ನಗರದಲ್ಲಿ ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟಲು ವಿಫಲವಾದ ಮಹಾನಗರ ಪಾಲಿಕೆ ವಿರುದ್ದ ಎಸ್‌ಡಿಪಿಐ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಪಾಲಿಕೆಯ ಆಯುಕ್ತರ ಕಚೇರಿ (ಹಳೆಯ ಜಿಲ್ಲಾಧಿಕಾರಿ ಕಚೇರಿ)ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಕಳೆದ ಮೂರ್ನಾಲ್ಕು ತಿಂಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ನೂರಾರು ಜನರು ಗಾಯಗೊಂಡಿದ್ದಾರೆ, ಕಳೆದ ಎರಡು ದಿನಗಳ ಹಿಂದೆ 4 ವರ್ಷದ ಮಗುವಿನ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಳೆದ ತಿಂಗಳಲ್ಲಿ ಒಂದೇ ದಿನ 18ಕ್ಕೂ ಅಧಿಕ ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಆದರೆ, ತಕ್ಷಣ ಕ್ರಮ ವಹಿಸುವಲ್ಲಿ ಮಹಾನಗರ ಪಾಲಿಕೆ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.
ನಗರದಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ದಾಳಿ ಮಿತಿಮೀರಿದೆ, ದಾಳಿಗೊಳಗಾದವರಿಗೆ ಚಿಕಿತ್ಸೆ ಒದಗಿಸಿಕೊಡಬೇಕು. ಬೀದಿ ನಾಯಿಗಳ ನಿಯಂತ್ರಣಕ್ಕೆ ಯೋಜನೆ ರೂಪಿಸಬೇಕು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಸಮಸ್ಯೆ ಬಗೆಹರಿಸಬೇಕು, ಸಹಾಯವಾಣಿ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನರೇಗಾ ಕಾಮಗಾರಿ ವೇಳೆ ಮಹಿಳೆಗೆ ಹಾವು ಕಡಿತ ; ಆಸ್ಪತ್ರೆಗೆ ದಾಖಲು
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ನಗರಾಧ್ಯಕ್ಷ ಮಿರ್ಜಾ ಹಸನ್ ಬೈಗ್, ಅಕ್ಬರ್ ಹುಸೇನ್ ನಾಗುಂಡಿ, ತೌಸಿಫ್ ಅಹ್ಮದ್, ಶೇಖ್, ಇರ್ಫಾನ್, ಎಂಡಿ ಶಫಿ, ಗೌಸ್ ಮೊಹಿನುದ್ದಿನ್, ಎಂಡಿ ಫಾರೂಖ್, ಎಂಡಿ ನಾಮೂನ್ ಹುಸೇನ್, ಸೈಯದ್ ಸಾರಾ ಬೇಗಂ, ರಜಿಯಾ ಸುಲ್ತಾನ್, ಹಫೀಜ್ ಮಹಮದ್ ಸೇರಿದಂತೆ ಅನೇಕರು ಇದ್ದರು.
