15ನೇ ಹಣಕಾಸು ಯೋಜನೆಯ ಕಾಮಗಾರಿ ಕೈಗೊಳ್ಳಲು ಪಿಡಿಒ, ಎಇಇ, ಜೆಇಗಳಿಗೆ ಸಲ್ಲಬೇಕಾದ ಲಂಚದ ಪರ್ಸೆಂಟೇಜ್ ಕುರಿತ ವಿಡಿಯೊ ಜಾಲತಾಣದಲ್ಲಿ ಹಂಚಿಕೆಯಾದ ಹಿಂದೆಯೇ ಪಂಚಾಯತ್‌ರಾಜ್ ಎಂಜಿನಿಯರಿಂಗ್‌ನ ಚಿತ್ತಾಪುರ ಉಪ ವಿಭಾಗದ ಕಿರಿಯ ಎಂಜಿನಿಯರ್‌ನನ್ನು (ಜೆಇ) ಬುಧವಾರ ಅಮಾನತು ಮಾಡಲಾಗಿದೆ.
ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ಮೇರೆಗೆ ಚಿತ್ತಾಪುರದ ಕಿರಿಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಶ್ರೀಪಾದ ಬಾಪುರಾವ ಕುಲಕರ್ಣಿ ಅಮಾನತುಗೊಂಡವರು.
ಸಿಸಿ ರೋಡ್ ವಿಚಾರವಾಗಿ ಅಧಿಕಾರಿಗಳು ಕಮೀಷನ್‌ಗೆ ಬೇಡಿಕೆಯಿಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ನಂಗೆ 5 ಪರ್ಸೆಂಟ್ ಪಿಡಿಓಗೆ 3 ಪರ್ಸೆಂಟ್ ಎಇಇಗೆ 5 ಪರ್ಸೆಂಟ್ ಕಮಿಷನ್ ಕೊಡಬೇಕು ಎಂದು ಜೆಇ ಶ್ರೀಪಾದ ಹೇಳಿರುವುದು ಕಂಡು ಬಂದಿದೆ.
ಇದನ್ನೂ ಓದಿ : ಯಾದಗಿರಿ | ಸವರ್ಣೀಯರಿಂದ ದಲಿತರ ಮೇಲೆ ದೌರ್ಜನ್ಯ : ಆರು ಜನರ ವಿರುದ್ಧ ದೂರು ದಾಖಲು
ಕರ್ತವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿ ತೋರಿದ್ದು ಕಂಡು ಬಂದ ಹಿನ್ನೆಲೆ ಇಲಾಖೆ ವಿಚಾರಣೆ ಬಾಕಿ ಇರಿಸಿ ಅಮಾನತು ಮಾಡಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಓ ಭಂವರ್ ಸಿಂಗ್ ಮೀನಾ ಆದೇಶ ಹೊರಡಿಸಿದ್ದಾರೆ.