(ಮುಂದುವರಿದ ಭಾಗ..) ಕಮ್ಯುನಿಸ್ಟರ ಸಾಧನಗಳು: ಅಂಬೇಡ್ಕರ್ ತಿಳಿಸುವಂತೆ ಸಮಸಮಾಜ ಅಥವಾ ಕಮ್ಯುನಿಸಂ ಸ್ಥಾಪನೆಗೆ ಕಮ್ಯುನಿಸ್ಟರು ಪ್ರತಿಪಾದಿಸಿದ ಸಾಧನಗಳು ಎರಡು: 1. ಹಿಂಸಾಚಾರ 2. ಶ್ರಮಿಕರ ಸರ್ವಾಧಿಕಾರ. ಅಂಬೇಡ್ಕರ್ ಅವರು ತಿಳಿಸುವಂತೆ ʻಕಮ್ಯುನಿಸಂ ಸ್ಥಾಪಿಸಲು ಇರುವುದು ಇವೆರಡೇ ಸಾಧನಗಳೆಂದು ಕಮ್ಯುನಿಸ್ಟರು ಹೇಳುತ್ತಾರೆ. ಮೊದಲನೆಯದು ಹಿಂಸಾಚಾರ. ಇದನ್ನು ಬಿಟ್ಟರೆ ಪ್ರಸ್ತುತ ವ್ಯವಸ್ಥೆಯನ್ನು ವಿಘಟಿಸಲು ಬೇರಾವುದೂ ಸಾಲದು. ಎರಡನೆಯದು ಶ್ರಮಿಕರ ಸರ್ವಾಧಿಕಾರ. ಇದನ್ನು ಬಿಟ್ಟರೆ ಬೇರಾವುದರಿಂದಲೂ ಹೊಸ ವ್ಯವಸ್ಥೆಯನ್ನು ಮುಂದುವರೆಸಲು ಸಾಧ್ಯವಿಲ್ಲ.ʼ ಹಾಗಾಗಿ ಅಂಬೇಡ್ಕರ್ ಒಂದು ತೀರ್ಮಾನಕ್ಕೆ ಬರುತ್ತಾರೆ. ಅದೇನೆಂದರೆ, ʻಕಾರ್ಲ್…

ವಿಕಾಸ್ ಆರ್ ಮೌರ್ಯ
ಕನ್ನಡದಲ್ಲಿ ದಲಿತ ಸೈದ್ಧಾಂತಿಕ ಪ್ರಜ್ಞೆಯನ್ನು ಬರಹ ಮತ್ತು ಹೋರಾಟದ ಮೂಲಕ ವಿಸ್ತರಿಸುತ್ತಿರುವವರು ವಿಕಾಸ್ ಆರ್ ಮೌರ್ಯ. ‘ಚಮ್ಮಟಿಕೆ’, 'ಕಪ್ಪು ಕುಲುಮೆ', 'ನೀಲವ್ವ', 'ಸಾವಿತ್ರಿ ಬಾಯಿ ಫುಲೆ ಮತ್ತು ನಾನು', 'ಅಂಬೇಡ್ಕರ್ ಜಗತ್ತು' ಪ್ರಕಟಿತ ಕೃತಿಗಳು