ಟ್ವಿಟರ್‌ನ (ಇಂದಿನ X ತಾಣ) ಸಹ-ಸಂಸ್ಥಾಪಕ ಜಾಕ್ ಡಾರ್ಸಿ ಹೊಸ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದು, ಇದು ಯಾವುದೇ ಇಂಟರ್‌ನೆಟ್, ಸೆಟ್‌ಲೈಟ್ ಹಾಗೂ ವೈಫೈ ಇಲ್ಲದೇ ಕಾರ್ಯನಿರ್ವಹಿಸಲಿದೆ.
ಬಿಟ್‌ಚಾಟ್ (bitchat) ಎಂದು ಕರೆಯಲ್ಪಡುವ ಈ ಅಪ್ಲಿಕೇಶನ್ ಬ್ಲೂಟೂತ್ ಮೂಲಕ ಕಾರ್ಯನಿರ್ವಹಿಸಲಿದೆ. ಜನರು ನೇರವಾಗಿ ಪರಸ್ಪರ ಸಂದೇಶಗಳನ್ನು ಕಳುಹಿಸಲು ಕಳುಹಿಸಲು ಇದು ಅನುವು ಮಾಡಿಕೊಡುತ್ತದೆ.
ಇಂಟರ್‌ನೆಟ್ ಅವಲಂಬಿಸಿ ಇ-ಮೇಲ್ ಅಥವಾ ಫೋನ್ ಸಂಖ್ಯೆಯನ್ನು ಬಳಸಿಕೊಂಡು ಖಾತೆಯನ್ನು ರಚಿಸುವ ಅಗತ್ಯವಿರುವ ವಾಟ್ಸ್ಯಾಪ್ ಅಥವಾ ಟೆಲಿಗ್ರಾಮ್‌ನಂತಹ ಸಾಂಪ್ರದಾಯಿಕ ಮೆಸೇಜಿಂಗ್ ಅಪ್ಲಿಕೇಶನ್‌ಗಳಿಗಿಂತ ಬಿಟ್‌ಚಾಟ್ ಭಿನ್ನವಾಗಿರಲಿದೆ.
ಸಂದೇಶಗಳನ್ನು ಸಂಪೂರ್ಣವಾಗಿ ಬಳಕೆದಾರರ ಸಾಧನಗಳಲ್ಲಿ ಸಂಗ್ರಹಿಸಲಾಗುತ್ತದೆ. ಅಲ್ಪಾವಧಿಯ ನಂತರ ಅದು ಅಳಿಸಿಹೋಗುತ್ತದೆ. ಬಳಕೆದಾರರ ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಆದ್ಯತೆ ನೀಡಲು ಈ ವಿನ್ಯಾಸವನ್ನು ರಚಿಸಲಾಗಿದೆ ಎಂದು ಜಾಕ್ ಡಾರ್ಸಿ ಹೇಳಿದ್ದಾರೆ.
ಜಾಕ್ ಡಾರ್ಸಿ ಅಭಿವೃದ್ಧಿಪಡಿಸಿರುವ ಬಿಟ್ ಚಾಟ್ ಯಶಸ್ವಿಯಾದರೇ ತಂತ್ರಜ್ಞಾನ ಲೋಕದಲ್ಲಿ ಹೊಸ ಕ್ರಾಂತಿಯಾಗಲಿದೆ ಎನ್ನಲಾಗಿದೆ. ಬಿಟ್ ಚಾಟ್ ಎಂಬ ಪಿ2ಪಿ ಮೆಸೆಂಜರ್ ಆ್ಯಪ್ ಸದ್ಯ ಆ್ಯಪಲ್ ಐ ಸ್ಟೋರ್‌ನಲ್ಲಿ ಟೆಸ್ಟ್ ಮೋಡ್‌ನಲ್ಲಿ ಮಾತ್ರ ಲಭ್ಯವಿದೆ.
2022 ರಲ್ಲಿ ಇಲಾನ್ ಮಸ್ಕ್ ಟ್ವಿಟರ್ ಅನ್ನು ಖರೀದಿಸಿದ ನಂತರ ಜಾಕ್ ಅಲ್ಲಿಂದ ಹೊರ ಬಿದ್ದಿದ್ದರು.
my weekend project to learn about bluetooth mesh networks, relays and store and forward models, message encryption models, and a few other things.
— jack (@jack) July 6, 2025
bitchat: bluetooth mesh chat…IRC vibes.
TestFlight: https://t.co/P5zRRX0TB3
GitHub: https://t.co/Yphb3Izm0P pic.twitter.com/yxZxiMfMH2
