ತುಮಕೂರು ಔಟರ್ ರಿಂಗ್ ರಸ್ತೆ ನಿರ್ಮಾಣಕ್ಕೆ ರೈತರ ವಿರೋಧ ವ್ಯಕ್ತವಾಗಿದೆ. ಪೊಲೀಸ್ ಭದ್ರತೆಯಲ್ಲಿ ಸರ್ವೆಗೆ ಬಂದ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದೆ. ನಾವು ಯಾವುದೇ ಕಾರಣಕ್ಕೂ ಸರ್ವೆ ಮಾಡಲು ಬಿಡಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.
ನೂರಾರು ರೈತರಿಂದ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ತುಮಕೂರು ತಾಲೂಕಿನ ಭೈರಸಂದ್ರ ಗ್ರಾಮದಲ್ಲಿ ನಡೆದಿದೆ. ತುಮಕೂರು ಹೊರವಲಯದ ನಂದಿಹಳ್ಳಿಯಿಂದ ಮಲ್ಲಸಂದ್ರವರೆಗೆ ಅನುಮೋದನೆಯಾಗಿರೋ ಔಟರ್ ರಿಂಗ್ ರಸ್ತೆ ಒಟ್ಟು 44 ಕಿಲೋಮೀಟರ್ ಉದ್ದ ರಸ್ತೆಯಾಗಿದೆ. ಸುಮಾರು 24 ಹಳ್ಳಿಗಳ ಮೇಲೆ ಹಾದುಹೋಗುವ ರಸ್ತೆಯಾಗಿದೆ.

ಈಗಾಗಲೇ ಕೆಲವು ಗ್ರಾಮದಲ್ಲಿ ಸರ್ವೆ ನಡೆಸಿ ಅಧಿಕಾರಿಗಳು ಅಳತೆ ಕಲ್ಲು ಹಾಕಿದ್ದಾ. ಬೈರಸಂದ್ರ ಗ್ರಾಮದಲ್ಲಿ ಅಳತೆ ಕಲ್ಲು ಹಾಕಲು ಬಂದಾಗ ರೈತರ ವಿರೋಧ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳನ್ನು ತಡೆದು ಪ್ರತಿಭಟಿಸಿದ್ದಾರೆ. ಕಾನೂನು ರೀತಿ ಅಳತೆ ಮಾಡಿ ಕಲ್ಲು ನಡೆತ್ತೇವೆ ಎಂದು ಅಧಿಕಾರಿಗಳು ಪಟ್ಟು ಹಿಡಿದರು. ಅಧಿಕಾರಿಗಳ ಬಳಿ ಕಾಲಾವಕಾಶಕೊಡಿ ಮಾತನಾಡ್ತೀವಿ ಎಂದು ರೈತರ ಒತ್ತಾಯಿಸಿದರು.
ನಕಾಶೆಯಲ್ಲಿರುವ 100 ಅಡಿ ರಸ್ತೆನ್ನೇ ಅಭಿವೃದ್ಧಿ ಪಡಿಸಿ ಎಂದು ರೈತರು ಒತ್ತಾಯಿಸಿದ್ದಾರೆ. ಗುಬ್ಬಿಯಿಂದ ದಾಬಸ್ ಪೇಟೆವರೆಗೂ ಈಗಾಗಲೇ ನಕಾಶೆಯಲ್ಲಿರುವ ರಸ್ತೆಯನ್ನೇ ಅಭಿವೃದ್ಧಿ ಪಡಿಸಬೇಕು. ಅದರೆ ಖಾಸಗಿಯವರಿಗೆ ಅನುಕೂಲ ಮಾಡಲು ಈ ರಸ್ತೆ ನಿರ್ಮಾಣ ಮಾಡ್ತಿದ್ದಾರೆ ಎಂದು ರೈತರು ಆರೋಪಿಸಿದರು