ದೆಹಲಿ, ಹರಿಯಾಣ ಹಾಗೂ ಉತ್ತರ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದೆ. ಸುಮಾರು 10 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಯಿತು ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಈ ಸಮಯದಲ್ಲಿ ಜನರು ತಮ್ಮ ಮನೆಗಳು ಮತ್ತು ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದರು. ಗುರುವಾರ ಬೆಳಗ್ಗೆ 9.04ಕ್ಕೆ ಭೂಮಿ ತೀವ್ರವಾಗಿ ಕಂಪಿಸಿತ್ತು. ದೆಹಲಿ, ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ, ಫರಿದಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರ ಬಿಂದು ಹರಿಯಾಣ.
ಎರಡು ನಿಮಿಷಗಳಲ್ಲಿ ಝಜ್ಜರ್‌ನಲ್ಲಿ ಎರಡು ಬಾರಿ ಭೂಕಂಪನ ಉಂಟಾಗಿದೆ. ಬೆಳಗ್ಗೆ 9.07 ಕ್ಕೆ ಹಾಗೂ ನಂತರ ಬೆಳಗ್ಗೆ 9.10 ಕ್ಕೆ ಝಜ್ಜರ್‌ನಲ್ಲಿ ಭೂಕಂಪನ ಸಂಭವಿಸಿದೆ. ಹಠಾತ್ ಕಂಪನದಿಂದಾಗಿ ಜನರು ಭಯಭೀತರಾಗಿ ಮನೆಯಿಂದ ಹೊರಗಡೆ ಬಂದಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆದಿವಾಸಿಗಳನ್ನು ಆದಿವಾಸಿಗಳೇ ಕೊಂದರು ಹೌದು… ಆದರೆ ಯಾಕಾಗಿ ಕೊಂದರು?
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದು ಝಜ್ಜರ್‌ನಿಂದ ಉತ್ತರಕ್ಕೆ 10 ಕಿಲೋಮೀಟರ್ ದೂರವಿದ್ದು, ಅದರ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.4 ಎಂದು ಅಳೆಯಲಾಗಿದೆ.
ಝಜ್ಜರ್ ಪಕ್ಕದಲ್ಲಿರುವ ಬಹದ್ದೂರ್‌ಗಢದಲ್ಲೂ ಭೂಕಂಪನದ ಅನುಭವವಾಗಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಕಂಪನದ ಅನುಭವವಾದ ನಂತರ ಜನರು ಹೊರಗಡೆ ಆಗಮಿಸಿದ್ದರು ಎಂದು ವರದಿಯಾಗಿದೆ.
ರಾಷ್ಟ್ರೀಯ ವಿಪತ್ತು ಕಾರ್ಯನಿರ್ವಹಣಾ ಪಡೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಭೂಕಂಪನ ಸಂಭವಿಸಿದಾಗ ಸಾರ್ವಜನಿಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ನೀಡಿದೆ.
EQ of M: 4.4, On: 10/07/2025 09:04:50 IST, Lat: 28.63 N, Long: 76.68 E, Depth: 10 Km, Location: Jhajjar, Haryana.
— National Center for Seismology (@NCS_Earthquake) July 10, 2025
For more information Download the BhooKamp App https://t.co/5gCOtjcVGs @DrJitendraSingh @OfficeOfDrJS @Ravi_MoES @Dr_Mishra1966 @ndmaindia pic.twitter.com/uDNjvD8rWT
