ದಾವಣಗೆರೆ | ಸಂಚಾರ ಸುರಕ್ಷತೆಗೆ ರಸ್ತೆಗಿಳಿದ ಜಿಲ್ಲಾಧಿಕಾರಿ; ಸಂಚಾರ ನಿಯಮ ಪಾಲಿಸದ ವಾಹನಗಳ ವಶ, ನೋಟೀಸ್ ಜಾರಿ

Date:

Advertisements

ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಸೇರಿದಂತೆ ಅಪಘಾತ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಸತತ ಪ್ರಯತ್ನ ಕೈಗೊಳ್ಳುತ್ತಿದ್ದು, ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಜಿಲ್ಲಾಧಿಕಾರಿ ಜಿಎಂ ಗಂಗಾಧರಸ್ವಾಮಿ ನಂಬರ್ ಪ್ಲೇಟ್ ಇಲ್ಲದ, ಸಂಚಾರ ನಿಯಮ ಪಾಲಿಸದ 30 ಕ್ಕೂ ಹೆಚ್ಚು ವಾಹನಗಳನ್ನು ವಶಕ್ಕೆ ಪಡೆದು ದಾವಣಗೆರೆ ಸಂಚಾರಿ ದಕ್ಷಿಣ ವಲಯ ಠಾಣೆಗೆ ಹಸ್ತಾಂತರಿಸಿ, ಮಾಲೀಕರಿಗೆ ಕೋರ್ಟ್ ಮೂಲಕ ನೋಟಿಸ್ ನೀಡಲು ಸೂಚನೆ ನೀಡಿದರು.

1002281648

ದಾವಣಗೆರೆ ಜಿಲ್ಲಾಧಿಕಾರಿ ಅವರು ಜುಲೈ 8 ರಂದು ಮಂಗಳವಾರ ಬೆಳ್ಳಂಬೆಳಗ್ಗೆ ರಸ್ತೆಗಿಳಿದು 30ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಕಾರ್ಯಾಚರಣೆ ನಡೆಸಿದರು. ಕೆಲವು ಕಾಲೇಜಿನ ವಿದ್ಯಾರ್ಥಿಗಳು ದ್ವಿಚಕ್ರವಾಹನಕ್ಕೆ ನಂಬರ್ ಪ್ಲೇಟ್ ಇಲ್ಲದೇ ವಾಹನ ಚಲಾಯಿಸುತ್ತಿರುವುದು ಮತ್ತು ವಯಸ್ಕರು ಕೂಡ ವಾಹನದ ನಂಬರ್ ಪ್ಲೇಟ್ ಇಲ್ಲದೇ ವಾಹನ ಚಲಾಯಿಸುತ್ತಿರುವುದನ್ನು ಪತ್ತೆಹಚ್ಚಿ, ಅಂತಹ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

1002281647 1

ವಾಹನದ ನಂಬರ್ ಪ್ಲೇಟ್ ಇಲ್ಲದೇ ಚಲಾಯಿಸುವುದು ಮೋಟಾರ್ ವಾಹನ ಕಾಯಿದೆಯ ಸೆಕ್ಷನ್ 177 ರ ಉಲ್ಲಂಘನೆಯಾಗಿದ್ದು ದಂಡನೆಗೆ ಅವಕಾಶ ನೀಡಲಾಗಿದೆ. ವಾಹನಗಳಿಗೆ ಕಾನೂನು ಬದ್ದತೆ, ಗುರುತು ಮತ್ತು ಭದ್ರತೆಗೆ ಸಂಬಂಧಿಸಿದಾಗಿದ್ದು ಪ್ರತಿಯೊಂದು ವಾಹನದ ಗುರುತಿಗಾಗಿ ಮತ್ತು ಅಪರಾಧಗಳಲ್ಲಿ ಬಳಸುವ ವಾಹನ ಗುರುತಿಗಾಗಿ ಮತ್ತು ಸಂಚಾರಿ ನಿಯಮಗಳ ಉಲ್ಲಂಘನೆ ಪತ್ತೆ, ಕಳ್ಳತನ ಪತ್ತೆಹಚ್ಚಲು ಪ್ರತಿ ವಾಹನದ ನಂಬರ್ ಪ್ಲೇಟ್ ಸಹಾಯಕವಾಗಿದ್ದು ಪ್ರತಿ ವಾಹನಗಳಲ್ಲಿ ನಂಬರ್ ಪ್ಲೇಟ್ ಅಳವಡಿಕೆ ಕಾನೂನುಬದ್ದವಾಗಿದೆ. ಆದರೆ ನಂಬರ್ ಪ್ಲೇಟ್ ಇಲ್ಲದೇ ವಾಹನಗಳನ್ನು ಬಳಸುತಿದ್ದು ಈ ವಾಹನಗಳ ಮಾಲಿಕರಿಗೆ ನ್ಯಾಯಾಲಯದ ಮೂಲಕ ನೋಟಿಸ್ ನೀಡಲು ಸೂಚನೆ ನೀಡಿದರು.

Advertisements

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಹಾನಗರ ಪಾಲಿಕೆ ನೌಕರ ಮುಷ್ಕರ; ದಾವಣಗೆರೆಯಲ್ಲಿ ಸೇವೆಗಳ‌ ವ್ಯತ್ಯಯದಿಂದ ಜನರ ಪರದಾಟ

ಬೆಳಗ್ಗೆ 6 ರಿಂದ ಮಧ್ಯಾಹ್ನದ 12 ಗಂಟೆಯವರೆಗೆ ಡೆಂಟಲ್ ಕಾಲೇಜು ರಸ್ತೆ, ಬಾಯ್ಸ್ ಹಾಸ್ಟೆಲ್, ಕ್ರೀಡಾ ನಿಲಯ, ಎಂಸಿಸಿ ಬಿ ಬ್ಲಾಕ್, ಶಾಮನೂರು ವರ್ತುಲ ರಸ್ತೆಯಲ್ಲಿ ಜಿಲ್ಲಾಧಿಕಾರ ನೇತೃತ್ವದಲ್ಲಿ ಮಿಂಚಿನ ಸಂಚಾರ ಕೈಗೊಳ್ಳಲಾಯಿತು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸೇರಿದಂತೆ ಸಂಚಾರ ವಿಭಾಗದ ಪೊಲೀಸರು ಭಾಗವಹಿಸಿದ್ದರು.

bec00d331e7bcef3df5237e7aa47b1c5?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ದಾವಣಗೆರೆ | ಗಣೇಶ ಚತುರ್ಥಿ, ಈದ್ ಮಿಲಾದ್ ಹಬ್ಬ ಸಾಂಪ್ರದಾಯಿಕ, ಸೌಹಾರ್ಧತೆಯಿಂದ ಆಚರಿಸಿ; ಡಿಸಿ ಜಿ.ಎಂ.ಗಂಗಾಧರಸ್ವಾಮಿ

"ಕಲೆ ಸಾಂಸ್ಕೃತಿಕತೆಗೆ ಹೆಸರುವಾಸಿಯಾದ ದೇಶದಲ್ಲಿ ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ...

ದಾವಣಗೆರೆ | ಬೀದಿ ನಾಯಿ ದಾಳಿಗೆ ಗಾಯಗೊಂಡು ರೇಬೀಸ್ ತಗುಲಿದ್ದ ಮಗು ಸಾವು

ದಾವಣಗೆರೆ ನಗರದ ಶಾಸ್ತ್ರೀನಗರದಲ್ಲಿ ಮನೆ ಮುಂದೆ ಆಟ ಆಡುವ ವೇಳೆ ಬೀದಿ...

ದಾವಣಗೆರೆ | ನಾಗಮೋಹನ ದಾಸ್ ಆಯೋಗದ ವೈಜ್ಞಾನಿಕ ಒಳಮೀಸಲಾತಿ ವರದಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ

ನ್ಯಾ.ನಾಗಮೋಹನ ದಾಸ್ ಆಯೋಗದ ಒಳಮೀಸಲಾತಿ ವರದಿಯು ವೈಜ್ಞಾನಿಕವಾಗಿದ್ದು, ಪ್ರಸ್ತುತ ಅಧಿವೇಶನದಲ್ಲಿ ಜಾರಿಗೊಳಿಸಬೇಕು...

Download Eedina App Android / iOS

X