೂರು | ಹವಾಮಾನ ಕ್ರಿಯೆಗೆ ಪರಿಣಾಮಕಾರಿ ಕೊಡುಗೆ ನೀಡಲು ಅದರ ಮಹತ್ವ ತಿಳಿಯುವುದು ಅಗತ್ಯ: ಪ್ರೀತಿ ಗೆಹ್ಲೋಟ್

ಹವಾಮಾನ ಕ್ರಿಯೆಗೆ ಪರಿಣಾಮಕಾರಿಯಾಗಿ ಕೊಡುಗೆ ನೀಡಲು, ಮಕ್ಕಳು ಅದರ ಮಹತ್ವ ಮತ್ತು...

ಅರ್ಧದಲ್ಲಿ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರದಲ್ಲೇ ಮುಗಿಸಿ: ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್

ಬೆಂಗಳೂರು ನಗರದಲ್ಲಿ ಅರ್ಧದಲ್ಲೇ ನಿಲ್ಲಿಸಿರುವ ರಸ್ತೆ ಕಾಮಗಾರಿಗಳನ್ನು ಹಾಗೂ ರಸ್ತೆ ಕತ್ತರಿಸಿರುವ...

Download Eedina App Android / iOS

X