ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಕ್ಷರ ದಾಸೋಹ ನೌಕರರು ಸೇರಿ ನಿನ್ನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದಲ್ಲಿ ಮೆರವಣಿಗೆ ಮುಖಾಂತರ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.
- ಕೃಷಿ ಕೂಲಿಕಾರರಿಗೆ ಪ್ರಸ್ತುತ ದಿನಗೂಲಿ ₹370 ಸಾಕಾಗುತ್ತಿಲ್ಲ. ಕನಿಷ್ಠ ₹600 ದಿನಗೂಲಿಯನ್ನು ನಿಗದಿಪಡಿಸಬೇಕು.
- ಪ್ರಸ್ತುತ ವರ್ಷದ ಉದ್ಯೋಗದಲ್ಲಿ ಕೇವಲ 100 ಹಾಜರಿಗಳನ್ನು ಮಾತ್ರ ನೀಡಲಾಗುತ್ತಿದೆ. ಇದನ್ನು 200 ಹಾಜರಿಗಳವರೆಗೆ ಹೆಚ್ಚಿಸಬೇಕು.
- ಮಾಡಿದ ಕೆಲಸಕ್ಕೆ 15 ದಿನಗಳೊಳಗೆ ಕೂಲಿ ಪಾವತಿ ಮಾಡಬೇಕು.
- ನಗದಿಲ್ಲದೇ ರೈತರಿಗೆ ತಲೆಮಾರು ಪಟ್ಟಿ ವಿತರಣೆ ಮಾಡಬೇಕು.
- ಅರಣ್ಯ ಹಕ್ಕುಪತ್ರಗಳನ್ನು ಎಲ್ಲ ಅರ್ಹ ಕುಟುಂಬಗಳಿಗೆ ನೀಡಬೇಕು.
- PWD ಇಲಾಖೆಗೆ ಸಂಬಂಧಪಟ್ಟ ರಸ್ತೆಗಳು ಮಳೆ ಕಾರಣದಿಂದ ಹಾನಿಗೊಳಗಾಗಿವೆ. ಕೂಡಲೇ ದುರಸ್ತಿ ಕಾರ್ಯ ನಡೆಯಬೇಕು.
- ಮನೆ ಜಾಗದ ದಾಖಲೆಗಳ ಸಮಸ್ಯೆಗಳನ್ನು ಪರಿಹರಿಸಬೇಕು. ದಾಖಲೆ ಇಲ್ಲದವರಿಗೆ ಸೂಕ್ತ ದಾಖಲೆಗಳನ್ನು ಒದಗಿಸೇಕು.
ಎಂದು ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡ | ನಗರಸಭೆ ಅಧಿಕಾರಿಗಳಿಂದಲೇ ನೀರಿನ ಪೈಪ್ ಕಳ್ಳತನ
ಪ್ರತಿಭಟನೆಯಲ್ಲಿ ತಾಲೂಕಾಧ್ಯಕ್ಷ ಭೀಮಣ್ಣ ಬೋವಿ, ಕಾರ್ಯದರ್ಶಿ ಭೂತೇಷ ಚಿತ್ರಗಾರ, ಸಾಯಿನಾಥ್ ಕಲ್ಲಹಕ್ಲ, ಮಾಂತೇಶ ಮಾಳಗಿ, ಶಿವಪ್ಪ ಹರಿಜನ (ಪಾಳಾ), ನೀಲವ್ವ ಸುರೇಶ್ ಬೋವಿ, ಸಾವಿತ್ರೀ ಉಗ್ಗಿನಕೇರಿ, ಸಾವಿತ್ರೀ ಕಲಕೇರಿ, ಗೋಪಾಲ್ ಅಕ್ಕಸಾಲಿ, ಕಲಾವತಿ ಕಲಕೇರಿ ಮತ್ತು ಧರ್ಮಾವತಿ ಮಜ್ಜಿಗೇರಿ ಭಾಗವಹಿಸಿದ್ದರು.