ರಾಜ್ಯದಲ್ಲಿ ಮೂಢ ನಂಬಿಕೆಗೆ ಮತ್ತೊಬ್ಬ ಮಹಿಳೆ ಬಲಿ ಆಗಿದ್ದಾರೆ. ‘ದೆವ್ವ ಬಿಡಿಸುವ’ ಪ್ರಯತ್ನದ ನಡುವೆ 45 ವರ್ಷದ ಮಹಿಳೆ, ಕೋಲುಗಳಿಂದ ಬೀಳುತ್ತಿದ್ದ ನಿರಂತರ ಏಟುಗಳನ್ನು ತಾಳಲಾಗದೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸ ಜಂಬರಘಟ್ಟದಲ್ಲಿ ನಡೆದಿದೆ.
ಶಿವಮೊಗ್ಗ ಗ್ರಾಮಾಂತರದ ಹೊಳೆಹೊನ್ನೂರುನಲ್ಲಿ ಮಹಿಳೆಯೊಬ್ಬರಿಗೆ ಮೈ ಮೇಲೆ ದೆವ್ವ ಬಂದಿದ್ದು, ಅದನ್ನು ಬಿಡಿಸುವುದಾಗಿ ಹೇಳಿ ಮಹಿಳೆಯ ಪ್ರಾಣವನ್ನೇ ತೆಗೆದ ಘಟನೆ ನಡೆದಿದ್ದು, ಈ ಸಂಬಂಧ ಹೊಳೆ ಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗೀತಮ್ಮ(55) ಎಂಬ ಮಹಿಳೆಗೆ ಕಳೆದ 15 ದಿನಗಳಿಂದ ಅನಾರೋಗ್ಯವಾಗಿತ್ತು. ಇದನ್ನು ಗಮನಿಸಿದ ಮಗ ಸಂಜಯ್ ತಾಯಿಯನ್ನ ಹಳೆ ಜಂಬರಕಟ್ಟೆಯ ಆಶಾ ಯಾನೆ ಶಾಂತಮ್ಮ (45) ವಯಸ್ಸಿನ ಮಹಿಳೆ ಬಳಿ ಕರೆದುಕೊಂಡು ಹೋಗಿದ್ದಾರೆ. ತಾಯಿಯನ್ನ ಪರಿಶೀಲಿಸಿದ ಆಶಾ ತಾಯಿಗೆ ಆತ್ಮ ಬಂದಿದೆ ಎಂದು ಹೇಳಿದ್ದಾಳೆ.
ಮಾಹಿತಿಯ ಪ್ರಕಾರ, ಶಾಂತಮ್ಮ ಎಂಬ ಮಹಿಳೆ ಗೀತಾಳ ಮೈ ಮೇಲೆ ‘ದೆವ್ವ ಬರುತ್ತದೆ. ಅವಳಿಗೆ ದೆವ್ವ ಹಿಡಿದಿದೆ’ ಎಂಬ ಮೂಢ ನಂಬಿಕೆಯನ್ನು ಹೊಂದಿದ್ದಳು. ಹೀಗಾಗಿ ದೆವ್ವ ಬಿಡಿಸುವ ನಿಟ್ಟಿನಲ್ಲಿ ಹೊಸ ಜಂಬರಘಟ್ಟಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ದೆವ್ವ ಬಿಡಿಸುವ ಪ್ರಹಸನದ ವೇಳೆ ಗೀತಾಳಿಗೆ ನಿರಂತರವಾಗಿ ಕೋಲಿನಿಂದ ಹೊಡೆಯಲಾಗಿದೆ. ಗೀತಾ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದ ಕಾರಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಆಶಾರಿಗೂ ಕಳೆದ 15 ದಿವಸಗಳಿಂದ ಮೈಮೇಲೆ ದೇವರು ಬರುತ್ತಿದ್ದು, ದೆವ್ವ ಬಿಡಿಸುವ ಮಹಿಳೆ ಎಂದು ಊರಿನಲ್ಲಿ ಕುಖ್ಯಾತಿ ಗಳಿಸಿದ್ದಳು. ಇದರಿಂದ ಈಕೆಯ ಬಳಿ ಗೀತಮ್ಮರನ್ನ ಮಗ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ನಿನ್ನೆ ಗೀತಮ್ಮರ ಮೈಮೇಲೆ ಆತ್ಮ ಬಂದಿದ್ದು ಆಶಾ ಪೂಜೆ ಆರಂಭಿಸೋಣ ಎಂದು ಗೀತಮ್ಮಳನ್ನ ಮೆರವಣಿಗೆಯ ಮೂಲಕ ಊರ ಹೊರಗೆ ಕರೆದುಕೊಂಡು ಬಂದು ಕೋಲಿನಿಂದ ಹೊಡೆಯುವ ಪೂಜೆ ಆರಂಭಿಸಿದ್ದಾರೆ. ಗೀತಮ್ಮ ಈ ಘಟನೆಯಿಂದ ಜರ್ಜರಿತಳಾಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಆಕೆಯ ಶವವನ್ನ ಹೊಳೆಹೊನ್ನೂರು ಸಮುದಾಯ ಭವನದಲ್ಲಿರಿಸಲಾಗಿದೆ. ಗೀತಮ್ಮಳಿಗೆ ಆರೋಪಿ ಶಾಂತಮ್ಮ ಕೋಲಿನಿಂದ ಹೊಡೆಯುವ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುದ್ದು, ಸೂಕ್ತ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿಬಂದಿದೆ.
ಘಟನೆಯ ಸಂಬಂಧ ದೂರು ದಾಖಲಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆಶಾ ಮತ್ತು ಅವರ ಗಂಡನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂತಹ ಅಂಧ ಶ್ರದ್ಧೆಗಿಂತ ವೈದ್ಯಕೀಯ ಚಿಕಿತ್ಸೆ ಮತ್ತು ವೈಜ್ಞಾನಿಕ ದೃಷ್ಟಿಕೋನ ಸಮಾಜ ಬೆಳೆಯಬೇಕು ಎಂಬ ಮಾತು ಜನಜನಿತವಾಗಿ ಕೇಳಿ ಬರುತ್ತಿದೆ.