ತುಮಕೂರು ನಗರದ ಹನುಮಂತಪುರದ ನಿವಾಸಿಗಳಾದ ಜಯಂತ್ (31) ಹಾಗೂ ಶ್ರೀಧರ್ (52) ಎಂಬುವರು ಹೃದಯಾಘಾತಕ್ಕೆ ಬಲಿಯಾದ್ದಾರೆ.
ಜಯಂತ್, ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದಾಗಲೇ ಎದೆ ನೋವಿನಿಂದ ಒದ್ದಾಡಿದ್ದಾರೆ. ತಕ್ಷಣವೇ ಕುಟುಂಬಸ್ಥರು ತುಮಕೂರು ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟೊತ್ತಿಗಾಗಲೇ ಜಯಂತ್‌ನ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇನ್ನು ಶ್ರೀಧರ್, ನಿನ್ನೆ ಬೆಳಗ್ಗೆ ಟೀ ಕುಡಿದು ನಂತರ ಚಿಕನ್ ತಂದು ಮನೆಗೆ ತಂದುಕೊಟ್ಟಿದ್ದಾರೆ. ಮನೆಗೆ ಬಂದ ಶ್ರೀಧರ್‌ಗೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಪರೀಕ್ಷೆ ನಡೆಸಿದ ವೈದ್ಯರು ಶ್ರೀಧರ್‌ನ ಜೀವ ಹೋಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.