ಎಸ್ಎಫ್ಐ ಹಾಗೂ ಡಿವೈಎಫ್‌ಐ ಸಂಘಟನೆಗಳ ಹಲವು ವರ್ಷಗಳ ಹೋರಾ ಫಲಿಸಿದೆ. ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಗ್ರಾಮದಲ್ಲಿ 2025-26ನೇ ಸಾಲಿಗೆ ಪ್ರಥಮ ಪಿಯುಸಿಗೆ ಕಲಾ ಮತ್ತು ವಾಣಿಜ್ಯ ವಿಭಾಗಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ. ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದುಕೊಳ್ಳಲು ಎಸ್‌ಎಫ್ಐ ಮನವಿ ಮಾಡಿದೆ.
ತೋರಣಗಲ್ಲು ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಬೇಕೆಂದು ಹಲವು ವರ್ಷಗಳಿಂದ ಎಸ್‌ಎಫ್‌ಐ ಹಾಗೂ ಡಿವಾಯ್‌ಎಫ್ಐ ಹೋರಾಟ, ಪ್ರತಿಭಟನೆಯ ಮೂಲಕ ಶಾಸಕರು ಹಾಗೂ ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದವು. ಅದರ ಭಾಗವಾಗಿ ಗ್ರಾಮಕ್ಕೆ ಪದವಿ ಪೂರ್ವ ಕಾಲೇಜು ಮಂಜೂರು ಮಾಡಲಾಗಿದೆ.
ಗ್ರಾಮೀಣ ಪ್ರದೇಶದ ಪೋಷಕರು ಕಾಲೇಜು ದೂರ ಇರುವ ಕಾರಣದಿಂದ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ಇದರಿಂದ ಎಷ್ಟೋ ವಿದ್ಯಾರ್ಥಿಗಳು ಪದವಿ ವ್ಯಾಸಂಗದಿಂದ ವಂಚಿತರಾಗಿದ್ದರು. ತೋರಣಗಲ್ಲಿನಲ್ಲಿ ಪದವಿ ಕಾಲೇಜು ಆರಂಭವಾಗಿದ್ದರಿಂದ ವಿಶೇಷವಾಗಿ ಹೆಣ್ಮಕ್ಕಳಿಗೆ ಅನುಕೂಲವಾಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕವಿಲ್ಲದೆ ಪ್ರವೇಶಾತಿ ಪಡೆಯಲು ಮುಂದಾಗಬೇಕು” ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆ ಮನವಿ ಮಾಡಿದೆ.
ಇದನ್ನೂ ಓದಿ: ಬಳ್ಳಾರಿ | ಅಸಂಘಟಿತ ಚಾಲಕರಿಗೆ ಭದ್ರತಾ ಯೋಜನೆ ಜಾರಿಗೊಳಿಸಲು ಹುಂಡೇಕರ್ ರಾಜೇಶ್ ಆಗ್ರಹ
ಕಾಲೇಜು ಮಂಜೂರ ಮಾಡಿಸುವ ಹೋರಾಟದಲ್ಲಿ ಭಾಗಿಯಾದ ಎಸ್‌ಎಫ್‌ಐ, ಡಿವೈಎಫ್ಐ ಸಂಘಟನೆಗಳು ಹಾಗೂ ತೋರಣಗಲ್ಲು ಗ್ರಾಮ ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಮಂಜೂರು ಮಾಡಿದ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿವೆ.