ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಾಸಕ ಸಂಜಯ್ ಗಾಯಕ್ವಾಡ್ ಮುಂಬೈನ ಎಂಎಲ್ಎ ಗೆಸ್ಟ್ಹೌಸ್ನಲ್ಲಿರುವ ಕ್ಯಾಂಟೀನ್ನ ಸಿಬ್ಬಂದಿಯೊಬ್ಬರಿಗೆ ಕರಾಟೆ ಶೈಲಿಯಲ್ಲಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಸಕ ಸಂಜಯ್ಗೆ ನೀಡಿರುವ ದಾಲ್ ಚೆನ್ನಾಗಿಲ್ಲವೆಂದು ಕ್ಯಾಂಟೀನ್ ನಿರ್ವಾಹಕರನ್ನು ಥಳಿಸಿದ್ದಾರೆ ಎನ್ನಲಾಗಿದೆ. ಪದಾರ್ಥಕ್ಕೆ ಹಾಕಿದ್ದ ಬೇಳೆಗಳಿಂದ ವಾಸನೆ ಬರುತ್ತಿತ್ತು ಎಂದು ಶಾಸಕರು ಆರೋಪಿಸಿದ್ದಾರೆ. ಇದರಿಂದ ಕೋಪಗೊಂಡ ಅವರು ಕ್ಯಾಂಟೀನ್ ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದಾರೆ.
ಶಾಸಕರ ಬಳಿ ಜಗಳವಾಡದಂತೆ ಮನವೊಲಿಸಲು ಹಲವರು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಘಟನೆ ಮಂಗಳವಾರ ರಾತ್ರಿ ನಡೆದಿದೆ ಎಂದು ಹೇಳಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿರುವುದರಿಂದ ಎಲ್ಲ ಶಾಸಕರು ಮುಂಬೈಗೆ ಬಂದಿದ್ದಾರೆ.
ಬುಲ್ದಾನ ಕ್ಷೇತ್ರದ ಶಾಸಕ ಸಂಜಯ್ ಗಾಯಕ್ವಾಡ್ ಕೂಡ ಶಾಸಕರ ವಸತಿಗೃಹಕ್ಕೆ ಹೋಗಿ, ಅಲ್ಲಿನ ಕ್ಯಾಂಟೀನ್ನಲ್ಲಿ ಆಹಾರವನ್ನು ಆರ್ಡರ್ ಮಾಡಿದ್ದರು. ಈ ಸಮಯದಲ್ಲಿ ಅನೇಕ ಮಂದಿ ದಾಲ್ ಕೆಟ್ಟದಾಗಿದೆ ಮತ್ತು ಅದರಿಂದ ದುರ್ವಾಸನೆ ಬೀರುತ್ತಿದೆ ಎಂದು ದೂರಿದ್ದರು. ದೂರು ನೀಡಿದ ನಂತರವೂ ಕ್ಯಾಂಟೀನ್ ನಿರ್ವಾಹಕ ಅದರ ಬಗ್ಗೆ ಹೆಚ್ಚು ಗಮನಕೊಡಲಿಲ್ಲ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿಶ್ವಾಸಾರ್ಹತೆ ಕಳೆದುಕೊಂಡ ಚುನಾವಣಾ ಆಯೋಗದ ಅವಶ್ಯಕತೆ ಇದೆಯೇ?
ಆದರೆ ಅದೇ ದಾಲ್ ಅನ್ನು ಶಾಸಕ ಗಾಯಕ್ವಾಡ್ ಅವರಿಗೆ ಬಡಿಸಿದಾಗ, ಅವರು ಕ್ಯಾಂಟೀನ್ ನಿರ್ವಾಹಕರ ಬಳಿಗೆ ಹೋಗಿ ಆಹಾರ ಸರಿಯಾಗಿಲ್ಲ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ. ಶಾಸಕರು ಕರಾಟೆ ಶೈಲಿಯಲ್ಲಿ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಷಯದ ಬಗ್ಗೆ ಆಹಾರ ಮತ್ತು ಆಡಳಿತ ಇಲಾಖೆಯಲ್ಲಿ ಕ್ಯಾಂಟೀನ್ ನಿರ್ವಾಹಕರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಶಾಸಕರು ಹೇಳಿದ್ದಾರೆ.
#ShivSena MLA (Eknath Shinde Faction) bruatally assaults canteen staffer in Mumbai's Akashvani MLA Hostel after being served stale dal. The assaulter in the viral video has been identified as Shiv Sena MLA from Maharashtra's Buldhana constituency, #SanjayGaikwad pic.twitter.com/MIM81psSPJ
— Harsh Trivedi (@harshtrivediii) July 9, 2025