ಕರ್ನಾಟಕ ಏಕೀಕರಣ ಚಳುವಳಿಗೆ ಮಹತ್ವದ ಕೊಡುಗೆ ನೀಡಿದ ಜಯದೇವಿ ತಾಯಿ ಲಿಗಾಡೆ ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿ ಬಲವರ್ಧನೆಗೂ ಅಮೋಘ ಕಾಣಿಕೆ ನೀಡಿದ್ದಾರೆ ಎಂದು ಬಸವ ಕೇಂದ್ರದ ತಾಲೂಕು ಅಧ್ಯಕ್ಷ ಜಗನ್ನಾಥ ಮೂಲಗೆ ಅಭಿಪ್ರಾಯಪಟ್ಟರು.
ಔರಾದ್ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳವಾರ ಪಟ್ಟಣದ ಕಸ್ತೂರ ಬಾ ಗಾಂಧಿ ವಸತಿ ಶಾಲೆಯಲ್ಲಿ ಡಾ.ಜಯದೇವಿತಾಯಿ ಲಿಗಾಡೆ ಹಾಗೂ ಫ.ಗು.ಹಳಕಟ್ಟಿ ಅವರ ಜಯಂತಿ ನಿಮಿತ್ತ ಕನ್ನಡ-ವಚನ ಸಂಸ್ಕೃತಿ ಕುರಿತು ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ʼಲಿಗಾಡೆಯವರು ಸೋಲಾಪುರ ಕರ್ನಾಟಕಕ್ಕೆ ಸೇರಿಸಲು ಎಲ್ಲ ಪ್ರಯತ್ನಗಳು ಮಾಡಿದ್ದು, ಸ್ಥಳೀಯರ ಹಾಗೂ ಜನಪ್ರತಿನಿಧಿಗಳ ಬೆಂಬಲ ನಿರೀಕ್ಷಿತ ಪ್ರಮಾಣದಲ್ಲಿ ದೊರೆಯದ ಹಿನ್ನೆಲೆ ಇಂದು ಅಪ್ಪಟ ಕನ್ನಡ ಪ್ರದೇಶವಾದ ಸೋಲಾಪುರ್ ನೆರೆ ರಾಜ್ಯದಲ್ಲಿದೆ. ಅವರು ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಸಾಹಿತ್ಯ ರಚಿಸಿ ಭಾಷಾ ಸಾಮರಸ್ಯದ ಕೊಂಡಿಯಾಗಿ ಕೆಲಸ ಮಾಡಿದರುʼ ಎಂದರು.
ಕಸಾಪ ಗೌರವ ಕಾರ್ಯದರ್ಶಿ ಜಗನ್ನಾಥ ದೇಶಮುಖ ಮಾತನಾಡಿ, ʼಫ.ಗು.ಹಳಕಟ್ಟಿ ಅವರು ವಚನ ಸಾಹಿತ್ಯ ಸಂರಕ್ಷರಾಗಿ ಕೆಲಸ ಮಾಡಿದ್ದಾರೆ. ಅವರ ಸರಳ ಬದುಕು ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಲಿದೆ ಎಂದು ನಿದರ್ಶನಗಳ ಮೂಲಕ ವಿವರಿಸಿದರು.

ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭವನ್ನು ಹಿರಿಯರಾದ ಸುಭಾಷ್ ಪಾರಾ ಉದ್ಘಾಟಿಸಿದರು.
ಇದನ್ನೂ ಓದಿ : ಬೀದರ್ | ʼಈದಿನʼ ಫಲಶೃತಿ : ಹಾಲಹಳ್ಳಿ(ಕೆ) ಪ್ರೌಢ ಶಾಲೆಗೆ ಬಿಇಒ ಭೇಟಿ; ಶಾಲೆ ಸ್ಥಳಾಂತರ
ಪ್ರಮುಖರಾದ ವಿರೇಶ ಅಲಮಾಜೆ, ಸಂದೀಪ ಪಾಟೀಲ್, ಕಾವ್ಯ ಅಲಮಾಜೆ, ಸಂಗೀತಾ ರೆಡ್ಡಿ, ಕಾವೇರಿ ಸ್ವಾಮಿ, ಲತಾದೇವಿ ಕೋಕನೆ, ಡಾ. ಮನ್ಮತ ಡೋಳೆ, ಶಿವರಾಜ ಶಟಕಾರ, ಅಶೋಕರೆಡ್ಡಿ ಪಿಟ್ಲೆ ಸೇರಿದಂತೆ ಇನ್ನಿತರರಿದ್ದರು.