ಮಂದಕೃಷ್ಣ ಮಾದಿಗರು ಮಾದಿಗ ಸಮುದಾಯದ ಸಾಮಾಜಿಕ ನ್ಯಾಯ, ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗಾಗಿ ದೀರ್ಘ ಕಾಲದಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ನಾಯಕತ್ವ ನಮ್ಮೆಲ್ಲರಿಗೂ ದಿಕ್ಕು ತೋರಿಸುತ್ತಿದೆ, ಅವರ ಹುಟ್ಟು ಹಬ್ಬದ ಅಂಗವಾಗಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿರುವುದು ನಮಗೆ ತೃಪ್ತಿ ತಂದಿದೆ ಎಂದು ಎಂಆರ್‌ಪಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜೆ ಎಂ ದೇವರಾಜ್ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮಾದಿಗ ದಂಡೋರ ಸಂಘಟನೆಯ ಪದಾಧಿಕಾರಿಗಳು, ವಿವಿಧ ದಲಿತ ಸಂಘಟನೆಗಳ ಸದಸ್ಯರು ಸೇರಿ ನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಹಾಗೂ ಕೂಲಿಕಾರ್ಮಿಕರಿಗೆ ಅನ್ನದಾನ ಮಾಡುವ ಮೂಲಕ ಮಾದಿಗ ಸಮುದಾಯ ಹಕ್ಕುಗಳ ಹೋರಾಟಗಾರ ಮಂದಕೃಷ್ಣ ಮಾದಿಗ ಅವರ 60ನೇ ಹುಟ್ಟುಹಬ್ಬವನ್ನು ಆಚರಿಸಿ ಮಾತನಾಡಿದರು.
“80ರ ದಶಕದಲ್ಲಿ ತಮ್ಮ ಜಾತಿ ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದ ಮಾದಿಗ ಜನಾಂಗ, ಮಂದಕೃಷ್ಣ ಮಾದಿಗ ಅವರ ಹೋರಾಟದ ಫಲವಾಗಿ ಇಂದು ಧೈರ್ಯದಿಂದ ತಮ್ಮದು ಮಾದಿಗ ಜಾತಿಯೆಂದು ಎದೆ ತಟ್ಟಿಕೊಂಡು ಹೇಳುವಂತಾಗಿದೆ” ಎಂದು ಹೇಳಿದರು.
ಸಂಘಟಕರಾದ ನಾಗನರಸಿಂಹ ಮಾತನಾಡಿ, “ಮಂದಕೃಷ್ಣ ಮಾದಿಗ ಅವರು, ಮಾದಿಗ ಸಮುದಾಯದ ಒಳಗಿನ ಎಬಿಸಿಡಿ ವರ್ಗೀಕರಣವನ್ನು ರಾಷ್ಟ್ರ ಮಟ್ಟದಲ್ಲಿ ಪ್ರಸ್ತಾಪಿಸಿ, ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕೆಂಬ ಆಲೋಚನೆಯಿಂದ ಒಳಮಿಸಿಲಾತಿಯ ಹೋರಾಟಕ್ಕಾಗಿ ಇಡೀ ಜೀವನವನ್ನೇ ತ್ಯಾಗ ಮಾಡಿದರು. ಅಂಥವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೊರಟಗೆರೆ | ಸಮಾಜಕ್ಕೆ ದುಡಿಯುವವರಿಗೆ ರೋಟರಿ ಸಂಸ್ಥೆ ಅತ್ಯುತ್ತಮ ವೇದಿಕೆ: ವೀರಭದ್ರ ಶಿವಾಚಾರ್ಯ ಸ್ವಾಮೀಜಿ
“ಮಂದಕೃಷ್ಣ ಮಾದಿಗ ಅವರು ಅಂಗವಿಕಲರು ಮತ್ತು ಮಕ್ಕಳ ಹಕ್ಕುಗಳನ್ನು ಕಾಪಾಡುವ ಕೆಲಸಗಳನ್ನು ಧೈರ್ಯದಿಂದ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನೂ ಪ್ರದಾನಿಸಿದೆ. ಇದು ಮಾದಿಗ ಸಮುದಾಯಕ್ಕೆ ಹೆಮ್ಮೆ ತಂದಿದೆ” ಎಂದು ಹೇಳಿದರು.
ಕೆ.ನರಸಿಂಹಮೂರ್ತಿ, ಡಿ ಕೃಷ್ಣಪ್ಪ, ತಾತಳ್ಳಿ ಚಲಪತಿ, ಕೆ ನಾರಾಯಣಸ್ವಾಮಿ, ಮಂಜುನಾಥ್ ಅಲಸೂರು, ಭಕ್ತರಹಳ್ಳಿ ಡಾ. ವಿಶ್ವನಾಥ್, ಚನ್ನಹಳ್ಳಿ ದೇವರಾಜ್, ಲೋಕೇಶ್, ವೇಣುಗೋಪಾಲ್, ಗೋಕುಲ್, ನರಸಿಂಹಪ್ಪ, ನಾರಾಯಣಸ್ವಾಮಿ, ಪ್ರಕಾಶ್, ಅಶೋಕ್, ಡಾ.ಶಾಮ್ ರಾಜ್, ಗುರುಮೂರ್ತಿ, ರವಿಶಂಕರ್, ಚನ್ನಕೇಶವ,ವಸಂತ್, ಸುಲದೇನಹಳ್ಳಿ ವೆಂಕಟರಾಯಪ್ಪ ಹಾಗೂ ದಲಿತ ಮುಖಂಡರು ಇದ್ದರು.