ಕನಸ್ಸುಗಳೊಂದಿಗೆ ಶ್ರಮ ಇದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯ ವಿದ್ಯಾರ್ಥಿಗಳು ಈ ದೆಸೆ ಯಲ್ಲಿ ಮುನ್ನಡೆಯ ಬೇಕು. ಕಲಿಕೆಯೊಂದಿಗೆ ಉತ್ತಮ ನಡವಳಿಕೆ ಅಳವಡಿಸಿಕೊಂಡು ಸಮಾಜದಲ್ಲಿ ತನ್ನನ್ನು ಗುರುತಿಸುವ ರೀತಿಯಲ್ಲಿ ಬೆಳೆಯಬೇಕೆಂದು ಉಡುಪಿ ಅಪರ ಜಿಲ್ಲಾಧಿಕಾರಿ ಆಬೀದ್ ಗದ್ಯಾಳ ಹೇಳಿದ್ದಾರೆ.
ಅವರು ಇಂದು ತೋನ್ಸೆ ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೆರೂರು, ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಮೌಲಾನ ಆದಂ ಸಾಹೇಬ್, ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿ ಅಧ್ಯಕ್ಷ ಡಾ.ಶಾಹೆನವಾಜ್, ಉದ್ಯಮಿ ಶಿಕ್ಷಣ ಸಂಸ್ಥೆಯ ಹಿತೈಷಿ ಅನ್ಸಾರ್ ಟಿ.ಎಸ್., ಅಕಾಡೆಮಿ ಮುಖ್ಯಸ್ಥ ಹಸೀಬ್ ತರ್‌ದಾರ್, ಮುಖ್ಯ ಶಿಕ್ಷಕಿ ಸುನಂದಾ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶೈಮಾ ನಾಝ್ ಪ್ರಾರ್ಥನೆಗೈದರು. ಕಾಲೇಜು ಪ್ರಾಂಶುಪಾಲೆ ದಿವ್ಯ ಪೈ ಸ್ವಾಗತಿಸಿದರು. ಆಡಳಿತಾಧಿಕಾರಿ ಅಸ್ಲಂ ಹೈಕಾಡಿ ಪ್ರಾಸ್ತಾವಿಕವಾಗಿ ಮಾಡಿದರು. ವಿದ್ಯಾರ್ಥಿನಿ ಸಾರ ಮುಕ್ತಾರ್ ವಂದಿಸಿದರು. ವಿದ್ಯಾರ್ಥಿನಿ ಆಯಿಶಾ ಮರ್ವ ಹಾಗೂ ಆಯಿಶಾ ಮನ್ನ ಕಾರ್ಯಕ್ರಮ ನಿರೂಪಿಸಿದರು.