ಇತ್ತೀಚೆಗೆ ಹೆರಿಗೆಯಾದ 22 ವರ್ಷದ ಅವಿವಾಹಿತ ಮಹಿಳೆಯೊಬ್ಬರು ತಮ್ಮ ಮಗುವನ್ನು 50,000 ರೂಪಾಯಿಗೆ ಮಾರಾಟ ಮಾಡಿದ ಘಟನೆ ಅಸ್ಸಾಂನ ಶಿವಸಾಗರ್ ಸಿವಿಲ್ ಆಸ್ಪತ್ರೆಯಲ್ಲಿ ನಡೆದಿದೆ. ಈ ಕೃತ್ಯದಲ್ಲಿ ಆಶಾ ಕಾರ್ಯಕರ್ತರೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ನವಜಾತ ಶಿಶುವನ್ನು ಮಾರಾಟ ಮಾಡದಂತೆ ಮಹಿಳೆ ಮತ್ತು ಆಕೆಯ ತಾಯಿಯ ಮನವೊಲಿಸಲು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಆಸ್ಪತ್ರೆಗೆ ಹೋಗಿದ್ದು, ಆಗಾಗಲೇ ಮಗುವನ್ನು ಮಾರಾಟ ಮಾಡಿರುವುದು ತಿಳಿದುಬಂದಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಮೂರು ವರ್ಷದ ಮಗುವಿನ ಮೇಲೆ ಬಿಸಿ ‘ಟೀ’ ಎರಚಿ ಕ್ರೌರ್ಯ ಮೆರೆದ ಅಜ್ಜ; ಬಂಧನ
ಅಸ್ಸಾಂನ ಚರೈಡಿಯೋ ಜಿಲ್ಲೆಯ ಸಪೇಖಾಟಿಯ ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಮಾರಾಟ ಮಾಡಲಾಗಿದ್ದು, ಅವರಿಂದ ಮಗುವನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈವರೆಗೆ ಐವರನ್ನು ಬಂಧಿಸಿದ್ದಾರೆ.
ಹೆಚ್ಚಿನ ತನಿಖೆ ವೇಳೆ ನವಜಾತ ಶಿಶು ಮಾರಾಟದಲ್ಲಿ ಶಿವಸಾಗರ್‌ನಲ್ಲಿ ಆಶಾ ಕಾರ್ಯಕರ್ತರೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಈ ಆಶಾ ಕಾರ್ಯಕರ್ತರು ಈ ಹಿಂದೆಯೂ ಇದೇ ರೀತಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಸಂಬಂಧ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿವಸಾಗರ್ ಶಿವಸಾಗರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದೆ. ಪೊಲೀಸರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ.
