ಇತ್ತೀಚಿನ ದಿನಗಳಲ್ಲಿ ಕಳಪೆ ಕಾಮಗಾರಿಗಳ ಸುದ್ದಿಗಳೇ ಹೆಚ್ಚು ಸದ್ದು ಮಾಡುತ್ತಿವೆ. ದೇಶದ ನಾನಾ ಭಾಗಗಳಲ್ಲಿ ರಸ್ತೆ, ಸೇತುವೆ, ಕಟ್ಟಡ ಸೇರಿದಂತೆ ಎಲ್ಲ ಕಾಮಕಾರಿಗಳೂ ಕಳಪೆಯಾಗುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಇದೇ ಸಮದಯಲ್ಲಿ, ವ್ಯಕ್ತಿಯೊಬ್ಬರು ಹೊಸದಾಗಿ ನಿರ್ಮಿಸಲಾಗಿರುವ ರಸ್ತೆಯ ಮಧ್ಯೆ ಕುಳಿತು, ಡಾಂಬರನ್ನು ಬರಿಗೈನಲ್ಲೇ ಕಿತ್ತುಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳಪೆ ಕಾಮಗಾರಿಯ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋ, ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಬಿಲೋಲಿ ತಾಲೂಕಿನದ್ದು ಎಂದು ವರದಿಯಾಗಿದೆ. ಆ ರಸ್ತೆಯು ದುಗಾಂವ್ ಮತ್ತು ಡೊಂಗರ್‌ಗಾಂವ್ ನಡುವೆ ಸಂಪರ್ಕ ಒದಗಿಸುತ್ತದೆ. ರಸ್ತೆಯನ್ನು ಒಂದು ತಿಂಗಳ ಹಿಂದೆಯಷ್ಟೇ ನಿರ್ಮಾಣ ಮಾಡಲಾಗಿತ್ತು. ಈಗ ರಸ್ತೆಯ ಡಾಂಬರು ಬರಿಗೈನಲ್ಲೇ ತೆಗೆದರೂ ಕಿತ್ತುಬರುತ್ತಿದೆ. ರಸ್ತೆಯು ಸೀಳು ಬಿಟ್ಟು, ಕಿತ್ತುಹೋಗುತ್ತಿದೆ ಎಂಬುದು ಕಂಡುಬಂದಿದೆ. ಕಳಪೆ ಕಾಮಗಾರಿಗೆ ಕನ್ನಡಿ ಹಿಡಿದಿದೆ.
ಕಿತ್ತುಬರುವ ಡಾಂಬರಿನ ಕೆಳಭಾಗದಲ್ಲಿ ಕಲ್ಲುಗಳ ಪದರವು ಕಾಣಿಸುತ್ತದೆ. ರಸ್ತೆ ನಿರ್ಮಾಣದಲ್ಲಿ ಕಡಿಮೆ ಡಾಂಬರು ಬಳಸಿಲಾಗಿದೆ. ಡಾಂಬರು ಹಾಕುವುದಕ್ಕೂ ಮುನ್ನ ರಸ್ತೆಯ ಬೇಸ್ ಲೇಯರ್‌ಅನ್ನು ಸರಿಯಾಗಿ ಹದಗೊಳಿಸಿಲ್ಲ. ಸಂಪೂರ್ಣ ಕಳಪೆ ಕಾನಗಾರಿ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಸ್ತೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
हाथ से उखाड़ दी सड़क
— NDTV India (@ndtvindia) July 7, 2025
सोशल मीडिया पर महाराष्ट्र का एक वीडियो तेजी से वायरल हो रहा है. इस वीडियो में एक व्यक्ति नांदेड़ जिले के बिलोली तालुका में स्थित एक सड़क के बीच में बैठा है और अपने हाथों से सड़क का एक हिस्सा उखाड़ने की कोशिश कर रहा है. आश्चर्यजनक रूप से वह शख्स आसानी से… pic.twitter.com/nQlb8W48hN
ಮಹಾರಾಷ್ಟ್ರದಲ್ಲಿ ಮೂಲಸೌಕರ್ಯಗಳ ಕಳಪೆ ಕಾಮಗಾರಿ ಬೆಳಕಿಗೆ ಬಂದಿರುವುದು ಇದೇ ಮೊದಲೇನೂ ಅಲ್ಲ. 2023ರ ಆರಂಭದಲ್ಲಿ, ಜಲ್ನಾ ಜಿಲ್ಲೆಯ ಗ್ರಾಮಸ್ಥರು ಇದೇ ರೀತಿ ಹೊಸದಾಗಿ ನಿರ್ಮಿಸಲಾದ ರಸ್ತೆಯ ಮೇಲ್ಭಾಗವನ್ನು ಕೈನಲ್ಲೇ ಕಿತ್ತುಹಾಕಿದ್ದರು. ಡಾಂಬರಿನ ಕೆಳಭಾಗದಲ್ಲಿ ಬಟ್ಟೆಗಳು ಇದ್ದದ್ದನ್ನು ತಗೆದು ತೋರಿಸಿದ್ದರು. ಅದರೂ ಕೂಡ ಕಳಪೆ ಕಾಮಗಾರಿ ಫಲವಾಗಿತ್ತು.
ಈ ಲೇಖನ ಓದಿದ್ದೀರಾ?; ಬ್ರಿಟನ್ ಮತ್ತು ಫ್ರಾನ್ಸ್ ಮಧ್ಯಪ್ರಾಚ್ಯವನ್ನು ಹೇಗೆ ವಸಾಹತುಗೊಳಿಸಿದವು
ಅಂದಹಾಗೆ, ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಅಧಿಕಾರದಲ್ಲಿದೆ. ಮೋದಿ ಅವರು ಭ್ರಷ್ಟಾಚಾರ ನಡೆಯಲು ಬಿಡುವುದೇ ಇಲ್ಲ. ನಾನೂ ತಿನ್ನಲ್ಲ-ತಿನ್ನೋಕೂ ಬಿಡಲ್ಲ ಎಂದು 2014ರಲ್ಲಿ ಅಬ್ಬರದ ಆಶ್ವಾಸನೆ ನೀಡಿದ್ದರು. ಆದರೆ, ಮೋದಿ ಅವರ ಬಿಜೆಪಿಯೇ ಅಧಿಕಾರದಲ್ಲಿರುವ ಮಹಾರಾಷ್ಟ್ರದಲ್ಲಿ ಹೊಸ ರಸ್ತೆಗಳು ಕಿತ್ತುಬರುತ್ತಿವೆ. ಇದು ಮಹಾರಾಷ್ಟ್ರದ ಕತೆ ಮಾತ್ರವಲ್ಲ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಅಡಿಯಲ್ಲಿ ನಿರ್ಮಿಸಲಾಗುವ ಹಲವಾರು ಮೂಲಸೌಕರ್ಯಗಳು ಕಳಪೆ ಗುಣಮಟ್ಟದಲ್ಲಿವೆ ಎಂಬುದು ದೇಶಾದ್ಯಂತ ಕಂಡುಬಂದಿದೆ. ಇದಕ್ಕೆ ಹಲವಾರು ನಿದರ್ಶನಗಳಿವೆ.