ಪರಸ್ಪರ ಪ್ರೀತಿಸಿ ಮದುವೆಯಾಗಬೇಕೆಂದು ಬಯಸಿದ ಪ್ರೇಮಿಗಳು ಪೋಷಕರ ಅಡ್ಡಿಯಾದ ವ್ಯಕ್ತವಾದ ಕಾರಣಕ್ಕೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ನಡೆದಿದೆ.
ಮುನಿರಾಬಾದ್ ಸಮೀಪದ ತುಂಗಭದ್ರಾ ಎಡದಂಡೆ ಕಾಲುವೆಗೆ ಜಿಗಿದು ಪ್ರವೀಣ್ ಕುಮಾರ್ (18), ಸಾಣಾಪುರದ ಅಂಜಲಿ (18) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರೀತಿಗೆ ಕುಟುಂಬಸ್ಥರು ಅಡ್ಡಿಪಡಿಸುತ್ತಾರೆ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.
ಅಂಜಲಿ ಮತ್ತು ಪ್ರವೀಣ್ ಕುಮಾರ್ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಪ್ರವೀಣ್ ಮತ್ತು ಅಂಜಲಿ ಎರಡು ದಿನಗಳ ಹಿಂದೆ ಮನೆ ಬಿಟ್ಟು ಬೇರೆಡೆ ಹೋಗಿದ್ದರು. ಪೋಷಕರು ಮದುವೆ ಮಾಡುವುದಾಗಿ ಹೇಳಿದ ಹಿನ್ನೆಲೆ ವಾಪಸ್ ಬಂದಿದ್ದರು. ಆದರೆ, ಮನೆಯವರು ಏನಾದರು ಮಾಡುತ್ತಾರೆ ಎಂದು ತಿಳಿದು ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇನ್ನಷ್ಟೇ ಖಚಿತ ಮಾಹಿತಿ ತಿಳಿದು ಬರಬೇಕಿದೆ. ಮುನಿರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ : ಕಲಬುರಗಿ | ವಸತಿ ಶಾಲೆಗೆ ಸೇರಿಸಿದಕ್ಕೆ 7ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!