ಶಿಡ್ಲಘಟ್ಟ | ʼಮಂದಕೃಷ್ಣ ಮಾದಿಗʼರ 60ನೇ ಹುಟ್ಟುಹಬ್ಬ; ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Date:

ಮಂದಕೃಷ್ಣ ಮಾದಿಗರು ಮಾದಿಗ ಸಮುದಾಯದ ಸಾಮಾಜಿಕ ನ್ಯಾಯ, ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗಾಗಿ ದೀರ್ಘ ಕಾಲದಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ನಾಯಕತ್ವ ನಮ್ಮೆಲ್ಲರಿಗೂ ದಿಕ್ಕು ತೋರಿಸುತ್ತಿದೆ, ಅವರ ಹುಟ್ಟು ಹಬ್ಬದ ಅಂಗವಾಗಿ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿರುವುದು ನಮಗೆ ತೃಪ್ತಿ ತಂದಿದೆ ಎಂದು ಎಂಆರ್‌ಪಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜೆ ಎಂ ದೇವರಾಜ್ ಹೇಳಿದರು.

- Advertisement -

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮಾದಿಗ ದಂಡೋರ ಸಂಘಟನೆಯ ಪದಾಧಿಕಾರಿಗಳು, ವಿವಿಧ ದಲಿತ ಸಂಘಟನೆಗಳ ಸದಸ್ಯರು ಸೇರಿ ನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಹಾಗೂ ಕೂಲಿಕಾರ್ಮಿಕರಿಗೆ ಅನ್ನದಾನ ಮಾಡುವ ಮೂಲಕ ಮಾದಿಗ ಸಮುದಾಯ ಹಕ್ಕುಗಳ ಹೋರಾಟಗಾರ ಮಂದಕೃಷ್ಣ ಮಾದಿಗ ಅವರ 60ನೇ ಹುಟ್ಟುಹಬ್ಬವನ್ನು ಆಚರಿಸಿ ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....

ಬಳ್ಳಾರಿ ಚಲೋ | ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಪಾದಯಾತ್ರೆ:...

ಬಳ್ಳಾರಿ ಚಲೋ ಒಂದೆಡೆ ಎಸ್‌ಟಿ ಮತಗಳನ್ನು ಮರಳಿ ಸೆಳೆಯಲು ಶ್ರೀರಾಮುಲು ಅವರನ್ನು ಮುನ್ನಲೆಗೆ ತರುವ ಬಿಜೆಪಿ ತಂತ್ರವಾದರೆ, ಮತ್ತೊಂದೆಡೆ ವಿಜಯೇಂದ್ರ ನಾಯಕತ್ವದ ಶಕ್ತಿ ಪ್ರದರ್ಶನ ಮತ್ತು ಮೈತ್ರಿ ಪಕ್ಷ ಜೆಡಿಎಸ್‌ ಪಾದಯಾತ್ರೆಗೆ ಗೈರಾಗಿರುವಂತಹ...

AI ಕ್ರಾಂತಿಯ ಕರಾಳ ಮುಖ: ಯುವಜನರ ಆಲೋಚನಾ, ಚಿಂತನಾ...

ಕೃತಕ ಬುದ್ಧಿಮತ್ತೆಯ (ಎಐ) ಸಿದ್ಧ ಉತ್ತರವೇ ಇಂದಿನ ಯುವಜನರಿಗೆ ತೃಪ್ತ. ಇದರಿಂದಾಗಿ ಆಳವಾದ ಅಧ್ಯಯನಕ್ಕೆ ಬಿದ್ದಿದೆ ಕತ್ತರಿ. ತಂತ್ರಜ್ಞಾನದಿಂದ ನಮಗೆ ಹಲವು ಅನುಕೂಲವಿದೆ ಎಂಬುದು ಸ್ಫುಟ. ಆದರೆ ಅನುಕೂಲವನ್ನು ಸ್ವೀಕರಿಸುವ ಜತೆಗೆ, ಅದರಿಂದಾಗುವ...

“80ರ ದಶಕದಲ್ಲಿ ತಮ್ಮ ಜಾತಿ ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದ ಮಾದಿಗ ಜನಾಂಗ, ಮಂದಕೃಷ್ಣ ಮಾದಿಗ ಅವರ ಹೋರಾಟದ ಫಲವಾಗಿ ಇಂದು ಧೈರ್ಯದಿಂದ ತಮ್ಮದು ಮಾದಿಗ ಜಾತಿಯೆಂದು ಎದೆ ತಟ್ಟಿಕೊಂಡು ಹೇಳುವಂತಾಗಿದೆ” ಎಂದು ಹೇಳಿದರು.

ಸಂಘಟಕರಾದ ನಾಗನರಸಿಂಹ ಮಾತನಾಡಿ, “ಮಂದಕೃಷ್ಣ ಮಾದಿಗ ಅವರು, ಮಾದಿಗ ಸಮುದಾಯದ ಒಳಗಿನ ಎಬಿಸಿಡಿ ವರ್ಗೀಕರಣವನ್ನು ರಾಷ್ಟ್ರ ಮಟ್ಟದಲ್ಲಿ ಪ್ರಸ್ತಾಪಿಸಿ, ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕೆಂಬ ಆಲೋಚನೆಯಿಂದ ಒಳಮಿಸಿಲಾತಿಯ ಹೋರಾಟಕ್ಕಾಗಿ ಇಡೀ ಜೀವನವನ್ನೇ ತ್ಯಾಗ ಮಾಡಿದರು. ಅಂಥವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಕೊರಟಗೆರೆ | ಸಮಾಜಕ್ಕೆ ದುಡಿಯುವವರಿಗೆ ರೋಟರಿ ಸಂಸ್ಥೆ ಅತ್ಯುತ್ತಮ ವೇದಿಕೆ: ವೀರಭದ್ರ ಶಿವಾಚಾರ್ಯ ಸ್ವಾಮೀಜಿ

“ಮಂದಕೃಷ್ಣ ಮಾದಿಗ ಅವರು ಅಂಗವಿಕಲರು ಮತ್ತು ಮಕ್ಕಳ ಹಕ್ಕುಗಳನ್ನು ಕಾಪಾಡುವ ಕೆಲಸಗಳನ್ನು ಧೈರ್ಯದಿಂದ ಮಾಡಿದ್ದಾರೆ. ಇತ್ತೀಚೆಗಷ್ಟೇ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನೂ ಪ್ರದಾನಿಸಿದೆ. ಇದು ಮಾದಿಗ ಸಮುದಾಯಕ್ಕೆ ಹೆಮ್ಮೆ ತಂದಿದೆ” ಎಂದು ಹೇಳಿದರು.

ಕೆ.ನರಸಿಂಹಮೂರ್ತಿ, ಡಿ ಕೃಷ್ಣಪ್ಪ, ತಾತಳ್ಳಿ ಚಲಪತಿ, ಕೆ ನಾರಾಯಣಸ್ವಾಮಿ, ಮಂಜುನಾಥ್ ಅಲಸೂರು, ಭಕ್ತರಹಳ್ಳಿ ಡಾ. ವಿಶ್ವನಾಥ್, ಚನ್ನಹಳ್ಳಿ ದೇವರಾಜ್, ಲೋಕೇಶ್, ವೇಣುಗೋಪಾಲ್, ಗೋಕುಲ್, ನರಸಿಂಹಪ್ಪ, ನಾರಾಯಣಸ್ವಾಮಿ, ಪ್ರಕಾಶ್, ಅಶೋಕ್, ಡಾ.ಶಾಮ್ ರಾಜ್, ಗುರುಮೂರ್ತಿ, ರವಿಶಂಕರ್, ಚನ್ನಕೇಶವ,ವಸಂತ್, ಸುಲದೇನಹಳ್ಳಿ ವೆಂಕಟರಾಯಪ್ಪ ಹಾಗೂ ದಲಿತ ಮುಖಂಡರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

​ಚಿಂತಾಮಣಿ | ಮಳೆ ಮುನ್ಸೂಚನೆ, ಕಲ್ಯಾಣ ಮಂಟಪದ ಅಭಾವ:ಸೆ.18ರ ಜೆಡಿಎಸ್ ಬೃಹತ್ ಸಮಾವೇಶ ಚಿಂತಾಮಣಿಗೆ ಸ್ಥಳಾಂತರ

ನಗರದ ಹೊರವಲಯದ ಜೆ.ಕೆ.ಭವನದಲ್ಲಿ ಇಂದು ತುರ್ತು ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ...

ಉಡುಪಿ | ಕಸ್ತೂರಿರಂಗನ್ ವರದಿ: ಸೆ.18ರಂದು ಹೆಬ್ರಿಯಲ್ಲಿ ಗ್ರಾಮಸ್ಥರೊಂದಿಗೆ ಸಿಎಂ ಡಿಕೆಶಿ ಸಂವಾದ

ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ಸಾಧಕ-ಬಾಧಕಗಳ ಕುರಿತು ಜಿಲ್ಲೆಯ ಗ್ರಾಮಸ್ಥರ ಅಭಿಪ್ರಾಯ ಹಾಗೂ...

ರಾಯಚೂರು | ಯುರೋಪಿನ ಫ್ಯಾಸಿಸಂಗಿಂತ ಭಾರತದ ಫ್ಯಾಸಿಸಂ ವಿಭಿನ್ನ: ಪಿಜೆ ಜೇಮ್ಸ್

ಯುರೋಪಿನ ಫ್ಯಾಸಿಸಂಗಿಂತ ಭಾರತದ ಫ್ಯಾಸಿಸಂ ವಿಭಿನ್ನ ಸ್ವರೂಪ ಹೊಂದಿದ್ದು, ಮುಸ್ಲಿಂ ವಿರೋಧಿ...

ಉಡುಪಿ | ಆಲೂರು ಕೊರಗರ ಭೂಮಿ ಸಮಸ್ಯೆ ಬಗೆಹರಿಸಲು ಕ್ರಮ: ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಭರವಸೆ

ಕುಂದಾಪುರ ತಾಲೂಕಿನ ಆಲೂರು ಮತ್ತು ಹರ್ಕೂರು ಗ್ರಾಮದ ಕೊರಗ ಕುಟುಂಬಗಳ ಭೂಮಿ...