ಸಾರಿಗೆ ಬಸ್ ರಸ್ತೆ ಮಧ್ಯೆ ಬಸ್ ಕೆಟ್ಟು ನಿಂತು ಪ್ರಯಾಣಿಕರು ಹಾಗೂ ಶಾಲಾ ಮಕ್ಕಳು ಪರದಾಡಿದ ಘಟನೆ ಲಿಂಗಸೂಗೂರು ತಾಲೂಕಿನ ಅಮರೇಶ್ವರ ಗ್ರಾಮದ ಕ್ರಾಸ್ ಬಳಿ ನಡೆದಿದೆ.
ಅಮರೇಶ್ವರ – ಲಿಂಗಸೂಗೂರು ಹೋಗುವ ಬಸ್ ಅಮರೇಶ್ವರ ಕ್ರಾಸ್ ಬಳಿ ಕೆಟ್ಟು ನಿಂತಿದೆ. ಬಸ್ ನಲ್ಲಿ ಸುಮಾರು 30 ಕ್ಕೂ ಹೆಚ್ಚು ಶಾಲಾ ಮಕ್ಕಳಿದ್ದರು ಎಂದು ತಿಳಿದು ಬಂದಿದ್ದು , ಈ ರಸ್ತೆಯಲ್ಲಿ ಸರ್ಕಾರಿ ಬಸ್ ಗಳ ಓಡಾಟ ಕಡಿಮೆ ಇರುವುದರಿಂದ ಸುಮಾರು 2 ಗಂಟೆಗಳ ಕಾಲ ಶಾಲಾ ಮಕ್ಕಳು ರಸ್ತೆಯಲ್ಲಿ ಕಾಲ ಕಳೆದಿದ್ದಾರೆ. ಬೇರೆ ಬಸ್ 11 ಗಂಟೆ ಸುಮಾರು ಬಂದಾಗ ಶಾಲಾ ಮಕ್ಕಳು ತೆರಳಿದ್ದಾರೆ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ವೇಶ್ಯಾವಾಟಿಕೆ ಹೋಟೆಲ್ ಮೇಲೆ ದಾಳಿ ; ನಾಲ್ವರ ಬಂಧನ
ಲಿಂಗಸೂಗೂರು ತಾಲ್ಲೂಕಿನ ಹಳ್ಳಿಗಳಿಗೆ ಹೋಗುವ ಬಸ್ ಗಳು 10-12 ವರ್ಷ ಹಳೆಯ ಬಸ್‌ಗಳನ್ನೇ ಈ ನಿಗಮಗಳಿಗೆ ನೀಡುತ್ತಿದ್ದು, ಹಳ್ಳಿ ರಸ್ತೆಗಳಲ್ಲಿ ಬಸ್ ಕೆಟ್ಟು ನಿಲ್ಲುವುದು, ಮಾಲಿನ್ಯಕ್ಕೆ ಕಾರಣವಾಗುವುದು ಸಾಮಾನ್ಯವಾಗಿದೆ.ಗುಜರಿ ಬಸ್‌ಗಳೇ ಆಸರೆಯಾಗಿವೆ ಎನ್ನಲಾಗಿದೆ.
