ದಾವಣಗೆರೆ ಮತ್ತು ಹತ್ತಿರದ ಜಿಲ್ಲೆಗಳಲ್ಲಿ ಎರಡು ಕಳ್ಳರ ತಂಡಗಳು ಸಕ್ರಿಯವಾಗಿ ಸಂಚರಿಸುತ್ತಿದ್ದು, ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಸಿದೆ.

ಸಕ್ರಿಯವಾಗಿರುವ ಕಳ್ಳರ ತಂಡಗಳು ಮುಖ್ಯವಾಗಿ ಪಟ್ಟಣಗಳು, ಗಡಿ ಗ್ರಾಮಗಳು ಹಾಗೂ ಹಳ್ಳಿಗಳಿಂದ ದೂರದಲ್ಲಿರುವ, ಹೊರಭಾಗದಲ್ಲಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನಕ್ಕೆ ಹೊಂಚು ಹಾಕುತ್ತಾರೆ. ಈ ಹಿನ್ನೆಲೆಯಲ್ಲಿ ಜನರು ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಈ ವಿಷಯವನ್ನು ಎಲ್ಲಾ ವಾಟ್ಸಾಪ್ ಗ್ರೂಪ್ ಗಳಿಗೆ, ಸಾಮಾಜಿಕ ಜಾಲತಾಣದಲ್ಲಿ ಕಳುಹಿಸಿ, ಎಲ್ಲರೂ ಜಾಗರೂಕರಾಗಿರಲು ಮತ್ತು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಮನವಿ ಮಾಡಲಾಗಿದೆ. ಕಳ್ಳರ ಸಿಸಿ ಟಿವಿ ಚಿತ್ರಗಳು ಇದ್ದು, ಅವುಗಳಲ್ಲಿರುವ ವ್ಯಕ್ತಿಗಳನ್ನು ಗಮನಿಸುವಂತೆ ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಹೃದಯಾಘಾತಕ್ಕೆ ಯುವಕ ಬಲಿ, ಹೃದಯಕ್ಕೇನಾಗಿದೆ?
ತಮ್ಮ ಪ್ರದೇಶದ ಸ್ಥಳೀಯ ಪೊಲೀಸ್ ಬೀಟ್ ಸಿಬ್ಬಂದಿಗಳೊಂದಿಗೆ ಸಂಪರ್ಕದಲ್ಲಿದ್ದು ಮತ್ತು ಸಾಧ್ಯವಾದರೆ ನಿಮ್ಮ ನಿಮ್ಮ ಪೊಲೀಸ್ ಬೀಟ್ ಸಿಬ್ಬಂದಿಗಳೊಂದಿಗೆ ಸ್ವಯಂಸೇವಕರಾಗಿ ಬೆಳಗಿನ ಜಾವ 1 ರಿಂದ 3 ಗಂಟೆಯ ನಡುವೆ ಗಸ್ತು ಕರ್ತವ್ಯದಲ್ಲಿ ಸಹಕರಿಸಬಹುದು. ನಿಮ್ಮ ಗ್ರಾಮ, ಬೀದಿಗಳಲ್ಲಿ, ನಿಮ್ಮ ಸುತ್ತ ಮುತ್ತ ಪ್ರದೇಶಗಳಲ್ಲಿ ಅನಾಮಧೇಯ, ಅನುಮಾನಸ್ಪದ ವ್ಯಕ್ತಿಗಳು ಸಂಚರಿಸುವುದು ಕಂಡು ಬಂದರೆ ತಕ್ಷಣವೇ ಸ್ಥಳೀಯ ಪೊಲೀಸ್ ತುರ್ತು ಸಹಾಯವಾಣಿ 112 ಹಾಗೂ ಪೊಲೀಸ್ ಕಂಟ್ರೋಲ್ ರೂಂ ಮೊಬೈಲ್ ನಂ- 9480803200 ಗೆ ಕರೆ ಮಾಡಿ ತಿಳಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.