ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಮಾತೆ ಇಸ್ಲಾಮಿ ಹಿಂದ್ ಸಿಂಧನೂರು ಘಟಕ, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ನೇತೃತ್ವದಲ್ಲಿ ಸಿಂಧನೂರು ತಾಲೂಕಿನಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಪಟೇಲ್ ವಾಡಿಯ ಮಸ್ಜಿದ್ ಎ ಹುದಾ ದಿಂದ ಕನಕದಾಸ ವೃತ್ತದ ಮಾರ್ಗವಾಗಿ ತಹಶೀಲ್ದಾರ್ ಕಚೇರಿವರೆಗೆ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆ ನಡೆಸಿ ತಹಶೀಲ್ದಾರ ಮೂಲಕ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ ವಕ್ಫ್ ಆಸ್ತಿಗಳ ಸಮುದಾಯದ ಮೇಲ್ವಿಚಾರಣೆಯನ್ನು ಕಿತ್ತುಹಾಕುವುದು. ಮಂಡಳಿಯಲ್ಲಿ ಮುಸ್ಲಿಮೇತರ ಸದಸ್ಯರ ಸೇರ್ಪಡೆ ಮಾಡಿ ಇತರ ನಂಬಿಕೆ ಆಧಾರಿತ ಸಂಸ್ಥೆಗಳ ಆಡಳಿತದಲ್ಲಿ ಪ್ರತಿಬಿಂಬಿಸದ ಹೇರಿಕೆಯಾದ ಮುಸ್ಲಿಂ ಸಂಸ್ಥೆಗಳ ಧಾರ್ಮಿಕ ಸ್ವಾಯತ್ತತೆಯನ್ನು ದುರ್ಬಲಗೊಳಿಸು ಹುನ್ನಾರ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತದ ಸಂವಿಧಾನದ 14, 25, 26 ಮತ್ತು 29 ನೇ ವಿಧಿಗಳ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ವಕ್ಫ್‌ನಿಂದ ಹಣಕಾಸು ನೆರವು ಪಡೆಯುತ್ತಿರುವ ಮಸೀದಿಗಳು, ಮದರಸಾಗಳು, ಅನಾಥಾಶ್ರಮಗಳು, ಆಸ್ಪತ್ರೆಗಳು ಮತ್ತು ಇತರ ಅಗತ್ಯ ಸಂಸ್ಥೆಗಳ ರಕ್ಷಣೆಯನ್ನು ದುರ್ಬಲಗೊಳಿಸುತ್ತದೆ. ಜಿಲ್ಲಾ ವಕ್ಫ್ ಅಧಿಕಾರಿಯು ಪ್ರದೇಶದಲ್ಲಿ ದಾಖಲಾಗದ ವಕ್ಫ್ ಆಸ್ತಿಗಳ ಪರಿಶೀಲನೆ ಮತ್ತು ಸರಿಯಾದ ನೋಂದಣಿಯನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾರ್ಮಿಕ ವಿರೋಧಿ ಸಂಹಿತೆ ರದ್ದತಿಗೆ ಜಂಟಿ ಸಂಘಟನೆಗಳ ಆಗ್ರಹ
ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಷನ್ (ಜಿಐಒ) ಸಿಂಧನೂರು ಘಟಕದ ಅಧ್ಯಕ್ಷೆ ಉಮ್ಮೆಕುಲ್ಸುಂ, ಶಹನಾಜ್ ಬೇಗಂ, ಸೈಯದಾ ಬೇಗಂ, ಖಮರ್ ಸುಲ್ತಾನ, ಅತಿಯಾ ಫೌಝಿಯಾ, ರಿಜ್ವಾನ ಬೇಗಂ, ಲುಬ್ನಾ ಬೆಳಗಾಮಿ, ಅರ್ಶಿಯಾ ಮತೀನ, ತಹೆಸೀನ್ ಪರ್ವಿನ್, ಅಸ್ಮಾ ಖಾನಂ, ಶಾಜಿಯಾ, ಜಮಾತೆ ಇಸ್ಲಾಂ ಹಿಂದ್ ಸಿಂಧನೂರು ತಾಲೂಕು ಘಟಕದ ಅಧ್ಯಕ್ಷ ಮುಹಮ್ಮದ್ ಹುಸೇನ್, ಶರ್ಫುದ್ದೀನ ಸಾಬ, ದಿಲಾವರ್ ಅಂಬರ್ ಖಾನ್, ಮಹೆಬೂಬ ಖಾನ್, ವಸಿಂ, ಇಮ್ತಿಯಾಜ್ ಸೇರಿದಂತೆ ಮಹಿಳೆಯರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.


ಗರ್ಲ್ಸ್ ಇಸ್ಲಾಮಿಕ್ ಆರ್ಗನೈಜೇಷನ್ ಸಿಂಧನೂರು ಅಧ್ಯಕ್ಷರು ನೇಹಾ ಸಮ್ರೀನ್